ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಅಥಣಿ:903ನೇ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನ ಬಸವೇಶ್ವರ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿದ ಆರ್. ಎಂ. ಪಾಟೀಲ , ನಿಜಶರಣ ಅಂಬಿಗರ ಚೌಡಯ್ಯ ವೃತ್ತಿಯಲ್ಲಿ ಅಂಬಿಗ ಆದರೂ ಪ್ರವೃತಿಯಲ್ಲಿ ಶ್ರೇಷ್ಠ ವಚನಕಾರ,12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಕುರಿತು ಅನೇಕ ವಚನ ಹೇಳಿದ್ದಾರೆ.ಇವರ ಮಾರ್ಗದಲ್ಲಿ ನಾವೆಲ್ಲ ನಡೆದರೆ ನಮ್ಮ ಬಾಲಕು ಬಂಗಾರವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ. ಎಸ್. ಆರ್. ಪಾಟೀಲ್ ವಹಿಸಿದ್ದರು.ಮುಖ್ಯೋಪಾಧ್ಯಾಯರಾದ ಮಹಾಂತೇಶ ಹಿರೇಮಠ,ಕುಮಾರಿ. ಶ್ವೇತಾ ವಸ್ತ್ರದ ನಿರೂಪಿಸಿದರು. ಶ್ರೀಮತಿ ವಿನೋದಾ ಬಿರಾದಾರ್ ಪಾಟೀಲ್ ಸ್ವಾಗತಿಸಿದರು.ರಾಜಶ್ರೀ ಐನಾಪುರ ವಂದಿಸಿದರು.ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.