ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಪುನಿತರಾಗಿ ಬಸವರಾಜ ಶ್ರೀಗಳು

Share the Post Now

ಹಳ್ಳೂರ :ಪ್ರಾಚೀನ ಇತಿಹಾಸ ಹೊಂದಿರುವ ಪವಿತ್ರವಾದ ಹಿಂದೂ ಧರ್ಮದ ಜಾಗೃತಿ , ಸಂಸ್ಕೃತಿಯನ್ನು ಹೊಂದಿದ ಶ್ರೇಷ್ಠ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ನವರಾತ್ರಿ ಉತ್ಸವದಲ್ಲಿ ಎಲ್ಲರೂ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರೆ ಜೀವನವು ಉದ್ದಾರವಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆಂದು ಕಪರಟ್ಟಿ ಶ್ರೀ ಬಸವರಾಜ ಸ್ವಾಮಿಜಿಗಳು ಹೇಳಿದರು.

ಅವರು ಗ್ರಾಮದ ಆರಾದ್ಯ ದೇವರಾದ ಶ್ರೀ ಆದಿಶಕ್ತಿ ದ್ಯಾಮವ್ವ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯ ದೇವಿಯ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇತ್ತೀಚಿಗೆ ಟಿ ವಿ ಮೊಬೈಲ ಕಡೆ ಗಮನ ಹರಿಸಿ ಜೀವನದ ದಾರಿ ತಪ್ಪಿಸಿಕೊಳ್ಳುತ್ತಿದ್ದಾರೆ. ಉತ್ತಮ ಜೀವನ ರೂಪಿಸಿಕೊಳ್ಳಬೇಕಾದರೆ ಸಂತ ಮಹಾತ್ಮರ ಹಿತ ವಚನಗಳನ್ನು ಕೇಳಿ ಜೀವನ ಉದ್ದಾರ ಮಾಡಿಕೊಳ್ಳಿರಿ. ನಡೆದಂತೆ ನುಡಿ ಇದೆ ಜನ್ಮ ಕಡೆ ಒಬ್ಬರಿಗೆ ಮಾತು ಕೊಟ್ಟಂತೆ ನಡೆಯದೆ ಮೋಸ ವಂಚನೆ ಮಾಡಿ ಕಾಶಿ ಪುಣ್ಯ ಕ್ಷೇತ್ರಕ್ಕೆ ಹೋದರೆ ಫಲವಿಲ್ಲ. ಪಾಪ ಹೆಚ್ಚಾಗಿರುವುದರಿಂದ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿವೆ. ಎಲ್ಲರೂ ಸತ್ಯದ ದಾರಿಯಲ್ಲಿ ನಡೆದು ಧಾರ್ಮಿಕ ಕಾರ್ಯಕ್ರಮ ಮಾಡುವುದರಿಂದ ಜಗತ್ತು ಉದ್ಧಾರವಾಗುತ್ತದೆಂದು ಹೇಳಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪ ಯೋಜನಾ ಸಮನ್ವಯಾಧಿಕಾರಿ ರೇವತಿ ಮಠದ ಮಾತನಾಡಿ ತಾಯಿ ತಂದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಅದರ ಜೊತೆಗೆ ಸಂಸ್ಕೃತಿ, ಧಾರ್ಮಿಕತೆಯಲ್ಲಿ ಬಾಗವಹಿಸಿ ಸನ್ಮಾರ್ಗ ತೋರಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಿರಿ ಹೆಣ್ಣು ಗಂಡು ಎಂಬ ಬೇದ ಭಾವ ಮಾಡದೆ ಸರಿ ಸಮನಾಗಿ ಕಾಣಬೇಕೆಂದು ಹೇಳಿದರು. ಪ್ರಾರಂಭದಲ್ಲಿ ಆರತಿ ಮತ್ತು ಕುಂಭ ಮೇಳ ಮೆರವಣಿಗೆ ನಡೆಯಿತು.

ಇದೆ ಸಂದರ್ಭದಲ್ಲಿ ಉಪ ಯೋಜನಾ ಸಮನ್ವಯಾಧಿಕಾರಿ ಪ್ರಕಾಶ ಹಿರೇಮಠ. ಸಿದ್ದಯ್ಯ ಹಿರಮಠ. ಅರ್ಚಕ ದುಂಡಪ್ಪ ಬಡಿಗೇರ. ಶಂಕರಯ್ಯ ಹಿರೇಮಠ. ಸಿದಗೀರಿ ಬಡಿಗೇರ.ಸೇರಿದಂತೆ ಪಂಚಮಸಾಲಿ ಹಾಗೂ ತೋಟಗೇರ ಸಾಮಾಜದ ಗುರು ಹಿರಿಯರಿದ್ದರು.

Leave a Comment

Your email address will not be published. Required fields are marked *

error: Content is protected !!