ಬೆಳಗಾವಿ
ರಾಯಬಾಗ: ರಾಯಬಾಗ ಪಟ್ಟಣದ ಹೆಸರಾಂತ ಚಿತ್ರಕಲಾವಿದೆಯರು ಹಾಗೂ ಆದರ್ಶ ಶಿಕ್ಷಕಿಯರಾದ ಶ್ರೀಮತಿ ಆಶಾರಾಣಿ ಬಾಬುರಾವ ನಡೋಣಿ ಅವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ನೂತನ ಸದಸ್ಯರಾಗಿ ನೇಮಕವಾಗಿದ್ದಾರೆ. ಚಿಕಣಿ ಕಲೆಯಲ್ಲಿಯೇ ವಿಶೇಷ ಸಾಧನೆ ಮಾಡಿ ವಿಖ್ಯಾತರಾದ ಶ್ರೀಮತಿ ಆಶಾರಾಣಿ ನಡೋಣಿ ಅವರು ಅಂತರಾಷ್ಟ್ರೀಯ ಕಲಾವಿದರಾದ ಡಾ.ಬಾಬುರಾವ ನಡೋಣಿ ಅವರ ಧರ್ಮಪತ್ನಿಯಾಗಿದ್ದಾರೆ.
ಲಲಿತ ಕಲಾ ಅಕಾಡೆಮಿಯ ನೂತನ ಸದಸ್ಯರಾಗಿ ನೇಮಕರಾಗುವ ಮೂಲಕ ಬಾಗೆನಾಡಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ ಶ್ರೀಮತಿ ಆಶಾರಾಣಿ ಬಾಬುರಾವ ನಡೋಣಿ ಅವರನ್ನು ಮಕ್ಕಳ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು, ಕನ್ನಡ ಪ್ರಾಧ್ಯಾಪಕರು, ಸಾಹಿತಿ ಡಾ.ಜಯವೀರ ಎ.ಕೆ.ಅಧ್ಯಕ್ಷ ಕು.ಅಮರ ಎನ್ ಕಾಂಬಳೆ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎಂ.ಪಾಟೀಲ, ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಹಿರಿಯ ಕವಿ ಶಿವಾನಂದ ಬೆಳಕೂಡ, ಅಧ್ಯಕ್ಷ ಶ್ರೀಶೈಲ ಶಿರೂರ, ತಾಲ್ಲೂಕು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಎಸ್.ವಂಟಗೂಡಿ, ಹಿರಿಯ ಸಾಹಿತಿಗಳಾದ ಡಾ.ವಿ.ಎಸ್.ಮಾಳಿ,ಬಿ.ಎ.ಜಂಬಗಿ, ಮಕ್ಕಳ ಸಾಹಿತಿ ಡಾ.ಎಲ್.ಎಸ್.ಚೌರಿ,ಮಹಿಳಾ ಕವಿಯಿತ್ರಿಯರಾದ ಡಾ.ರತ್ನಮ್ಮ ಬಾಳಪ್ಪನವರ,ಶ್ರೀಮತಿ ಲತಾ ಹುದ್ದಾರ ಉದಯೋನ್ಮುಖ ಚುಟುಕು ಕವಿಗಳಾದ ಪ್ರೊ.ಎಲ್.ಎಸ್.ವಂಟಮೂರೆ, ಜ್ಯೋತಿ ರುಪ್ಪಾಳೆ ಶಿಕ್ಷಕ ಸಾಹಿತಿ ಸುಖದೇವ ಕಾಂಬಳೆ,ಡಾ.ವಿಲಾಸ ಕಾಂಬಳೆ ಹಾಗೂ ತಾಲ್ಲೂಕಿನ ಸಮಸ್ತ ಹಿರಿಯ ಕಿರಿಯ ಕಲಾವಿದರು ಶಿಕ್ಷಕರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*