ಬೆಳಗಾವಿ.ಮೂಡಲಗಿ.
ತಾಲೂಕಿನ ಹಳ್ಳೂರ ಗ್ರಾಮದ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಕಚೇರಿ ಒಳಗೆ ಕಸದ ಡಬ್ಬಿಯಲ್ಲಿ ಬೀಯರ್ , ಒರಿಜಿನಲ್ ಚಾಯ್ಸ್, ಬಾಟಲಿಗಳು ಸೇರಿದಂತೆ ವಿವಿಧ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಪ್ರಾರ್ಥನಾ ಮುಗಿದ ನಂತರ ಸಾರ್ವಜನಿಕರು ನೋಡಿದ್ದಾರೆ ನಂತರ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟು ಹಾಕಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಮೂಡಲಗಿ ವಲಯದ ಹಳ್ಳೂರ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಳಗೆ ಬೆಳ್ಳಂಬೆಳಿಗ್ಗೆ ಮದ್ಯದ ಬಾಟಲಿಗಳು ಇರುವ ಬಾಕ್ಸ್ ನೋಡಿದ ಕೆಲವರು ಅಚ್ಚರಿಗೊಂಡಿದ್ದಾರಲ್ಲದೆ ಶಿಕ್ಷಣ ಸಂಸ್ಥೆಯಲ್ಲಿ ಇದೆಂಥ ವಿಪರ್ಯಾಸ ಎಂದು ಹಣೆ ದಿಗ್ ಬ್ರಮೆಗೊಂಡಿದ್ದಾರೆ .
ಈ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿರುವ ಹಳ್ಳೂರಿನ ಹಿರಿಯರಾದ ಸಿದ್ದಪ್ಪ ಕುಲಗೋಡ, ದುಂಡಪ್ಪ ಕುಲಗೋಡ ಹಾಗೂ ಯಮನಪ್ಪ ನಿಡೋಣಿ ಅವರು ಮಾತನಾಡಿ, ಶಾಲೆ ಅಂದರೆ ದೇವಸ್ಥಾನವಿದ್ದಂತೆ ಇಂಥ ಪ್ರಕರಣಗಳು ನಡಿಯಬಾರದು ಎಲ್ಲ ವಿದ್ಯಾರ್ಥಿಗಳು ನೋಡಿದ್ದಾರೆ.ಮಕ್ಕಳು ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ.ಇಷ್ಟಾದರೂ ಮೇಲಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಎಚ್ ವಾಸನ್ ಅವರು ಈ ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ, ನಾನು ರಾತ್ರಿ ಒಂದೂವರೆಯವರೆಗೆ ಶಾಲೆಯಲ್ಲಿಯೇ ಇದ್ದು ಅನಂತರ ಮನೆಗೆ ಹೋಗಿದ್ದೆ. ಇದು ಯಾವಾಗ ನಡೆದಿದೆಯೋ ಒಂದೂ ತಿಳಿಯುತ್ತಿಲ್ಲ. ಬಹುಶಃ ಬೇರೆ ಯಾರೋ ಕುಡಿದು ಇಲ್ಲಿ ಬಾಟಲಿಗಳ ಡಬ್ಬಿ ತಂದು ಇಟ್ಟಿರಬಹುದು ಎನ್ನುತ್ತಾರೆ.
ಏನೇ ಆಗಲಿ ದೇವಸ್ಥಾನವೆಂದು ಪರಿಗಣಿಸಲ್ಪಡುವ ಒಂದು ಶಾಲೆಯಲ್ಲಿ ಮದ್ಯ ಸೇವನೆಯಂಥ ಘಟನೆ ನಡೆದದ್ದು ತೀರಾ ಖಂಡನೀಯ. ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತವೆ ಎಂದು ನಾಗರಿಕರು ಹೇಳುತ್ತಿರುವಾಗ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಶಾಲೆಯ ಪ್ರಧಾನ ಗುರುಗಳು ಸುದ್ದಿಯಾಗುತ್ತಿದ್ದಂತೆ ಸ್ಥಳೀಯ ವರದಿಗಾರನಿಗೆ ಮೇಲಿಂದ ಮೇಲೆ ಫೋನ್ ಮಾಡಿ ಕಿರುಕುಳ ನೀಡಿದ್ದಾರೆ. ಮೇಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ವಿಚಾರಿಸುತ್ತಾರೆಂದು ಕಾದು ನೋಡಬೇಕಾಗಿದೆ