ಬಿದಿರು ಒಂದು ದಿನ ಬ್ರಹ್ಮನಿಗೆ ಎದುರಾಗಿ ಬೇಸರದಿ ಕೇಳಿತಂತೆ… “ಬೇಕಿತ್ತೇ ಈ ನಿನ್ನ ಸೃಷ್ಟಿಯೊಳಗೆ ನನ್ನದೊಂದು ಪಾತ್ರ.
ಹೂವಿಲ್ಲ, ಹಣ್ಣಿಲ್ಲ , ದಣಿದು ಬಂದವರಿಗೆ ನೆರಳೂ
ಕೊಡಲಾಗಲಿಲ್ಲ”
ಅದಕ್ಕೆ ಬ್ರಹ್ಮನಕ್ಕು ನುಡಿದನಂತೆ…
“ಮನಸ್ಸು ಮಾಡಿ ನೋಡೊಮ್ಮೆ …”
ಆಗ ಬಿದಿರು ಹಠ ಹಿಡಿದು ಬೆಳೆಯಿತಂತೆ…..
ಬಟ್ಟೆ ಒಣ ಹಾಕುವ ಕೋಲಾಯಿತಂತೆ,
ಕೃಷ್ಣನ ಕೈಯಲ್ಲಿ ಕೊಳಲಾಯಿತಂತೆ,
ಮಕ್ಕಳು ತೂಗುವ ತೊಟ್ಟಿಲಾಯಿತಂತೆ,
ಸುಮಂಗಲೆಯರು. ಕೊಡುವ ಬಾಗಿನಕೆ ಮೊರವಾಯಿತಂತೆ
ಬಡವರ ಗುಡಿಸಲಿಗೆ ನೆರಳಾಯಿತಂತೆ
ಬಿದಿರಿನ ಬುಟ್ಟಿ ಆಯ್ತಂತೆ,ತಪ್ಪು ಮಾಡಿದವರ ದಂಡಿಸುವ ಪೋಲಿಸರ ಲಾಠಿ ಆಯಿತಂತೆ….
*ಹೀಗೆ ಆಗುತ್ತ ಆಗುತ್ತ ಮನುಷ್ಯನಿಗೆ ಒಂದು ಗುಟ್ಟು ಹೇಳಿತಂತೆ*
ನನ್ನಿಂದ ಏನೂ ಆಗದು ಎಂದು ಕೈಚೆಲ್ಲದಿರು
ಮನುಜ ಮನಸ್ಸು ಮಾಡಿ ನೋಡೊಮ್ಮೆ ಅಂತ