ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಸಂಪೂರ್ಣ ಡಿಜಿಟಲೀಕರಣ

Share the Post Now

ಬೆಳಗಾವಿ : ತಮ್ಮ ಕೆಲಸ ಕಾರ್ಯಗಳಿಗೆ ಜನರು ಆಗಮಿಸುತ್ತಿದ್ದಾಗ ಜಿಲ್ಲಾಧಿಕಾರಿ ಕಚೇರಿ ಎಂದಾಕ್ಷಣ ಜನಸಾಮಾನ್ಯರು ಭಯಪಡುತ್ತಿದ್ದ ಒಂದು ಕಾಲ ಈ ಹಿಂದೆ ಇತ್ತು. ಆದರೆ ಇವಾಗ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎಂದಾಕ್ಷಣ ಎಲ್ಲರು ಒಳಪ್ರವೇಶಿಸಿ ಕಚೇರಿ ನೋಡಿದಾಕ್ಷಣ ಅಬ್ಬಾ ಇದು ಡಿಜಿಟಲ್ ಗ್ರಂಥಾಲಯವೋ ಅಥವಾ ಜಿಲ್ಲಾಧಿಕಾರಿ ಕಚೇರಿಯೋ ಎನ್ನುವದು ಭಾಸವಾಗುತ್ತದೆ. ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ. 

    ಹೌದು ಓದುಗರೇ ಇಂತಹ ಒಂದು ದೃಶ್ಯವು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಮಗೆ ನೋಡಲು ಸಿಗುತ್ತದೆ. ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯ ಡಿಸಿ ಕೊಠಡಿ ಎದುರಿಗೆ ಸಾರ್ವಜನಿಕರು ಕುಳಿತುಕೊಳ್ಳುವ ಸ್ಥಳಾವಕಾಶದೊಂದಿಗೆ ಅಲ್ಲಿ ಸಾರ್ವಜನಿಕರಿಗೆ ಓದಲು ವಿವಿಧ ಬಗೆಯ ಪುಸ್ತಕಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಂಗ್ರಹಿಸಿ ಇಡುವ ಮೂಲಕ ಕೆಲಸ ಕಾರ್ಯಕ್ಕಾಗಿ ತಮ್ಮ ಕಚೇರಿಗೆ ಆಗಮಿಸುವ ಜನರಿಗೆ ಅಕ್ಷರದ ಜ್ಞಾನ ನೀಡುವ ಕಾಯಕ ಮಾಡುತ್ತಿದ್ದಾರೆ. 

   ಜಿಲ್ಲಾಧಿಕಾರಿ ಅವರು ಯಾವದೇ ವ್ಯಕ್ತಿಗಳಿಂದ ಹೂ, ಗುಚ್ಚಗಳನ್ನು ಸ್ವೀಕರಿಸದೆ ತಮಗೆ ಅಭಿಮಾನದ ಧ್ಯೋತಕವಾಗಿ ಉಡುಗೂರೆಯಾಗಿ ನೀಡುವ ಪುಸ್ತಕಗಳನ್ನು ಈ ಸ್ಥಳದಲ್ಲಿ ನಿತೇಶ್ ಪಾಟೀಲ ಅವರು ಸಂಗ್ರಹಿಸಿ ಇಡುವದರೊಂದಿಗೆ ಇಲ್ಲಿ ಪುಸ್ತಕ ಪ್ರೇಮವನ್ನು ಮೆರೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಒಳಾಂಗಣವು ಈಗ ಡಿಜಿಟಲ್ ಗ್ರಂಥಾಲಯವಾಗಿ ಮಾರ್ಪಟ್ಟಿರುವದು ಪುಸ್ತಕ ಪ್ರೇಮಿಗಳು ಖುಸಿಪಡುವ ವಿಚಾರವಾಗಿದೆ. 

     ಬೆಳಗಾವಿ ಜಿಲ್ಲಾಧಿಕಾರಿ ಅವರು ಈ ಜ್ಞಾನ ನೀಡುವ ಕಾರ್ಯವು ರಾಜ್ಯದ ಇತರ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮಾದರಿಯಾಗಿದೆ. ನಿತೇಶ ಪಾಟೀಲರ ಈ ಕಾರ್ಯಕ್ಕೆ ನಾಗರಿಕರಿಂದ ಎಲ್ಲೇಡೆ ಮೆಚ್ವುಗೆ ವ್ಯಕ್ತವಾಗತೊಡಗಿದೆ. ತಮ್ಮ ಕೆಲಸ ಕಾರ್ಯಗಳ ನಿಮಿತ್ತವಾಗಿ ಕಚೇರಿಗೆ ಬರುವ ನಾಗರಿಕರು ಸ್ವಲ್ಪ ಸಮಯ ಕಾಲ ಪುಸ್ತಕಗಳನ್ನು ಇಲ್ಲಿ ಓದುವ ಮೂಲಕವಾದರೂ ಅಕ್ಷರ ಜ್ಞಾನವನ್ನು ಬೆಳೆಸಿಕೊಳ್ಳಲು ಉಪಯೋಗವಾಗುತ್ತದೆ ಎನ್ನುವ ಉದ್ದೇಶದಿಂದ ಈ ಕಾರ್ಯ ಮಾಡಿದ್ದಾರೆ.

    ಕಚೇರಿಯಲ್ಲಿ ಪುಸ್ತಕಗಳನ್ನು ಒಮ್ಮೆ ನೋಡಿದರೆ ಸಾಕು ನಾವು ಯಾವ ಡಿಜಿಟಲ್ ಗ್ರಂಥಾಲಯದಲ್ಲಿ ಕುಳಿತುಕೊಂಡಿದ್ದೇವೆ ಎಂಬAತೆ ಅರಿವು ಮೂಡುತ್ತದೆ. ಅಲ್ಲದೆ ಗೋಡೆಗಳ ಮೇಲೆ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಬೆಳಗಾವಿ ಸುವರ್ಣ ವಿಧಾನ ಸಭೆ, ಗೋಕಾಕ ಜಲಪಾತ, ಗೋಡಚಿನಮಲ್ಕಿ ಪಾಲ್ಸ್, ಪ್ರಸಿದ್ದ ದೇವಸ್ಥಾನಗಳು ಸೇರಿದಂತೆ ಜಿಲ್ಲೆಯ ಪ್ರಸಿದ್ದ ತಾಣಗಳ ಪೊಟೊಗಳನ್ನು ಅಳವಡಿಲಾಗಿದ್ದು, ಈ ದೃಶ್ಯ ಕಂಡರೆ ಸಾಕು ನಾವು ಯಾವ ಪೊಟೊ ಲ್ಯಾಬ್‌ದಲ್ಲಿ ಕುಳಿತ್ತಿದ್ದೇವೆ ಎಂಬಂತೆ ಕಂಡು ಬರುತ್ತದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲರ ಈ ನಡೆಗೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Comment

Your email address will not be published. Required fields are marked *

error: Content is protected !!