ಬೆಳಗಾವಿ: ಯುವ ಜನತೆ ಯೋಗ್ಯ ಉದ್ಯೋಗಾವಕಾಶಗಳನ್ನು ಕಂಡು ಕೊಳ್ಳಲು ಕರ್ತವ್ಯ ಸಹಾಯಕ ತರಬೇತಿ ಸಹಕಾರಿಯಾಗಲಿದೆ. ಸಾಮಾನ್ಯ ಜ್ಞಾನ ಹಾಗೂ ಕೌಶಲ್ಯ ಬೆಳೆಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಭಾರತೀಯ ಕುಟುಂಬ ಯೋಜನೆ ಸಂಘದ ಡಾ. ವಿನೋದಾ ಬಾವಡೆಕರ್ ಅವರು ತಿಳಿಸಿದರು.
ನಗರದ ಹಿಂಡಾಲ್ಕೊ ಇಂಡಸ್ಟ್ರೀಸ್ ನಲ್ಲಿ ಆವರಣದಲ್ಲಿ ಥರ್ಮೇಕ್ಸ್ ಪೌಂಡೇಶನ್ ಮತ್ತು ಆಶ್ರಯ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಸಾಮಾನ್ಯ ಕರ್ತವ್ಯ ಸಹಾಯಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರ ಮುಂದಿನ ಭವಿಷ್ಯದ ಬಗ್ಗೆ ಸುಂದರ ಕನಸು ಕಟ್ಟಿಕೊಂಡಾಗ ಮಾತ್ರ ನಿಶ್ಚಿತ ಗುರು ಮುಟ್ಟಲು ಸಾಧ್ಯ. ಶಿಕ್ಷ ಣದ ಜತೆಗೆ ಬದುಕಿಗೆ ಪೂರಕ ತರಬೇತಿ ಹೊಂದುವ ಅಗತ್ಯವಿದೆ. ಜೀವನದಲ್ಲಿ ಬರುವ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಥರ್ಮ್ಯಾಕ್ಸ್ ಬಯೋಮಾಸ್ ಪ್ಲಾಂಟ್ ಸುಂದರೆಸನ್ ಬಾಬುರವರ್ ಸಿ ಎಸ್ ಅರ್ ಚಟುವಟಿಕೆಗಳನ್ನು ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವುದು ಹೆಮ್ಮೆಯ ವಿಷಯ. ಹಿಂಡಾಲ್ಕೋ ಇಂಡಸ್ಟ್ರಿ ಸಹಾಯದಿಂದ ಆಶ್ರಯ ಫೌಂಡೇಶನ್ ಆರ್ಥಿಕ ನೆರವನ್ನು ನೀಡಿ ಈ ತರಬೇತಿ ಪ್ರಾರಂಭಿಸಿದ್ದಾರೆ.ತರಬೇತಿಯಲ್ಲಿ ನಾವು ಎಷ್ಟು ನುರಿತರೂ ಕಡಿಮೆ, ಈ ಅವಕಾಶವನ್ನು ಎಲ್ಲ ಶಿಬಿರಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು. ಭಾರತೀಯ ಕುಟುಂಬ ಕಲ್ಯಾಣ ಸಂಘ ಇದನ್ನುಆಯೋಜಿಸಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯ ವ್ಯಕ್ತಡಿಸಿದರು .
ಭಾರತೀಯ ಕುಟುಂಬ ಕಲ್ಯಾಣ ಸಂಘದ ಅಧ್ಯಕ್ಷರಾದ ಡಾ. ವಿನೋದ ಬಾವಡೆಕರ್ ಅವರು ಭಾರತೀಯ ಕುಟುಂಬ ಯೋಜನಾ ಸಂಘದಲ್ಲಿ ಇಲ್ಲಿಯವರಿಗೆ ಎರಡು ತಂಡಗಳಿಗೆ ತರಬೇತಿಯನ್ನು ಯಶಸ್ವಿಯಾಗಿ ನೀಡಿದ್ದಾರೆ. ಹಾಗೂ ಆಶ್ರಯ ಫೌಂಡೇಶನ್ ಮತ್ತು ಥರ್ಮ್ಯಾಕ್ಸ್ ಫೌಂಡೇಶನ್ ಸಹಾಯದಿಂದ ನಮ್ಮ ಈ ಸಂಸ್ಥೆಯ ಕೊಠಡಿಯಲ್ಲಿ ಈ ತರಬೇತಿಯನ್ನು ನಾಲ್ಕು ತಿಂಗಳವರೆಗೆ ನಾವು ನಡೆಸಲಿದ್ದೇವೆ ಇಲ್ಲಿ ಎಲ್ಲ ರೀತಿಯ ಥಿಯರಿ ಮತ್ತು ಪ್ರಾಕ್ಟಿಕಲ್ ತರಬೇತಿಯನ್ನು ನೀಡಲಾಗುತ್ತದೆ ನುರಿತ ತರಬೇತಿದಾರರಿಂದ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿರುವ ಆನಂದ್ ಬಾದಾಮಿ ಎಲ್ಲ ಶಿಬಿರಾರ್ಥಿಯರಿಗೆ ತರಬೇತಿಯ ಮಹತ್ವ, ತರಭೇತಿ ನಂತರ ಆಗುವಂಥಹ ಪ್ರಯೋಜನ ಕುರಿತು ಮಾಹಿತಿ ನೀಡಿದರು.
ಹಿಂಡಲ್ಕೋ ಇಂಡಸ್ಟ್ರಿನ ದಿನೇಶ ನಾಯ್ಕ್ ಮಾತನಾಡಿ, ಯುವಕರಿಗೆ ದಾರಿದೀಪವಾಗುವ ಉದ್ದೇಶದಿಂದ ಈ ತರಬೇತಿಗೆ ಅನುದಾನ ತರಲಾಗಿದೆ. ಶ್ರಮದಿಂದ ತರಬೇತಿಯಲ್ಲಿ ನುರಿತು ಕಂಪನಿಗಳಿಗೆ ಬಲ ತುಂಬಬೇಕು ಎಂದರು.
ಈ ತರಬೇತಿಯ ಆಯೋಜಕರು ಆಶ್ರಯ ಫೌಂಡೇಶನ್ ಸಂಸ್ಥೆ ಸಂಸ್ಥಾಪಕರಾದ ನಾಗರತ್ನ ರಾಮಗೌಡ ಅವರು ಎಲ್ಲ ಶಿಬಿರಾರ್ಥಿಗಳಿಗೆ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಹಾಗೂ ಅವರಿಗೆ ಏನೇ ಸಹಾಯ ಬೇಕಾದರೂ ಆಶ್ರಯ ಫೌಂಡೇಶನ್ ಹಾಗೂ ಭಾರತ ಕುಟುಂಬ ಯೋಜನಾ ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳಿಗೆ ತಿಳಿಸಿ ಮಾರ್ಗದರ್ಶನ ಪಡೆದುಕೊಂಡು ಸರಿಯಾಗಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿ ಕೊಂಡರು.
ಥರ್ಮೇಕ್ಸ್ ಪೌಂಡೇಶನ್ ಬಯೋಮಾಸ್ ಪ್ಲಾಂಟ ಭೀಮು ರೆಂಟ್ಲೆ, ನಿಖಿಲ್ ಶಿಂಧೆ, ಹಿಂಡಾಲ್ಕೋ ಇಂಡಸ್ಟ್ರಿಸ್ ಕುಬೇರ ಹಾಗೂ ಪ್ರಮಿಳ ಜಗದೀಶ್ ಕಾದರೋಳಿ ಆಶ್ರಯ ಫೌಂಡೇಶನ್ ಸಂಸ್ಥಾಪಕರು ಹಾಗೂ ಭಾರತ ಕುಟುಂಬ ಯೋಜನಾ ಸಂಘದ ಸದಸ್ಯರು ಮತ್ತು ಎಲ್ಲ ಸಿಬ್ಬಂದಿಗಳ ಸಹಾಯದಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಸಲಾಯಿತು ಉಪಸ್ಥಿತರಿದ್ದರು.