ಬೆಳಗಾವಿ
ವರದಿ: ಪ್ರಕಾಶ ಚ ಕಂಬಾರ
ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬ.ನೀ.ಕುಲಿಗೋಡ ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ 10 ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವು ಶುಕ್ರವಾರ ದಿನಾಂಕ 10 ರಂದು ಬೆಳಿಗ್ಗೆ 11.00 ಗಂಟೆಗೆ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಎಸ್.ಮಧಾಳೆ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸುದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಯಮನಪ್ಪ ಬಾಬನ್ನವರ, ಪುರಸಭೆ ಸದಸ್ಯ ಮಯೂರ ಕುರಾಡೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಿ.ಬಿ.ನಡಟ್ಟಿ, ಹಾರನಕೋಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪಿ.ಪಿ.ಹುಲ್ಲೋಳ್ಳಿ ಕಾರ್ಯಕ್ರಮವನ್ನು ಸಸಿಗೆ ನೀರುನಿಸುವುದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ಡಿ.ವಿ. ನಡಟ್ಟಿ ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸುಕೊಂಡು ಹೋಗುವುದು ಒಂದು ಸವಾಲು ಅಂತಹ ಸವಾಲನ್ನು ಯಶಸ್ವಿಯಾಗಿ ಮುನ್ನುಡಸಿಕೊಂಡು ಹೊಂಟಿರಿ ಹಾಗೂ ಮಕ್ಕಳ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದೆ ನಿಜವಾದ ಶಿಕ್ಷಣ. ಮಕ್ಕಳ ದೇಶದ ಸಂಪತ್ತ ಬರೀತ ಉತ್ತಮ ನಾಗರಿಕರಾಗಿ ಬಾಳಿ ಎಂದು ಹೇಳುವುದರೊಂದಿಗೆ, ಉತ್ತಮ ಸಂಸ್ಕಾರವನ್ನು ನೀಡುವಲ್ಲಿ ಈ ಶಾಲೆಯ ಮುಂಚುನಿಯಲ್ಲಿದೆ. ಇಲ್ಲಿಯ ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಎಂದು ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.
ಅತಿಥಿಗಳಾಗಿ ಆಗಮಿಸಿದ ಪಿಯುಸಿ ಕಾಲೇಜಿನ ಪ್ರಾಚಾರ್ಯರಾದ ಡಾ ಎಂ ಕೆ ಬೀಳಗಿ ಅವರು ಮಾತನಾಡಿ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಕೊಡುವುದರ ಮೂಲಕ ಅವರಲ್ಲಿ ಜ್ಞಾನಾರ್ಜನೆ ಬೆಳೆಸುವಲ್ಲಿ ಈ ನಮ್ಮ ಶಿಕ್ಷಕ ವೃಂದ ಯಶಸ್ವಿಯಾಗಿ ಸಾಗಿದೆ ಹಾಗೂ ಮಕ್ಕಳೇ ನಿಮ್ಮ ಮುಂದಿನ ಜೀವನ ಯಶಸ್ವಿಯಿಂದ ಕೂಡಿರಲಿ ಎಂದು ಹೇಳಿದರು.
ನಂತರದಲ್ಲಿ ಸನ್ 2022-23 ನೇ ಸಾಲಿನ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆದರ್ಶ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಹಾಗೂ ಸಮಗ್ರ ವಿರಾಗ್ರಣ ಮತ್ತು ವಿರಾಗ್ರಣಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ ಪ್ರಕಾಶ ಚ ಕಂಬಾರ, ಡಾ ವಿ ಕೆ ನಡೋಣಿ, ಬಿ ಎ ಕೊಪ್ಪದ, ಎಸ್ ಬಿ ಗಬ್ಬೂರ, ಬಾಹುಬಲಿ ನೇಗಿನಾಳ, ಉದಯ ಇದರಗುಚ್ಚಿ, ಚಂದು ಕೆ ಲಮಾಣಿ ಮುಗಳಖೋಡದ ಎಲ್ಲ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಗಣ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ಜೆ.ಬಿ.ಮೇಕನಮರಡಿ ಹಾಗೂ ಶ್ರೀಮತಿ ಎಸ್.ಆರ್. ಫಿರೋಜ್ ನಿರೂಪಿಸಿದರು. ಶಿಕ್ಷಕರಾದ ಎನ್.ಆರ್.ಡಾಂಗೆ ವಂದಿಸಿದರು.