ಬೆಳಗಾವಿ : ಮುಂಜಾನೆ 5-30 ಗಂಟೆಗೆ ಪಾಲಿಕೆಯ ಆಯುಕ್ತರು ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ಸೈಕಲ್ಲಿನಲ್ಲಿ ತೆರಳಿ, ವಾಹನಗಳನ್ನು ಪರಿಶೀಲಿಸಿ, ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿ, ಬಯೋಮೆಟ್ರಿಕ ಅಳವಡಿಸುವಂತೆ ಹಾಗು ಎಲ್ಲ ವಾಹನ ಚಾಲಕರಿಗೆ ಹಾಗು ಕ್ಲೀನರ್ಸ ಇವರು ಬೆಳಿಗ್ಗೆ 5-30 ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿಸ್ವತಹ
ಪಾಲಿಕೆಯ ಕಸದ ವಾಹನದಲ್ಲಿ ಕುಳಿತುಕೊಂಡು ಡಿ ಸಿ ಸಿ ಬ್ಯಾಂಕ್ ಹತ್ತಿರ ಕಸ ವಿಲೇವಾರಿ ಮಾಡುವಂತೆ ಸಂಬಂಧಿಸಿದ ನೈರ್ಮಲ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿ, ವಾರ್ಡ ನಂಬರ 43 ರವರೆಗೆ ಸಂಚರಿಸಿ ಶ್ರೀಮತಿ ವಾಣಿ ವಿಲಾಸ ಜೋಶಿ ವಾರ್ಡ ನಂ 43 ರ ನಗರ ಸೇವಕರು ಹಾಗು ಅಧ್ಯಕ್ಷರು, ನಗರ ಯೋಜನೆ ಮತ್ತು ನಗರ ಅಭಿವೃಧ್ದಿ ಸ್ಥಾಯಿ ಸಮಿತಿ ಇವರೊಂದಿಗೆ ಅನಗೋಳ ಸ್ಮಶಾನದ ಸ್ಥಳ ಪರಿಶೀಲಿಸಿ ಅಲ್ಲಿ ಸ್ವಚ್ಜತೆ
ಕಾಪಾಡುವಂತೆ ಹಾಗೂ ಗೀಡಗಳನ್ನು ನೆಡುವಂತೆ/ವಿದ್ಯುತ ದೀಪಗಳನ್ನು ಸರಿಪಡಿಸುವಂತೆ ಹಾಗು ಅಭಿವೃದ್ದಿಪಡಿಸುವಂತೆ ಸೂಚನೆಯನ್ನು ನೀಡಲಾಯಿತು.ಅನಂತರ ವಾರ್ಡ ನಂ.43 ರ ವಾರ್ಡ ಸಂಚರಿಸಿ ಕಸ ವಿಲೇವಾರಿ ಕುರಿತು ಪರಿಶೀಲಿಸಿ, ಕಸ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸುವಂತೆ ನೈರ್ಮಲ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು ಮತ್ತು
ಸಾರ್ವಜನಿಕರೊಂದಿಗೆ ಅವರ ಸಮಸ್ಯೆ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು ಮತ್ತು ಅತೀಕ್ರಮಣ ಮಾಡಿ ಕಟ್ಟಡ ಕಟ್ಟುತ್ತಿರುವ ಕಟ್ಟಡದ ಪರಿಶೀಲನೆ ಮಾಡಿ ಸಂಬಂಧಿತರಿಗೆ ವಿವರ ಸಲ್ಲಿಸುವಂತೆ ಸೂಚಿಸಿದರು.ಅಲ್ಲಿಂದ ಭಾಗ್ಯನಗರ 1&2 ನೇ ಕ್ರಾಸಗೆ ತೆರಳಿ,
ಅಲ್ಲಿನ ಕಸ ವಿಲೇವಾರಿ/ನಾಲಾಗಳ ಸ್ವಚ್ಚತಾ/ಪಾಲಿಕೆಯ ಖುಲ್ಲಾ ಜಾಗೆಗಳ ಪರಿಶೀಲನೆ ಸಂಬಂಧಿಸಿದವರಿಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.