ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಸಂಸ್ಥೆಯು ಕಳೆದ 17 ವರ್ಷಗಳಿಂದ ವಿವಿಧ ಸಾಮಾಜಿಕ ಸೇವೆ ಸಲ್ಲಿಸುತ್ತ ಬಂದಿದ್ದು, ಇಂದು ಭಾರತ ದೇಶದಲ್ಲಿ 68 ಶಾಖೆಗಳು ಹಾಗೂ ವಿಶ್ವದ ವಿವಿಧ ದೇಶಗಳಲ್ಲಿ 28 ಶಾಖೆಗಳನ್ನು ಹೊಂದುವ ಮೂಲಕ ಜಿತೋ ಸಂಸ್ಥೆಯು ವಿಶ್ವದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ ಎಂದು ಜಿತೋ ಅಪೆಕ್ಸ ಅಧ್ಯಕ್ಷ ಅಭಯಕುಮಾರ ಶ್ರಿಶ್ರಿಮಲ್ ಅವರು ಹೇಳಿದರು.
ಇತ್ತಿಚಿಗೆ ಬೆಳಗಾವಿಯಲ್ಲಿ ಜಿತೋ ಬೆಳಗಾವಿ ವಿಭಾಗದ ೨೦೨೩-೨೪ ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಅಧಿಕಾರದ ಪದಗ್ರಹಣ ಸಮಾರಂಭಕ್ಕೆ ಗೌರವ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಜಿತೋ ಸಂಸ್ಥೆಯು ಜೈನ ಸಮಾಜದ ಅಭಿವೃದ್ದಿಯ ಜೊತೆಗೆ ದೇಶದ ಆರ್ಥಿಕ ಪ್ರಗತಿಯನ್ನು ಉನ್ನತಿಕರಿಸುವುದು ಮತ್ತು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಈ ಮೂಲಕ ಸಾಮಾಜಿಕ ಸೇವೆ ಮಾಡುತ್ತಿರುವ ಈ ಸಂಸ್ಥೆಯು ಇಂದು ವಿಶ್ವದ ಗಮನ ಸೆಳೆಯುತ್ತಿದೆ ಎಂದು ಅವರು ಹೇಳಿದರು.
ಉದ್ಯೋಗ , ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಹೊಸದಾಗಿ ಪಾದಾರ್ಪಣೆ ಮಾಡುತ್ತಿರುವ ನವ ಉದ್ಯಮಿಗಳಿಗೆ ಪ್ರೋತ್ಸಾಹ, ಸಹಾಯ, ಸಹಕಾರ ಮತ್ತು ಮಾರ್ಗದರ್ಶನ ನೀಡುವುದು, ಉನ್ನತ ಶೀಕ್ಷಣಕ್ಕಾಗಿ ಸಾಲ ಸೌಲಭ್ಯಗಳನ್ನು ನೀಡುವುದು , ಜೈನ ಮುನಿಗಳ ಆರೋಗ್ಯ ರಕ್ಷಣೆಯ ಯೋಜನೆಗಳು ಸೇರಿದಂತೆ ಹಲವಾರು ಯೋಜನೆಗಳನ್ನು ಜೀತೋ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಆಗಮಿಸಿದ್ದರು. ಸಮಾರಂಭದಲ್ಲಿ ಬೆಳಗಾವಿ ವಿಭಾಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೀರಧವಲ ಉಪಾಧ್ಯೆ, ಉಪಾಧ್ಯಕ್ಷ ಹರ್ಷವರ್ಧನ ಇಂಚಲ, ಪ್ರವೀಣ ಸಾಮಸುಖಾ, ಕಾರ್ಯದರ್ಶಿ ಅಶೋಕ ಕಟಾರಿಯಾ, ಖಜಾಂಚಿ ವಿಜಯಕುಮಾರ ಪಾಟೀಲ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಜಿತೋ ಅಪೆಕ್ಸ ಉಪಾಧ್ಯಕ್ಷರಾದ ರಾಜೇಂದ್ರಕುಮಾರ ಜೈನ, ಕಾಂತಿಲಾಲ ಓಸ್ವಾಲ, ಕುಶಾಲರಾಜ ಬನ್ಸಾಲಿ, ಶ್ರಮಣ ಆರೋಗ್ಯ ಚೇರಮನ್ ರಮೇಶ ಹರಾನ, ನಿದೇರ್ಶಕರಾದ ಹಿತೇಶ ಪಾಲರೇಚಾ, ಮನೋಜ ಜೈನ, ಸರೇಂದ್ರಸಿಂಗ ಸಾಮರ, ಸಂಜಯ ಸೇಥಿಯಾ, ಶೈಲೇಶ ಹರಾನ, ವಿನೋದ ಜೈನ, ಯುವ ಘಟಕದ ಉಪಾಧ್ಯಕ್ಷ ರಜತ ಹರದಿ, ಕೆಕೆಜಿ ವಿಭಾಗದ ಅಧ್ಯಕ್ಷ ಅಶೋಕ ಸಲೇಚಾ, ಉಪಾಧ್ಯಕ್ಷರಾದ ಪ್ರವೀಣ ಬಾಫನಾ, ದಿಲೀಪ ಜೈನ, ಓಂಪ್ರಕಾಶ ಜೈನ, ವಿನೋದ ಬಗೇರೇಚಾ, ಮಹಾವೀರ ಪಾರೆಖ, ಸಂತೋಷ ಪೋರವಾಲ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಮುಕೇಶ ಪೋರವಾಲ ಅತಿಥಿಗಳನ್ನು ಸ್ವಾಗತಿಸಿದರು. ನಿತೀನ ಪೋರವಾಲ, ವಾರ್ಷಿಕ ವರದಿ ವಾಚನ ಮಾಡಿದರು. ಅಶೋಕ ಕಟಾರಿಯಾ ವಂದಿಸಿದರು