ಮುಗಳಖೋಡ ಪಟ್ಟಣದಲ್ಲಿ ಅಂಬೇಡ್ಕರ್ ಅವರ 132ನೇ ಜಯಂತಿ ಆಚರಣೆ

Share the Post Now

ವರದಿ ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ

ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಡಾ ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರರವರ 132ನೇ ಜಯಂತೋತ್ಸವವನ್ನು ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ ಪ್ರಕಾಶ ಚ ಕಂಬಾರ ವಹಿಸಿದ್ದರು. ಈ ಸಮಾರಂಭದಲ್ಲಿ ಪ್ರೊ ಆರ್.ಎಸ್.ಶೇಗುಣಸಿ, ಡಾ ಪಿ.ಬಿ.ಕೊರವಿ, ಎಸ್.ಹಿರೇಮಠ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯರಾದ ಎಸ್.ಎಸ್.ಮಧಾಳೆ, ಎಸ್.ಎಂ.ತಮದಡ್ಡಿ ಮುಂತಾದವರು ಭಾಗವಹಿಸಿದ್ದರು.
ಅದರಂತೆ ಅಂಗ ಸಂಸ್ಥೆಗಳಾದ ಬ.ನೀ.ಕುಲಿಗೋಡ ಪ್ರೌಢಶಾಲೆ, ಪಿ.ಯು.ಸಿ ವಿಭಾಗ, ಬಾ.ಸಿ.ಮಠಪತಿ ಪ್ರಾಥಮಿಕ ಶಾಲೆ, ರೈನಬೋ ಸೆಂಟ್ರಲ್ (ಸಿ.ಬಿ.ಎಸ್.ಇ) ಸ್ಕೂಲ್ ಹಾಗೂ ಐ.ಟಿ.ಐ ವಿಭಾಗದಲ್ಲಿ ಸಹ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು.

Leave a Comment

Your email address will not be published. Required fields are marked *

error: Content is protected !!