ಗಂಗಾವತಿ:ಭಾರತೀಯ ಜನತಾ ಪಕ್ಷದ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರ ಸಹೋದರ ವಾಣಿಜ್ಯೊಧ್ಯಮಿ ಶಂಕರಣ್ಣ ಮುನವಳ್ಳಿ , ಕೊಪ್ಪಳ ಜಿಲ್ಲೆಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು ಮಂಗಳವಾರ ಭೇಟಿಯಾಗಿ ವಿಧಾನ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಬೆಂಬಲಿಸುವಂತೆ ಕೋರಿದರು.
ಕ್ಷೇತ್ರದಲ್ಲಿ ನಡೆದ ಕೆಲವು ಘಟನೆಗಳನ್ನು ಮೆಲುಕು ಹಾಕಿದ ಹೇರೂರ, ಆಗಬೇಕಾಗಿದ್ದ ಅಭಿವೃದ್ಧಿ ಕೆಲಸಗಳು ಹಿನ್ನೆಡೆಯಾದ ಬಗ್ಗೆ ವಿವರಿಸಿದರು.
ಗಂಗಾವತಿ ನಗರದಲ್ಲಿ ಎ.ಆರ್.ಟಿ.ಓ.ಆಫ಼ೀಸ್ ಮತ್ತು ಸಹಾಯಕ ಆಯುಕ್ತರ ಕಚೇರಿ,ತಾಲೂಕಿನಲ್ಲಿ ಕರಡಿದಾಮ, ಆನೆಗುಂದಿ ಹತ್ತಿರ ತುಂಗಭದ್ರಾ ನದಿಗೆ ಸ್ಟೀಲ್ ಬ್ರಿಡ್ಜ ನಿರ್ಮಾಣ ಮುಂತಾದ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದ ಬಗ್ಗೆ ಚರ್ಚಿಸಿದರು.
ಸಹೋದರ ಪರಣ್ಣನವರಿಗೆ ಮತ ಹಾಕಿಸಿ,ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಲು ಶಂಕ್ರಣ್ಣ ಮುನವಳ್ಳಿ ಕೋರಿದರು.ಈ ಸಂಧರ್ಭದಲ್ಲಿ ಶಾಂತಮಲ್ಲಯ್ಯ ಸ್ವಾಮಿ, ಮಂಜುನಾಥ ಪವಾಡಶೆಟ್ಟಿ,ಬಸಯ್ಯ ಸ್ವಾಮಿ ಶಿವನಗುತ್ತಿ ,ಮುಷ್ಟಿ ವಿರುಪಾಕ್ಷಪ್ಪ ,ವಿಜಯಕುಮಾರ ರಾಯಕರ್ ಮತ್ತಿರರು ಜೊತೆಯಲ್ಲಿದ್ದರು.