ಹಳ್ಳೂರ.
ಸಮೀಪದ ಯಾದವಾಡ ಗ್ರಾಮದ ಬೃಂಗೇಶ ಹಂಗರಗಿ ಅವರಿಗೆ ಬಸವ ಗಾಯನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಬಾಗಲಕೋಟ ಜಿಲ್ಲೆ ಇಳಕಲ್ ತಾಲ್ಲೂಕಿನ ಲಕ್ವ ರೋಗ ನಿವಾರಣೆಯ ಧನಂವಂತರಿ ಸುಕ್ಷೇತ್ರ ಸೋಮಲಾಪುರದಲ್ಲಿ ಬಸಶ್ವೇಶ್ವರ ಜಾತ್ರಾ ನಿಮಿತ್ಯವಾಗಿ ಚಪಾತಿ ಪಾಂಡು ಖ್ಯಾತಿಯ ಶ್ರೀ ಎಸ್ ಪಿ ಹೊಸಪೇಟೆ ಅವರ ನೇತೃತ್ವದಲ್ಲಿ ದಿ 27/08/2024 ರಂದು ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಪ್ರತಿ ವರುಷ ಒಬ್ಬ ಸಾಧಕರನ್ನು ಗುರುತಿಸಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸುವುದು ಒಂದು ವಾಡಿಕೆ ಈ ಬಾರಿ ಸಂಗೀತ ಕ್ಷೇತ್ರದಲ್ಲಿ ಸುಮಾರು 15 ವರುಷದಿಂದಲೂ ಸೇವೆಯನ್ನು ಸಲ್ಲಿಸುತ್ತಿರುವ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಶ್ರೀ ಬೃಂಗೇಶ್ ಬಸವರಾಜ್ ಹಂಗರಗಿ ಅವರಿಗೆ ಶ್ರೀ ಬಸವ ಗಾಯನ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಶ್ರೀ ಷ ಬ್ರ ತಪೋನಿಧಿ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಮಹಾಂತೇಶ ಕಲ್ಲಪ್ಪನವರ. ಶ್ರೀ ಹನಮಂತಗೌಡ ಹೋಳೆಯಾಚಿ.
ಶ್ರೀ ಹನಮಂತಗೌಡ ಯಂಕನಗೌಡರ.
ಶೇಖರಪ್ಪ ಅಂಗಡಿ
ಬಸಪ್ಪ ಹಂಚಿನಾಳ ಇನ್ನಿತರರು ಉಪಸ್ಥಿತರಿದ್ದರು.