ಹಳ್ಳೂರ . ಗ್ರಾಮದ ಸಾವಿರ ಹಾಡಿನ ಸರದಾರ ಸಾಹಿತ್ಯ ರತ್ನ ಮಹಾರಾಜ ಸಿದ್ದು ಹಳ್ಳೂರ ಇವರ 350 ನೇ ದ್ವನಿ ಸುರುಳಿ ಬಿಡುಗಡೆ ಸಮಾರಂಭವನ್ನು ಬಂಡಿಗಣಿ ಚಕ್ರವರ್ತಿ ದಾನೇಶ್ವರ ಶ್ರೀಗಳ ಅಮೃತ ಹಸ್ತದಿಂದ ಬಿಡುಗಡೆ ಕಾರ್ಯಕ್ರಮ ನಡೆಯಿತು.
ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದಲ್ಲಿ ಸುಕ್ಷೇತ್ರ ಹಳ್ಳೂರ ಮಹಾಲಕ್ಷ್ಮೀ ಮಹಿಮೆ ಎಂಬ ಭಕ್ತಿ ಗೀತೆಗಳ ದ್ವನಿ ಸುರುಳಿ ಬಿಡುಗಡೆಯಾಯಿತು. ಮಹಾರಾಜ ಸಿದ್ದು ಹಳ್ಳೂರ ಇವರು 5400 ಕ್ಕಿಂತ ಹೆಚ್ಚು ಹಾಡುಗಳನ್ನು ಬರೆದು ಕರುನಾಡಿನ ಜನರ ಮನ ಸೂರಗೊಂಡಿದ್ದಾರೆ. ಪಂಡರಪುರದ ಪಾಂಡುರಂಗ ವಿಠಲ ರುಕ್ಮಿಣಿ, ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ದೇವರ ಸೇರಿದಂತೆ ಅನೇಕ ಮಠ ಮಾನ್ಯಗಳ ಭಕ್ತಿ ಗೀತೆಗಳು ಭಾವಗೀತೆಗಳ, ಜಾನಪದ ಗೀತೆಗಳು ಎಲ್ಲ ತರಹದ ಹಾಡುಗಳನ್ನು ಬರೆದು ಹೆಸರು ವಾಸಿಯಾಗಿದ್ದಾರೆ. ಶಬ್ಬಿರ ಡಾಂಗೆ ಹಾಗೂ ಮಾನಂದಾ ಗೊಸಾವಿ ಹಾಡಿರುವ ಗೀತೆಗಳೂ ಇಂಪಾಗಿ ಮೂಡಿ ಬಂದಿವೆ. ಈ ಸಮಯದಲ್ಲಿ ಗ್ರಾಮ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ. ಡಾ ಸಂತೋಷ ಉಪಾಧ್ಯ. ಮಹಾಂತೇಶ ಕುಡಚಿ. ಅಡಿವೆಪ್ಪ ಪಾಲಬಾಂವಿ. ಪ್ರಕಾಶ ಮೊರೆ. ಮುತ್ತಪ್ಪ ಸಂಕಾನಟ್ಟಿ. ಬಸವರಾಜ ಕೌಜಲಗಿ. ಪ್ರಕಾಶ ಅಂಗಡಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





