ಬೆಳಗಾವಿ
ವರದಿ :ಕಲ್ಲಪ್ಪಾ ಮಾಳಾಜ
ಬೆಳಗಾವಿ : ಬೆಳಗಾವಿಯ ಜಿಲ್ಲಾಧಿಕಾರಿ ಕಛೆರಿಯಲ್ಲಿ ಮೂವರು ಹೆಣ್ಣುಮಕ್ಕಳ ಜೊತೆ ಮಹಿಳೆ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದವರು ಸರಸ್ವತಿ (40) ಮಕ್ಕಳಾದ ಸೃಷ್ಟಿ (14) ಸಾಕ್ಷಿ (8) ಸಾನ್ವಿ (3) ಎಂದು ತಿಳಿದುಬಂದಿದೆ. ಕಚೇರಿಯಲ್ಲಿದ್ದ ಸಿಬ್ಬಂದಿಗಳು ತಕ್ಷಣ ನಾಲ್ವರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ. ನಾಲ್ವರೂ ಅಸ್ವಸ್ಥಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಸರಸ್ವತಿ ಗಂಡ ಅದೃಶ್ಯಪ್ಪ ಜೀವನ ನಿರ್ವಹಣೆಗಾಗಿ ಸಿಕ್ಕಾಪಟ್ಟೆ ಸಾಲ ಮಾಡಿದ್ದ ಎನ್ನಲಾಗಿದೆ ಇನ್ನೂ ಸಾಲಗಾರರ ಕಾಟ ತಾಳಲಾರದೆ ಅವನು ನಾಪತ್ತೆಯಾಗಿದ್ದನು. ಆದರೂ ಸಾಲಗಾರರು ಮನೆಗೆ ಬರುತ್ತಿದ್ದರಿಂದ . ಇತ್ತ ಮಕ್ಕಳಿಗೆ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದಂತಾಗಿ ಸಹಾಯ ಕೋರಿ ಮಹಿಳೆ ಮಕ್ಕಳೊಂದಿಗೆ ಡಿಸಿ ಕಚೇರಿಗೆ ಬಂದಿದ್ದರು.
ಮೂಲತಃ ಹಾಲಿ ಬಾಡಿಗೆ ಮನೆ ಅನಗೋಳ ಖುದ್ದ ಬೈಲಹೊಂಗಲ ಜನತಾ ಪ್ಲಾಟ ಮುರಗೋಡ ಎಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಕಾಯುವಂತೆ ಸಿಬ್ಬಂದಿ ಹೇಳಿದ್ದರು. ಇದೇ ವೇಳೆ ಮಕ್ಕಳು ಅಸ್ವಸ್ಥರಾಗಿ, ವಾಂತಿ ಮಾಡತೊಡಗಿದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಕೇಳಿದಾಗ ನಮ್ಮ ತಾಯಿ ತಂಪು ಪಾನೀಯ ಎಂದು ಏನನ್ನೋ ಕುಡಿಸಿದ್ದಾಳೆ ಎಂದು ಹೇಳಿದ್ದಾರೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.