ಹಳ್ಳೂರ. ಗ್ರಾಮದ ದ್ಯಾಮವ್ವ ದೇವಿ ಹಾಗೂ ಶ್ರಿ ಮಹಾಲಕ್ಷ್ಮೀ ದೇವಿಯ ಭವ್ಯ ಜಾತ್ರಾ ಮಹೋತ್ಸವದಲ್ಲಿ ಬಾಗಿಯಾಗಿ ದೇವರ ದರ್ಶನ ಪಡೆದ ಬೆಳಗಾವಿ ಎಸ್ ಪಿ ಡಾ ಸಂಜುಕುಮಾರ ಪಾಟೀಲ ಅವರು ಮಾತನಾಡಿ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರಿ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಬಾಗಿಯಾಗಿದ್ದು ಕಂಡು ಬರುತ್ತಿದೆ.
ಎಲ್ಲರೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿರಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸಬೇಕು.ದೇವರು ಎಲ್ಲರಿಗೂ ಒಳ್ಳಯದನ್ನು ಮಾಡಲೆಂದು ಶುಭ ಹಾರೈಸಿದರು.ಎಸ್ ಪಿ. ಸಂಜು ಕುಮಾರ ಪಾಟೀಲ ಅವರಿಗೆ ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ.ಹಣಮಂತ ತೇರದಾಳ. ಗ್ರಾಮ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಸುರೇಶ ಕತ್ತಿ. ಗುರು ಹಿಪ್ಪರಗಿ. ಭೀಮಪ್ಪ ರೋಡ್ಡನ್ನವರ. ಅವರೂ ಸನ್ಮಾನ ನೆರವೇರಿಸಿದರು.
ಈ ಸಮಯದಲ್ಲಿ ಸಿ ಪಿ ಐ ಶ್ರೀಶೈಲ ಬ್ಯಾಕೂಡ. ಪಿ ಎಸ್ ಐ ಸೋಮೇಶ ಗೆಜ್ಜೆ ಇದ್ದರೂ. ಮಂಗಳವಾರ ಮುಂಜಾನೆ ದೇವಿಯನ್ನು ಪ್ರತಿಷ್ಠಾಪನೆ ಮಾಡಿದ್ದಕ್ಕೆ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಚಂಡಿ ಹೋಮ, ದುರ್ಗಾ ಹೋಮ, ಜೈ ಹೋಮವನ್ನು ಎಲ್ಲಾ ವತನದಾರರಿಂದ ನೆರವೇರಿಸಿ ಪೂರ್ಣಾವುತಿ ಹೋಮ ಮುಗಿದ ನಂತರ ವತನದಾರರಿಂದ ವಿವಿಧ ವಾದ್ಯ ಮೇಳ ಮೆರವಣಿಗೆಯೊಂದಿಗೆ ದ್ಯಾಮವ್ವ ದೇವಿ ಹಾಗೂ ಮಹಾಲಕ್ಷ್ಮೀ ದೇವಿಗೆ ಉಡಿ ತುಂಬಿ ನೈವೇದ್ಯ ಅರ್ಪಿಸಲಾಯಿತು.
ನಂತರ ಕಪ್ಪಲಗುದ್ದಿ ಗ್ರಾಮಸ್ಥರಿಂದ ದೇವರಿಗೆ ಉಡಿ ತುಂಬಿ ನೈವೇದ್ಯ ಅರ್ಪಿಸಿದರು. ಈ ಸಮಯದಲ್ಲಿ ಗಿರೀಶ ಗೊಡಿಗೌಡರ.ದುಂಡಪ್ಪ ಬಡಿಗೇರ. ಅರ್ಚಕ ಪುಂಡಲಿಕ ಪೂಜೇರ. ರಾಮಗೌಡ ಪಾಟೀಲ. ಸತ್ಯನಾರಾಯಣ ತಮದಡ್ಡಿ. ರವಿ ಪಾಟೀಲ. ಗುರುನಾಥ ಬೊಳನ್ನವರ. ಹಣಮಂತ ಪಾಲಬಾಂವಿ. ಕೆಂಪಣ್ಣ ಕುರಣಿಂಗ. ಲಕ್ಷ್ಮಣ ಕುಡಲಗಿ. ತುಕ್ಕಪ್ಪ ಪಾಟಿಲ ಸೇರಿದಂತೆ ಜಾತ್ರೆಯಲ್ಲಿ ಲಕ್ಷಾಂತರ ಭಕ್ತ ಸಮೂಹ ಸೇರಿತು. ಬಕ್ತರು ಬಂಡಾರದಲ್ಲಿ ಮಿಂದೆದ್ದಿದ್ದರು.





