ಬೆಳಗಾವಿ :ಜು.2ರಂದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ;
ರಾಯಬಾಗ ತಾಲೂಕಿನ ಹಾರೂಗೇರಿ –
ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಾರೂಗೇರಿ ಪಟ್ಟಣದಲ್ಲಿ ಜು. 2ರಂದು ಮುಂಜಾನೆ 10 ಗಂಟೆಗೆ ಪವಾಡಪುರುಷ ಶ್ರೀ ಚನ್ನವೃಷಭೇoದ್ರ ಲೀಲಾ ಮಠದ ಪೂಜ್ಯ ಡಾ. ಶಿವಾನಂದ ಭಾರತಿ ಸಭಾ ಭವನದಲ್ಲಿ ನಡೆಯಲಿರುವ ಡಾ: ಯಲ್ಲಪ್ಪ ಹಿಮ್ಮಡಿಯವರ ಶಷ್ಠಬ್ದಿ ಹಾಗೂ ಸನ್.2021-22 ಮತ್ತು 2022-23 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಮೆಟ್ರಿಕ್, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ಹಾಗೂ ಸತ್ಕಾರ ಸಮಾರಂಭ ಜರುಗಲಿದೆ ಎಂದು ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ನಾಗೇಶ ಕಾಮಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಾರೂಗೇರಿ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಶುಕ್ರವಾರ ಸಂಜೆ 5:00 ಗಂಟೆಗೆ ಕರೆದ ಪೂರ್ವಭಾವಿ ಸಭೆಯ ಪತ್ರಿಕಾಗೋಷ್ಠಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತ ಇತಿಹಾಸ ತಜ್ಞ ಡಾಕ್ಟರ್ ಶಿವರುದ್ರ ಕಲ್ಲೋಳಕರ ಮುಖ್ಯ ಅತಿಥಿಗಳಾಗಿ ಆಗಮಿಸುವರು, ಬಂಡಾಯ ಸಾಹಿತಿಗಳು ಡಾ.ಯಲ್ಲಪ್ಪ ಹಿಮ್ಮಡಿ ಉಪಸ್ಥಿತರಿರುವರು ಎಂದರು.
ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಉದಯ ಗಾಣಿಗೇರ ಮಾತನಾಡುತ್ತ ಹಾರೂಗೇರಿ ಪಟ್ಟಣದಲ್ಲಿ ಚನ್ನದಾಸರ ಸಮಾಜದ ವತಿಯಿಂದ ಪ್ರಪ್ರಪ್ರಥಮ ಬಾರಿಗೆ ಇಂತಹ ಒಂದು ವಿನೂತನ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಸಮಾಜದ ಹಿರಿಯ ಮುಖಂಡರು, ಸಮಾಜ ಸೇವಕರು, ನಾಗೇಶ ಕಾಮಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಈ ವಿಶೇಷ ಹಾಗೂ ವಿನೂತನ ಕಾರ್ಯಕ್ರಮಕ್ಕೆ ಸಮಾಜದ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಉದಯ ಗಾಣಿಗೇರ, ಶಿಕ್ಷಕ ರಾಮು ಗಾಣಿಗೇರ, ಸಮಾಜ ಸೇವಕ ಮಾರುತಿ ಮಾಳಿಗೆನ್ನವರ, ಪತ್ರಕರ್ತ ಹನುಮಂತ ಸಣ್ಣಕ್ಕಿನ್ನವರ ಇನ್ನು ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.





