ರಾಯಬಾಗ: ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಕುಮಾರ ಆಜೀಬ ಸಂದರವಾಲೆಯು ಆಂಗ್ಲ ಮಾಧ್ಯಮ ಹತ್ತನೆಯ ತರಗತಿಯಲ್ಲಿ 625 ಕ್ಕೆ 607 ಅಂಕ ಪಡೆದು ಶೇ 97.12 ಫಲಿತಾಂಶದೊಂದಿಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಜಿಲ್ಲಾ ಟಾಪರ್ ಸ್ಥಾನ ಪಡೆದಿದ್ದಾನೆ. ಈತನು ಇಂಗ್ಲಿಷ್-124, ಕನ್ನಡ-100, ಹಿಂದಿ-99, ಗಣಿತ- 91, ವಿಜ್ಞಾನ-94, ಸಮಾಜ ವಿಜ್ಞಾನ- 99 ಅಂಕಗಳನ್ನು ಗಳಿಸಿದ್ದಾನೆ.
ಕುಮಾರ ಆಜೀಬನ ಈ ಸಾಧನೆಗೆ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷರಾದ ಶ್ರೀ. ಇಕ್ಬಾಲ್ ಅಹ್ಮದ್ ಸತ್ತಾರ, ಮುಖ್ಯ ಶಿಕ್ಷಕರಾದ ಶ್ರೀ ಸಾದಿಕ್ ಶೇಖ್ ಹಾಗೂ ಶಾಲಾ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





