ಬೆಳಗಾವಿ: ಆಶ್ರಯ ಫೌಂಡೇಶನ್ ಮತ್ತು ಜಯಭಾರತ್ ಫೌಂಡೇಶನ್ ವತಿಯಿಂದ ಕರ್ನಾಟಕದ ಏಕೈಕ ಎಚ್ಐವಿ/ ಏಡ್ಸ್ ನಿಂದ ಬಾಧಿತರಾದ ಮಹಿಳೆಯರಿಗೆ ಆಶ್ರಯ ಆರೈಕೆ ಕೇಂದ್ರ ನಿರ್ಮಾಣ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಯಿತು.
ಅನೇಕ ಮಕ್ಕಳು, ಯುವಕರು, ಮಹಿಳೆಯರು ಏಡ್ಸ್ ಖಾಯಿಲೆಗೆ ತುತ್ತಾಗಿ ಬದುಕು ಕಳೆದುಕೊಳ್ಳುತ್ತಿದ್ದಾರೆ. ಏಡ್ಸ್ ಬಾಧಿತರ ಆರೈಕೆ ಮಾಡುವ ಉದ್ದೇಶದಿಂದ ಬೆಳಗಾವಿಯಲ್ಲಿ ಆಶ್ರಯ ಫೌಂಡೇಶನ್ ಮತ್ತು ಜಯಭಾರತ್ ಫೌಂಡೇಶನ್ ದಿಂದ ಆರೈಕೆ ಕೇಂದ್ರ ಕಟ್ಟಡ ನಿರ್ಮಾಣ ಮಾಡಲಾಗುತ್ತಿರುವುದು ಹೆಮ್ಮೆಯ ವಿಷಯ. ಏಡ್ಸ್ ಬಗ್ಗೆ ಹೆಚ್ಚಿನ ಜಾಗೃತ ಕಾರ್ಯಗಳು ನಡೆಸಲಾಗುವುದು. ಕಾರಂಜಿ ಮಠ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಗಳ ಆಶೀರ್ವಾದಿಂದ ಸಮಾಜ ಸೇವೆ ಮಾಡುತ್ತಿದ್ದೆವೆ. ಇದಕ್ಕೆ , ಜನರ ಸಹಕಾರ ಬೇಕಿದೆ ಎಂದು ತಿಳಿಸಿದರು.
ಹೆಚ್‍ಐವಿ ಸೋಂಕಿತ ಮಕ್ಕಳ ಆರೈಕೆ ಮತ್ತು ಬೆಂಬಲ ನೀಡುವುದರೊಂದಿಗೆ ಸೋಂಕಿನೊಂದಿಗೆ ಜೀವಿಸುತ್ತಿರುವ ಅನೇಕ ಮಕ್ಕಳಿಗೆ ಸಾಂತ್ವನ ನೀಡಿ, ಮಕ್ಕಳಿಗೆ ಸುಸಜ್ಜಿತವಾದ ಆರೈಕೆ ಮಾಡಲಾಗುವುದು. ಸಾಮಾಜಿಕ – ಮಾನಸಿಕ ಹಾಗೂ ನೈತಿಕ ಜೀವನದ ಬೆಂಬಲದ ಜೊತೆ ಪೌಷ್ಠಿಕ ಆಹಾರ ನೀಡಲಾಗುವುದು. ಕಟ್ಟಡಕ್ಕೆ ಆರ್ಥಿಕ ಸಹಾಯ-ಸಹಕಾರ ನೀಡಲಾಗುವುದು ಎಂದು ಆಶ್ರಯ ಫೌಂಡೇಶನ್ , ಜಯಭಾರತ್ ಫೌಂಡೇಶನ್ ಅವರು ತಿಳಿಸಿದರು.
ಮಯೂರಾ ಜಯಂತ ಹುಂಬರವಾಡಿ, ಆಶ್ರಯ ಫೌಂಡೇಶನ್ ನಿರ್ದೇಶಕರಾದ ನಾಗರತ್ನ ರಾಮಗೌಡ, ಅರ್ಚನಾ ವಿನೋದ್ ಪದ್ಮನ್ನವರ್, ಪ್ರಮೀಳಾ ಕಾಡ್ರೊಳ್ಳಿ, ಅಭಿನಂದನೆ ಸಲ್ಲಿಸಿದರು .
ಆಶ್ರಯ ಫೌಂಡೇಶನ್ ವತಿಯಿಂದ ಸಂಸ್ಥೆಗೆ ಮಾಡುತ್ತಿರುವ ಪ್ರತಿಯೊಂದು ವ್ಯಕ್ತಿಗೂ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆರ್ ಟಿಒ ಆಯುಕ್ತರಾದ ಎಂ. ಪಿ. ಓಂಕಾರೇಶ್ವರಿ , ಗೋಪಾಲ ಜಿನಗೌಡ , ಜ್ಯೋತಿ ನಜಾರೆ , ಶ್ವೇತಾ ಮಹಾಂತೇಶ್, ಮಹೇಶ್ ಶೆಟ್ಟಿ ಮತ್ತು ದಿನೇಶ್ ನಾಯಕ್ , ಶೋಭಾ ಪೀ ದೊಡ್ಡಣ್ಣವರ್, ಓಂಪ್ರಕಾಶ್ ನಾಯಕ್ , ಸುಭಾಷ್ ವೋಳ್ಕರ್, ಫರ್ವೇಜ್ ಹವಾಲ್ದಾರ್, ಆಶಾ ಯಮಕನಮರಡಿ, ಅರುಣಾ ಸಾರಾಫ್, ಸುಶೀಲ್ ಮುಂಬೈ, ಶಾರದಾ ಬೊಳ್ಮಲ್ , ವಿಜಯ್ ಹನುಮಗೌಡ, ವರ್ಷಾ ಪದ್ಮಣ್ಣವರ್, ರಾಹುಲ್ ಕಲ್ಲನವರ್ , ವಿನೋದ್ , ಜಯಶ್ರೀ ಸೂರ್ಯವಂಶಿ, ಬಾಲಚಂದ್ರ ಪಾಟೀಲ್ ಉಪಸ್ಥಿತರಿದ್ದರು.