ಅಥಣಿ :ಕಾಣೆಯಾದ ನ್ಯಾಯವಾದಿ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆ..!

Share the Post Now



ಅಥಣಿ : ಕಳೆದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದ ನ್ಯಾಯವಾದಿ, ಮುಖಂಡ ಸುಭಾಶ ಪಾಟನಕರ ಮೃತ ದೇಹ ಇಂದು ಬೆಳಿಗ್ಗೆ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ನದಿಯ ಹಲ್ಯಾಳ ಸೇತುವೆ ಬಳಿ ಮೃತ ದೇಹ ಪತ್ತೆಯಾಗಿದ್ದು, ನಿನ್ನೆಯಿಂದ ಪೊಲೀಸ್, ಎಸ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕದಳ ತಂಡಗಳು ಸತತವಾಗಿ  ಕಾರ್ಯಾಚರಣೆ‌ ನಡೆಸಿ ಇಂದು ಶವ ಹೊರತೆಗೆಯಲು ಸಫಲರಾಗಿದ್ದಾರೆ‌
ಇಂದು ಬೆಳಿಗ್ಗೆ 6 ಗಂಟೆಗೆ ಕೃಷ್ಣಾ ನದಿಯಲ್ಲಿ ಕಾಣಿಸಿಕೊಂಡ ಮೃತದೇಹವನ್ನು ಹೊರತೆಗೆಯಲಾಯ್ತು.
ತಮ್ಮನ ಮಗನ ಮದುವೆಯ ಹಿಂದಿನ ದಿನ ಕಾಣೆಯಾಗಿದ್ದ ನ್ಯಾಯವಾದಿ, ಕಾಣೆಯಾದ ನಾಲ್ಕು ದಿನಗಳ ಬಳಿಕ ಮೃತ ದೇಹ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಪೋಲೀಸ್ ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ.

Leave a Comment

Your email address will not be published. Required fields are marked *

error: Content is protected !!