ಬೆಳಗಾವಿ :ಬಡ ಕುಟುಂಬಕ್ಕೆ ಮನೆ ಕೀ ಹಸ್ತಾಂತರಿಸಿದ ಸಚಿವೆ ಹೆಬ್ಬಾಳಕರ್

Share the Post Now

ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದಲ್ಲಿ ಸುಮಾರು 7 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಬಡ ಕುಟುಂಬಕ್ಕಾಗಿ ನಿರ್ಮಿಸಲಾಗಿರುವ ಮನೆಯ ಕೀಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಹಸ್ತಾಂತರಿಸಿದರು.
ಜೊಯ್ ಆಲುಕ್ಕಾಸ್ ಫೌಂಡೇಷನ್ ವತಿಯಿಂದ ಮನೆ ನಿರ್ಮಾಣವಾಗಿದ್ದು, ಜೊಯ್ ಆಲುಕ್ಕಾಸ್ ಫೌಂಡೇಷನ್ ನ ಈ ಮಹತ್ತರ ಕಾರ್ಯ ಇತರ ಉದ್ಯಮಿಗಳಿಗೆ ಮಾದರಿಯಾಗಲಿ ಹಾಗೂ ಬಡವರಿಗೆ ಸಹಾಯ ಮಾಡುವಂತಾಗಲಿ ಎಂದು ಈ ವೇಳೆ ಲಕ್ಷ್ಮೀ ಹೆಬ್ಬಾಳಕರ್ ಆಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಜೊಯ್ ಆಲುಕ್ಕಾಸ್ ನ ರೀಜನಲ್ ಮ್ಯಾನೆಜರ್ ಜಿನೇಶ್, ದರ್ಗಾ ಅಜ್ಜನವರಾದ ಅಶ್ರಫ್ ಪೀರ್ ಖಾದ್ರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮೀತಾ ಪಾಟೀಲ, ಸಿ ಸಿ ಪಾಟೀಲ, ಬಿ ಎನ್ ಪಾಟೀಲ, ಸಮೀನಾ ನದಾಫ್, ಬಿ ಆರ್ ಪಾಟೀಲ, ಸದ್ದಾಂ ನದಾಫ್, ಸೈಯದ್ ಸನದಿ, ಕತಾಲ್ ಗೋವೆ, ಆನಂದ ಪಾಟೀಲ, ಮಹಮ್ಮದ್ ಗೌಸ್ ಬಂಕಾಪುರ ಹಾಗೂ ಜೊಯ್ ಆಲುಕ್ಕಾಸ್ ಫೌಂಡೇಷನ್ ನ ಸಿಬ್ಬಂದಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!