ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಭೀಮಘರ್ಜನೆ ಜಿಲ್ಲಾ ಸಮಿತಿ ಉಡುಪಿ.
ಉಡುಪಿ :ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ರವರ 132ನೇ ಜನ್ಮ ಜಯಂತಿಯ ಪ್ರಯುಕ್ತ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಐಕ್ಯತೆಗಾಗಿ “ಬಹಿರಂಗ ಸಮಾವೇಶ” ವನ್ನು ಕುಂದಾಪುರದ ಹೃದಯಭಾಗದ ಶಾಸ್ತ್ರಿ ಸರ್ಕಲ್ನಲ್ಲಿ ಜರುಗಿತು.
ಶಿರೂರು ಹಾಗೂ ಉಡುಪಿಯಿಂದ ಚಾಲನೆಗೊಂಡ “ಸ್ವಾಭಿಮಾನ ಯಾತ್ರೆ” ಯು ಕುಂದಾಪುರದ ಬಹಿರಂಗ ಸಮಾವೇಶವನ್ನು ಸೇರಿಕೊಂಡಿತು ಯಾತ್ರೆಯ ಉದ್ದಕ್ಕೂ ಅಂಬೇಡ್ಕರ್ ಗೀತೆಗಳು, ಘೋಷಣೆಗಳು ಮೊಳಗಿದವು. ಬಹಿರಂಗ ಸಮಾವೇಶದ ಘನ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಂಚಾಲಕರಾದ ಚಂದ್ರ ಅಲ್ತಾರ್ ವಹಿಸಿದರು ಅಂಬೇಡ್ಕರ್ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು
. ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಬೈಂದೂರು, ಮಂಜುನಾಥ್ ಗುಡ್ಡೆಯಂಗಡಿ, ಪ್ರಶಾಂತ್ ಉಡುಪಿ, ವಿಠ್ಠಲ್ ಸಾಲಿಕೆರೆ, ರಾಘವೇಂದ್ರ ಬೇಳಂಜೆ, ಉಮಾಶ್ರೀ ಕುಚ್ಚುರೂ, ಸೌಮ್ಯ ಪರ್ಪಲೆ, ಆನಂದ ನಕ್ರೆ, ಸುರೇಶ ಮಾಳ, ಅಣ್ಣಪ್ಪ ಪಾಡಿಗಾರ, ಸುಂದರ ನೀರೆ, ಚಂದ್ರಶೇಖರ ಗುಲ್ವಾಡಿ, ಸಂತೋಷ ಶಿರೂರು,ವಿಜಯ್ k s, ಸಂದೇಶ್ ನಾಡ , ಶೇಖರ್ ಆರ್ಡಿ, ಸತೀಶ್ ಸೂರ್ಗೋಳಿ ಹಾಗೂ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಸಮಿತಿ ಸಂಘಟನಾ ಸಂಚಾಲಕ
ರಾಘು ಶಿರೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.