ಬೆಳಗಾವಿಯ ಖಾಸಬಾಗ ನಲ್ಲಿರುವ ಜಯವಂತಿ ಮಂಗಲ ಕಾರ್ಯಾಲಯದಲ್ಲಿ ನಡೆದ ಛಲವಾದಿ ಯುವ ಸಂಘದ ಉದ್ಘಾಟನೆಯನ್ನು ಶಾಸಕ ಆಶೀಪ್ ಶೇಠ್ ಅವರು ನೆರವೇರಿಸಿದರು
ಜಯ ಬಿಮ್, ಜೈ ಬಾಬಾ ಸಾಹೇಬ ಅಂಬೇಡ್ಕರ ಎಂಬ ಘೋಷಣೆ ಕೂಗುತ್ತಾ ಸಹಸ್ರಾರು ಸಂಖ್ಯೆಯಲ್ಲಿ ನೀಲಿ ಬಣ್ಣದ ದ್ವಜ ಹಿಡಿದು ಕೊರಳಲ್ಲಿ ನೀಲಿ ಬಣ್ಣದ ಶಾಲ ಧರಿಸಿ ಮೆರವಣಿಗೆ ಮುಖಾಂತರ ಬೆಳಗಾವಿ ಹಳೆ ಪಿ ಬಿ ರಸ್ತೆಯಲ್ಲಿರುವ ಜಯವಂತಿ ಮಂಗಲ ಕಾರ್ಯಾಲಯಕ್ಕೆ ಬಂದ ಛಲವಾದಿ ಸಂಗದ ಪದಾಧಿಕಾರಿಗಳು ನಂತರ ಬಾಬಾ ಸಾಹೇಬರ ಮೂರ್ತಿಗೆ ಭವ್ಯ ಪೂಜೆ ನೆರವೇರಿಸಿ ಸಮಾವೇಶ ಆರಂಭಿಸಿದರು
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಆಶೀಪ್ (ರಾಜು) ಶೇಠ್ ಇವತ್ತು ಛಲವಾದಿ ಸಂಘದ ಇಷ್ಟೆಲ್ಲ ಜನರನ್ನು ನೋಡಿದಾಗ ಖುಷಿಯಾಗುತ್ತೆ ನಿಮೆಲ್ಲರ ಮುಖದಲ್ಲಿರುವ ಚೆತನ್ಯಕ್ಕೆ ಕಾರಣ ಸಂವಿದಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ
ಸಂವಿಧಾನ ನಿರ್ಮಿಸಿದ ಅಂಬೇಡ್ಕರ ಅವರು ನಮ್ಮ ದೇಶಕ್ಕೆ ಮಾತ್ರವಲ್ಲದೆ ಜಗತ್ತಿಗೆ ದಾರಿದೀಪವಾದವರು ಅವರು ಅನುಭವಿಸಿದ ನೋವು ಅಪಮಾನ ಅವಮಾನ ಇನ್ನಿತರ ಕಿರುಕಳಕ್ಕೆ ಪ್ರತಿರೂಪವಾಗಿ ಅವರು ಸಂವೀದಾನ ರಚಿಸಿ ಪ್ರತಿಯುತ್ತರ ನೀಡಿದರು ಇವತ್ತು ಯುವ ಸಹೋದರರೆಲ್ಲ ಒಗ್ಗೂಡಿ ಈ ಸಮಾವೇಶವನ್ನು ಯಶಸ್ವಿ ಗೊಳಿಸಿದ್ದಾರೆ.
ಯುವ ಜನತೆ ದೇಶದ ಆಸ್ತಿ ಯುವಕರು ಸಂಘಟಕರಾಗಿ ಕೇವಲ ಸಮಾವೇಶ ಮಾಡಿದರೆ ಸಾಲದು ನಿರಂತರವಾಗಿ ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಖಂಡಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ನಿಮ್ಮ ಜೊತೆ ನಮ್ಮ ಸರಕಾರ ಹಾಗು ನಾವು ನಿರಂತರವಾಗಿ ಇರುತ್ತೇವೆ ಎಂದರು .
ಭಾಷಣದ ಕೊನೆಗೆ ಜೈ ಭೀಮ್ ಎಂಬ ಘೋಷಣೆ ಕೂಗಿ ಯುವಕರಲ್ಲಿ ಉತ್ಸಾಹ ತುಂಬಿದರು .
ಗೌರವಾಧ್ಯಕ್ಷ ಯಲಪ್ಪ ಕೋಲಕಾರ ಮಾತನಾಡುತ್ತಾ , ಸಂಘಟನೆ ಸ್ಥಾಪನೆಯಾದ ಉದ್ದೇಶವೇಂದರೆ ಬೆಳಗಾವಿ ದಕ್ಷಿಣದಲ್ಲಿ ನಮ್ಮ ಸಮಾಜ ಹಿಂದುಳಿದೆ ,ನಮ್ಮ ಸಮುದಾಯ ಬೆಳೆಯುತ್ತೀಲ್ಲ , ಸರ್ಕಾರದಿಂದಲ್ಲೂ ನಮ್ಮ ಸಮಾಜಕ್ಕೆಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ , ಹೀಗಾಗಿ ಈ ಸಂಘಟನೆ ಸ್ಥಾಪಿಸಲಾಗಿದೆ ಸಂಘಟನೆ ಮುಖಾಂತರ ಬಿದ್ದವರನ್ನು ಎತ್ತುವ ಕೆಲಸ ಮಾಡುತ್ತೇವೆ ಎಂದರು .
ಈ ಸಂದರ್ಭದಲ್ಲಿ ಮಯೂರ ,ಪಾಲಿಕೆ ಸದಸ್ಯರಾದ ಮಂಗೇಶ ಪವಾರ ,ಭರತ್ ಪಾಟೀಲ ,ಸಂದೀಪ ಜಿರ್ಗ್ಯಾಳ ,ಮಹಾಂತೇಶ ಜೀವೂರಗುಂಡಿ ,ಯಲ್ಲಪ್ಪ ಕೋಲಕಾರ್ ,ಮಹಾಂತೇಶ ಮ್ಯಾಗಿನಮನಿ ,ಸವಿತಾ ಕಾಂಬಳೆ ,ಶ್ರೀಶೈಲ್ ಕಾಂಬಳೆ ,ಪಾಲಿಕೆ ಸದಸ್ಯ ಜಯಂತ ಜಾಧವ , ಸಂತೋಷ ದೇವರಮನಿ ,ಮಹೇಶ ಕೊರಕಾರ ಸೇರಿದಂತೆ ಛಲವಾದಿ ಯುವ ಸಂಘದ ಸದಸ್ಯರು ಉಪಸ್ಥಿತರಿದ್ದರು