ಬೆಳಗಾವಿ: ಚಳಿಗಾಲದ ಅಧಿವೇಶನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಲಿ!

Share the Post Now

ರಾಜ್ಯದ ಎರಡನೇ ರಾಜಧಾನಿ ಕುಂದಾನಗರಿ ಖ್ಯಾತಿಯ ಬೆಳಗಾವಿಯಲ್ಲಿ ನಾಳೆಯಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನವು ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗೆ ಪ್ರಮುಖ ವೇದಿಕೆ ಆಗಲಿ. ಪ್ರಸ್ತುತ ರಾಜ್ಯ ಸರಕಾರ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಘೋಷಣೆ ಮಾಡಿದೆ.

ಬರ ನಿರ್ವಹಣೆ, ಬರ ಪರಿಹಾರ ಕಾಮಗಾರಿ ಯೋಜನೆಗಳ ಅನುಷ್ಠಾನ, ಅಸಮರ್ಪಕ ವಿದ್ಯುತ್ ಪೂರೈಕೆ, ಬೇಸಿಗೆಯ ಮುನ್ನವೇ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವುದು. ಪ್ರಸ್ತುತ ಅಧಿವೇಶನದಲ್ಲಿ ನಮ್ಮ ಜನಪ್ರತಿನಿಧಿಗಳು ವೈಯಕ್ತಿಕ ಆರೋಪ ಪ್ರತ್ಯಾರೋಪ ಪರಸ್ಪರ ಕೆಸರೆರಾಚಾಟ ಮಾಡುವುದನ್ನು ದೂರಿಕರಿಸಿ ರಾಜ್ಯದ ಜನತೆ ಸದ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಚಿಂತನ ಮಂಥನ ಮಾಡಬೇಕಾಗಿದೆ. ಕೆಲವೇ ಕೆಲವು ದಿನಗಳು ನಡೆಯುವ ಈ ಮಹತ್ವದ ಅಧಿವೇಶನ ಕಾಟಾಚಾರವಾಗದಿರಲಿ. ಹಲವು ತಿಂಗಳುಗಳು ರಾಜ್ಯದಲ್ಲಿ ಪ್ರತಿಪಕ್ಷಗಳ ಮುಖಂಡರು ಇಲ್ಲದೆ ಈ ಹಿಂದೆ ಎರಡು ಅಧಿವೇಶನಗಳು ನಡೆದು ಹೋಗಿವೆ. ಇದೀಗ ಬಿ.ಜೆ.ಪಿ.ಜೆ.ಡಿ.ಎಸ್.ನಡುವೆ ಮಧುರ ಮೈತ್ರಿಯ ನಂತರ ಇದು ಮೊದಲ ಅಧಿವೇಶನವಾಗಿದ್ದು,

ಗ್ಯಾರಂಟಿ ಘೋಷಣೆಗಳ ಅನುಷ್ಠಾನದ ಹೊಂಡದಲ್ಲಿಯೇ ಸಂಪೂರ್ಣ ಮುಳುಗಿ ಹೋಗಿರುವ ರಾಜ್ಯ ಸರಕಾರವನ್ನು ಈ ಚಳಿಗಾಲದಲ್ಲಿ ಚಳಿ ಬಿಡಿಸಲು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡ ಪ್ರತಿಪಕ್ಷಗಳು ಒಗ್ಗೂಡಿ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳನ್ನೇ ಅಸ್ತ್ರವನ್ನಾಗಿಸಿಕೊಂಡು ಈ ಚಳಿಗಾಲದ ಅಧಿವೇಶನವು ಗಂಭೀರ ಹಾಗೂ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಾಗಲಿ.

*ಡಾ. ಜಯವೀರ ಎ.ಕೆ*. *ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!