ಬೆಳಗಾವಿ ನಗರದಲ್ಲಿ ಅಂಗನವಾಡಿ ಕಾರ್ಯಕರ್ತರು ಎ.ಟಿ.ಟಿ.ಯು.ಸಿ ಸಂಘಟನೆಯ ಮಹಿಳೆಯರು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಎ.ಟಿ.ಟಿ.ಯು.ಸಿ ಸಂಘಟನೆ ತಾಲೂಕು ಅಧ್ಯಕ್ಷೆ ಗೀತಾ ಬೋಸಲೆ ಅವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ನಾವು ಸರ್ಕಾರದ ಪ್ರತಿಯೊಂದು ಕೆಲಸ ಮತದಾನ ಸರ್ವೆ ಸಿ ಎನ್ ಎ ಸರ್ವೆ ಸೇರಿದಂತೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಎಲ್ಲಾ ಕೆಲಸಗಳನ್ನು ನಿಯತ್ತಿನಿಂದ ನಮ್ಮ ಅಂಗನವಾಡಿ ಕಾರ್ಯಕರ್ತರು ಮಾಡುತ್ತಿದ್ದಾರೆ ನಮಗೆ ಅಧಿಕಾರಿಗಳಿಂದ ಒತ್ತಡವಿದೆ ನಮಗೆ ಸೂಕ್ತವಾದ ಸಂಬಳ ದೊರೆಯಬೇಕಿದೆ ನಾವು ಆನಲೈನಲ್ಲಿ ಕೂಡಾ ಎಲ್ಲ ಸರ್ಕಾರಿ ಕೆಲಸ ಮಾಡಿದ್ದೆವೆ ಎಂದು ಮನವಿ ಮಾಡಿಕೊಂಡರು.
ಎ.ಟಿ.ಟಿ.ಯು.ಸಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷೆ ಐ ಬಿ ಶಿಗಿಹೋಳಿ
ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಹಲವಾರು ವರ್ಷಗಳಿಂದ ವಿವಿಧ ಇಲಾಖೆಗಳಿಂದ ಎಲ್ಲಾ ರೀತಿಯ ಸರ್ವೆ ಮಾಡುತ್ತಾ ಬಂದಿದ್ದೆವೆ ಇ ಸರ್ವೆ ಮಾಡುದರಿಂದ ಅಂಗನವಾಡಿ ಶಾಲಾ ಪೂರ್ವ ಚಟುವಟಿಕೆಗಳು ಕುಂಟಿತವಾಗುತ್ತಿವೆ ಮಕ್ಕಳ ಸಂಖ್ಯೆಯು ಕಡಿಮೆಯಾಗುತ್ತಿದೆ.ಮೇಲಾಧಿರಗಳು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ನಾವೆಲ್ಲರೂ ಬಡ ಅಂಗನವಾಡಿ ಕಾರ್ಯಕರ್ತರು ನಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿವೆ. ಕಮಿಷನರ್ ಅಶೋಕ ಗುಡಗುಂಟಿ ಅವರಿಗೆ ಅಂಗನವಾಡಿ ಕಾರ್ಯಕರ್ತರು ಮನವಿ ಸಲ್ಲಿಸಲು ಹೋದಾಗ ಅವರು ಕೂಡ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ . ಕೆಲವೊಂದು ಅಂಗನವಾಡಿಗಳಿಗೆ ಬೀಗ ಹಾಕಿದ್ದಾರೆ ಇವರ ದಬ್ಬಾಳಿಕೆ ಮುಂದುವರೆದರೆ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ನಮ್ಮ ಗೌರವ ಧನ 10000 ಕೂಡಲೆ ಬಿಡುಗಡೆ ಮಾಡಬೇಕು, ಮಕ್ಕಳಿಗೆ ಪೌಷ್ಟಿಕಯುಕ್ತ ಅಡುಗೆ ನಮ್ಮ ಕೈಯಾರೆ ದುಡ್ಡು ಹಾಕಿ ಪೂರೈಹಿದ್ದೆವೆ ನಿಷ್ಟೆಯಿಂದ ಕೆಲಸ ಮಾಡುವ ನಮ್ಮಂತ ಸಾವಿರಾರು ಬಡ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಿಲ್ಲಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು




