ಹಾರೂಗೇರಿ ಪುರಸಭೆಯ ನೂತನ ಅಧ್ಯಕ್ಷರಾಗಿ ವಸಂತ ಲಾಳಿ ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆ

Share the Post Now


ಅಧ್ಯಕ್ಷರಾಗಿ ವಸಂತ ಲಾಳಿ , ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆ: ತಹಶೀಲ್ದಾರ್ ಸುರೇಶ ಮುಂಜೆ;



ಹಾರೂಗೇರಿ :  ಪುರಸಭೆಯ ನೂತನ ಅಧ್ಯಕ್ಷರಾಗಿ ವಸಂತ ಲಾಳಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಅರಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಸುರೇಶ ಮುಂಜೆ ತಿಳಿಸಿದರು.

ಅವರು ಹಾರೂಗೇರಿ ಪುರಸಭೆಯ ಸಭಾ ಭವನದಲ್ಲಿ ದಿ. 30ರಂದು ಜರುಗಿದ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಸಂದರ್ಭದಲ್ಲಿ ಮಾತನಾಡುತ್ತ
ಪುರಸಭೆಗೆ ಅಧ್ಯಕ್ಷ ಸ್ಥಾನ ‘ಹಿಂದುಳಿದ ವರ್ಗ ಅ ‘ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ “ಪರಿಶಿಷ್ಟ ಜಾತಿ ” ಮೀಸಲಾತಿ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ವಸಂತ ಲಾಳಿ ಒಬ್ಬರೇ ನಾಮಪತ್ರ ಸಲ್ಲಿಸಿದರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಅರಕೇರಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರು ಅಧ್ಯಕ್ಷ- ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗದರು.  ಹಾರೂಗೇರಿ ಪುರಸಭೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿ. ತಾಲೂಕ ಆಡಳಿತವು ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ರೀತಿ ಸಹಕಾರ ನೀಡಲಾಗುವುದೆಂದು ನೂತನ ಅಧ್ಯಕ್ಷ ಉಪಾಧ್ಯಕ್ಷರು ತಿಳಿಸಿದರು.

ಬಿಜೆಪಿ ಪಕ್ಷದ ಚುನಾಯಿತ ಸದಸ್ಯರಾದ ಪರಗೌಡ ಉಮರಾಣಿ,ರೂಪಾ ನಾಗನೂರ,ಸಂತೋಷ್ ಶಿಂಗಾಡಿ,ಬಸವರಾಜ್ ಅರಳಿಕಟ್ಟಿ, ಸುನಂದಾ ದಳವಾಯಿ,ಪ್ರೇಮಾ ಟಕ್ಕಣವರ, ಶೋಭಾ ಐನಾಪುರ,ನಮ್ರತಾ ಮೂಡಸಿ,ಪಾರ್ವತಿ ಆಸಂಗಿ,ಬಾಳಪ್ಪ ಗಸ್ತಿ, ಕಾಂತು ಬಾಡಗಿ ರವರು ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಹಾಜರಿದ್ದರು.

ಕಾಂಗ್ರೆಸ್ ಪಕ್ಷದ ಸದಸ್ಯರಾದ ಬಾಬುರಾವ ನಡೋಣಿ, ಮಾಳಪ್ಪ ಹಾಡಕರ, ಆನಂದ ಪಾಟೀಲ್, ಹಾಯತಬಿ ಶೇಕ್, ಬಸವರಾಜ್ ಚೌಗಲಾ ಸಭೆಯಲ್ಲಿ ಹಾಜರಾಗಿದ್ದರು.

ಚುನಾವಣೆ ಅಧಿಕಾರಿ ತಹಶೀಲ್ದಾರ್ ಸುರೇಶ ಮುಂಚೆ, ಪುರಸಭೆ ಮುಖ್ಯ ಅಧಿಕಾರಿ ಅಭಿಷೇಕ್ ಪಾಂಡೆ ಗ್ರಾಮ ಆಡಳಿತ ಅಧಿಕಾರಿ ನಕ್ಕರಗುಂದಿ  ಹಾರೂಗೇರಿ ಠಾಣೆಯ ಪೊಲೀಸ ರು ಬಿಗಿ ಬಂದುಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ಮಾಜಿ ಶಾಸಕ ಪಿ.ರಾಜೀವ್ ಅವರ ನೇತೃತ್ವದಲ್ಲಿ ಎಲ್ಲ 15 ಜನ ಬಿಜೆಪಿ ಸದಸ್ಯರು ವಿಜಯದ ಸಂಕೇತ ತೋರಿಸುದೊಂದಿಗೆ ಜಯ ಘೋಷಾ ಮೊಳಗಿತು. ಪಟಾಕಿ ಸುಟ್ಟು ಗುಲಾಲ ಎರಚಿ, ಡಿಜೆಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ ಪಕ್ಷದ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು.
ಮಾಜಿ ಶಾಸಕ ಪಿ.ರಾಜೀವ್ ಅವರ ನೇತೃತ್ವದಲ್ಲಿ ಪುರಸಭೆ ಕಾರ್ಯಾಲಯದಿಂದ ಪಾದಯಾತ್ರೆ ಮೂಲಕ  ಶ್ರೀ ಚನ್ನವೃಷಬೆಂದ್ರ ಮಠಕ್ಕೆ ಹೋಗಿ ಶ್ರೀದೇವರಕೊಂಡ ಅಜ್ಜರ ಕರ್ತೃ ಗದ್ದಿಗೆಯ ದರ್ಶನ ಪಡೆದರು.

==============

Leave a Comment

Your email address will not be published. Required fields are marked *

error: Content is protected !!