ಹಿಂಡಲಗಾ ಕಾರಾಗೃಹಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ಧೀಡಿರ್ ಭೇಟಿ

Share the Post Now

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಅವರು ಧಿಡೀರ್ ಭೇಟಿ ನೀಡಿದ ಕಾರಾಗೃಹದ ಭದ್ರತೆ ಪರಿಶೀಲಿಸಿ, ಖೈದಿಗಳ ಅಕ್ರಮಕ್ಕೆ ಅವಕಾಶ ನೀಡದಂತೆ ತೀವ್ರ ನಿಗಾ ವಹಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಿಂಡಲಗಾ ಕಾರಾಗೃಹದಲ್ಲಿ ಖೈದಿಗಳು ಪರಸ್ಪರ ಹಲ್ಲೆ ಮಾಡುವುದು. ಮೊಬೈಲ್ ಬಳಕೆ ಮಾಡುವುದು ಸೇರಿದಂತೆ ಹಲವು ಅಕ್ರಮಗಳು ಜರುಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೈಲಿಗೆ ಭೇಟಿ ನೀಡಿದ ಅವರು, ಸ್ವತಃ ಜೈಲಿನ ಭದ್ರತೆ ಪರಿಶೀಲಿಸಿದರು.

ಯಾವುದೇ ಕೈದಿಗಳಿಗೂ  ಕಾನೂನು ಬಾಹಿರವಾಗಿ ಯಾವುದೇ ವ್ಯವಸ್ಥೆ ಒದಗಿಸದಂತೆ ಸಿಬ್ಬಂದಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಕಾರಾಗೃಹದ ಆಂತರಿಕ ಭದ್ರತೆ ವ್ಯವಸ್ಥೆ ಪರಿಶೀಲಿಸಿ, ಸಭೆ ನಡೆಸಿದ ಅವರು, ಸ್ಥಳೀಯ ಸಿಬ್ಬಂದಿಯಿಂದ ಸಂಪೂರ್ಣ ಮಾಹಿತಿ ಪಡೆದರಲ್ಲದೇ, ಕಟ್ಟಿನಿಟ್ಟಿನ ಕಣ್ಗಾವಲು ಇಡಬೇಕು. ಯಾವುದೇ ಕಾರಣಕ್ಕೂ ಸಿಬ್ಬಂದಿಗಳು ನಿಯಮಬಾಹಿರವಾಗಿ ಖೈದಿಗಳಿಗೆ ಸಹಕರಿಸಬಾರದು ಎಂದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಾಗೃಹ ಭೇಟಿಗೆ ವಿಶೇಷ ಅರ್ಥಕೊಡುವ ಅವಶ್ಯಕತೆ ಇಲ್ಲ. ಕಾಲಕಾಲಕ್ಕೆ ಕಾರಾಗೃಹದ ಭದ್ರತಾ ಸಭೆ ನಡೆಸಬೇಕಿದೆ. ಹೀಗಾಗಿ, ಇಂದು ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಹಾಗೂ ಕಾರಾಗೃಹದ ಅಧೀಕ್ಷಕರ ಜತೆಗೆ ಸಭೆ ನಡೆಸಿದ್ದೇವೆ.  ಖೈದಿಗಳಿರುವ ಸೆಲ್‌ಗಳ ಭೇಟಿ ಮಾಡಿಲ್ಲ. ಜೈಲಿನಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆಯಿಂದ ಜಾಮರ್ ಅಳವಡಿಸಲಿ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಅತ್ಯಾಧುನಿಕ ಜಾಮರ್ ಅಳವಡಿಕಲೆಯಾಗಲಿದ್ದು, ಇದೆಲ್ಲ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.  

ಮರಣದಂಡನೆ ಶಿಕ್ಷೆಗೆ ಗುರಿಯಾದವರು 30 ಜನ ಸೇರಿದಂತೆ ಸಧ್ಯ ಜೈಲಿನಲ್ಲಿ 950 ಖೈದಿಗಳು ಇದ್ದಾರೆ. ಇತ್ತೀಚೆಗೆ ಜೈಲಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆದಿವೆ. ಖೈದಿಗಳನ್ನು ವಿಚಾರಣೆ ಹಾಗೂ ಚಿಕಿತ್ಸೆ ಸೇರಿದಂತೆ ವಿವಿಧ ಕಾರಣಗಳಿಂದ ಹೊರಕಳುಹಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ಹಲವು ಕ್ರಮ ಕೈಗೊಳ್ಳಲು ಸಲಹೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಹೇಳಿದರು.

ಈ ಸಂದರ್ಭದಲ್ಲಿ ಐಎಸ್‌ಡಿ ಎಸ್ಪಿ ಅರುಣ ರಂಗರಾಜನ್, ಕಾರಾಗೃಹದ ಮುಖ್ಯ ಅಧಿಕ್ಷಕ ಕೃಷ್ಣಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಸ್.ಟಿ.ಶೇಖರ್  ಸೇರಿದಂತೆ ಇತರ ಅಧಿಕಾರಿಗಳಿದ್ದರು.

Leave a Comment

Your email address will not be published. Required fields are marked *

error: Content is protected !!