ಹೊಲಿಗೆ ಯಂತ್ರ ವಿತರಣೆಗಾಗಿ ಮಹಿಳೆಯರಿಂದ ಅರ್ಜಿ ಆಹ್ವಾನ

Share the Post Now

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2022-2023ನೇಅನುಷ್ಠಾನಗೊಳ್ಳುತ್ತಿರುವ ಹೊಲಿಗೆಯಂತ್ರಗಳನ್ನು ವಿತರಿಸಲು ಹಿಂದುಳಿದ ವರ್ಗಗಳ ಬಡ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಪ್ರ ವರ್ಗ,1 2ಎ 3ಎ ಮತ್ತು 3ಬಿ ಸೇರಿದ ಬಡ ಬಡ ಮಹಿಳೆಯರಿಂದ ಸ್ವ ಉದ್ಯೋಗ ಕೈಗೊಳ್ಳಲು ಹೊಲಿಗೆ ಯಂತ್ರ ವಿತರಿಸುವ ಸಲುವಾಗಿ ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ

ಯಾವ ಜಾತಿಯವರು ಅರ್ಜಿ ಸಲ್ಲಿಸಬಹುದು :

ಉಪ್ಪಾರ ಅಂಬಿಗರ ವಿಶ್ವಕರ್ಮ ಮಡಿವಾಳ ಸವಿತಾ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ ಒಕ್ಕಲಿಗ ಲಿಂಗಾಯಿತ ಕಾಡುಗೊಲ್ಲ.ಹಟ್ಟಿಗೊಲ್ಲ ಮರಾಠ ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ ಅರ್ಜಿಗಳನ್ನು ಸಲ್ಲಿಸಬಹುದು

ಆದಾಯ : ಕುಟುಂಬದ ವಾರ್ಷಿಕ ಆದಾಯ ಪಟ್ಟಣ ಪ್ರದೇಶದವರಿಗೆ ರೂ ಒಂದು ಲಕ್ಷ ಇಪ್ಪತ್ತು ಸಾವಿರ ಗಳ ಒಳಗಿರಬೇಕು, ಗ್ರಾಮೀಣ ಪ್ರದೇಶದವರಿಗೆ 98ಸಾವಿರ ಗಳ ರೂ ಒಳಗಿರಬೇಕು

ವಯಸ್ಸು :18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು

ಅರ್ಹ ಪಲಾನುಭವಿಗಳು ಅಗತ್ಯ ದಾಖಲಾತಿ ಸಮೇತ ಸೌಲಭ್ಯ ಪಡೆಯಲು ಇಚ್ಚಿಸುವರು ಹಿಂದುಳಿದ ವರ್ಗಗಳ ಮಹಿಳೆಯರು ಸೇವಾ ಸಿಂಧು ಪೋರ್ಟಲ್, ಗ್ರಾಮಒನ್,ಕರ್ನಾಟಕ ಸೇವಾ, ಬೆಂಗಳೂರು ಒನ್, ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಜನವರಿ 20.2.2023ರ ಒಳಗಾಗಿ ಅರ್ಜುಗಳನ್ನು ಸಲ್ಲಿಸಬಹುದು

ಹೆಚ್ಚಿನ ಮಾಹಿತಿಗಾಗಿ ನಿಗಮನ ವೆಬ್ಸೈಟ್ https://dbcdc.karnataka.gov.in/ ಮಾಹಿತಿಯನ್ನು ಪಡೆಯಬಹುದು ಅಥವಾ ನಿಗಮದ ಸಹಾಯವಾಣಿ ಸಂಖ್ಯೆ 08022374832 ಇಲ್ಲಿ ಸಂಪರ್ಕಿಸಬಹುದು ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು

Leave a Comment

Your email address will not be published. Required fields are marked *

error: Content is protected !!