150ನೇ ವರ್ಷಕ್ಕೆ ಕಾಲಿಟ್ಟ ಬೆಳಗಾವಿ ವಕೀಲರ ಸಂಘ…

Share the Post Now



ಸವಿನೆನಪಿನ ಕಚೇರಿಯನ್ನು ಉದ್ಘಾಟಿಸಿದ ವಕೀಲರು…

ಬೆಳಗಾವಿಯ ವಕೀಲರ ಸಂಘವು 150ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆ ಇಂದು 150ನೇ ವಾರ್ಷಿಕೋತ್ಸವದ ಸವಿನೆನಪಿನ ಕಚೇರಿ ಉದ್ಘಾಟನೆ ಸಮಾರಂಭವು ಅತ್ಯಂತ ಉತ್ಸಾಹದಿಂದ ನಡೆಯಿತು.

ಬೆಳಗಾವಿಯ ವಕೀಲರ ಸಮುದಾಯ ಭವನದ ಸಭಾಂಗಣದ 2ನೇ ಮಹಡಿಯಲ್ಲಿ ಬೆಳಗಾವಿಯ ವಕೀಲರ ಸಂಘದ150ನೇ ವಾರ್ಷಿಕೋತ್ಸವದ ಸವಿನೆನಪಿನ ಕಚೇರಿ ಉದ್ಘಾಟನೆ ಸಮಾರಂಭವು ಅತ್ಯಂತ ಉತ್ಸಾಹದಿಂದ ನಡೆಯಿತು. ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಅಧ್ಯಕ್ಷರಾದ ಬಿ ಜೆ ಗಂಗಾಯಿ, ಹಿರಿಯ ನ್ಯಾಯವಾದಿ ಎ ಜಿ ಕುಲಕರ್ಣಿ, ಅನಿಲ ಸಾಂಬ್ರೇಕರ, ಆರ್.ಜಿ. ಪಾಟೀಲ್, ಅನ್ವರ್ ಬಾರೂದವಾಲೆ, ಶಿಂಧಿಬೆನ್ನೂರ  ಇನ್ನುಳಿದವರು 150ನೇ ಸವಿನೆನಪಿನ ಕಚೇರಿಯನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ 150ನೇ ವರ್ಷದ ಸಂಭ್ರಮವನ್ನು ಅಕ್ಟೋಬರ್ ತಿಂಗಳಲ್ಲಿ ಆಚರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಬೆಳಗಾವಿಗೆ ಸಂಬಂಧಪಟ್ಟ ಎಲ್ಲ ಗೌರವಾನ್ವಿತ ನ್ಯಾಯಮೂರ್ತಿಗಳನ್ನು ಸಮಾರಂಭಕ್ಕೆ ಕರೆಯಿಸಿ, ದೇಶದಲ್ಲೇ ಮಾದರಿಯಾಗುವಂತಹ ಸಂಭ್ರಮಾಚರಣೆ ಮಾಡಲಾಗುವುದು. ವಕೀಲ ಸಂಘದ ವತಿಯಿಂದ ವಕೀಲರ ಅಭಿವೃದ್ಧಿಗಾಗಿ ಕೆಲಸಗಳನ್ನು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಸವರಾಜ್ ಮುಗಳಿ, ಶೀತಲ್ ರಾಮಶೆಟ್ಟಿ, ಯಲ್ಲಪ್ಪ ದೀವಟೆ, ವಿಶ್ವನಾಥ್ ಸುಲ್ತಾನಪುರಿ, ಸುಮೀತ್ ಪುಜೇರ್, ವಿನಾಯಕ್ ನಿಂಗನೂರಿ, ಸುರೇಶ್ ನಾಗನೂರಿ, ಅನೀಲ್ ಪಾಟೀಲ್, ಅಶ್ವಿನಿ ಹವಾಲ್ದಾರ ವಿರಕ್ತಮಠ, ರವೀಂದ್ರ ತೋಟಿಗೇರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು…

Leave a Comment

Your email address will not be published. Required fields are marked *

error: Content is protected !!