ಬೆಳಗಾವಿ. ರಾಯಬಾಗ
🖊️kareppa s kamble
ಹಾರೂಗೇರಿಯ ತಮ್ಮ ಕಾರ್ಯಾಲದಲ್ಲಿ ಮಾಜಿ ಸೈನಿಕ ಶ್ರೀಶೈಲ್ ಭಜಂತ್ರಿ ಸುದ್ದಿಗೋಷ್ಠಿ
ಬೆಳಗಾವಿ :ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದಲ್ಲಿ ಮಾಜಿ ಸೈನಿಕರಾದ ಶ್ರೀಶೈಲ್ ಭಜಂತ್ರಿ ಅವರು ತಮ್ಮ ಕಾರ್ಯಾಲದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕುಡಚಿ ವಿಧಾನ ಸಭಾ ಕ್ಷೇತ್ರದ ನಾನು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವೆ.
ನಾನು 3 ವರ್ಷಗಳ ಕಾಲ ಕುಡಚಿ ವಿಧಾನಸಭಾ ಕ್ಷೇತ್ರಾದ್ಯಂತ ಸುತ್ತಾಡಿ ಎಲ್ಲ ಧರ್ಮ, ಜಾತಿ, ಮೇಲು ಕೀಳು ಎನ್ನದೇ ಎಲ್ಲ ವರ್ಗದವರನ್ನು ಭೇಟಿ ಮಾಡಿ ಅವರ ಪ್ರೀತಿ ವಿಶ್ವಾಸ ಗಳಿಸಿರುವೆ
ಬರುವ ಸೋಮವಾರ ಏ.3 ರಂದು ಬೆಳೆಗ್ಗೆ 11ಗಂಟೆಗೆ ಕಲ್ಯಾಣ ಪ್ರಗತಿ ಪಕ್ಷದ ಸಂಸ್ಥಾಪಕರಾದ ಗಾಲಿ ಜನಾರ್ಧನ್ ರೆಡ್ಡಿ ಅವರು ಹಾರೂಗೇರಿ ಪಟ್ಟಣದ ಪುರಸಭೆ ಆವರಣದಲ್ಲಿ ಆಗಮಿಸಲಿದ್ದು ಅಂದು ಬ್ರಹತ್ ಸಾರ್ವಜನಿಕ ಸಭೆ ಹಾಗೂ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಮತಕ್ಷೇತ್ರದ ಎಲ್ಲ ಕಾರ್ಯಕರ್ತರು ಮುಖಂಡರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಹೇಳಿದರು
ನಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಪುಟ್ಬಾಲ್ ಇದ್ದು ಎಲ್ಲ ಮತಬಾಂದವರು ಪುಟ್ಬಾಲ್ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಕರ್ನಾಟಕ ರಾಜ್ಯದ ಹಿತವನ್ನು ಕಾಪಾಡಲು ನೀವು ಕೈಜೋಡಿಸಿ ಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ರಮೇಶ್ ಪಾಟೀಲ್ ಬಸವರಾಜ್ ಕಸರೆಡ್ಡಿ ನಾಗರಾಜ್ ಭಜಂತ್ರಿ ಮನೋಹರ್ ಪಾಟೀಲ್ ಅಲಗೌಡ ಪಾಟೀಲ್ ಮಲ್ಲು ಪಾಟೀಲ್ ಅಲಗೌಡ ಕೊಕಟನೂರ್ ಶಂಬು ನಂದಿ ಸಚಿನ್ ಕುರಾಣಿ ಆನಂದ್ ತೇಲಿ ಅಪ್ಪಸಾಬ ಡಾ0ಗೆ ಅಕ್ಬರ್ ಜಮಾದಾರ್ ಮತ್ತಿತರರು ಉಪಸ್ಥಿತರಿದ್ದರು