ಬೆಳಗಾವಿ ಚೆನ್ನಮ್ಮ ವೃತ್ತದಿಂದ ಕಾಕತಿವೇಸ ರಸ್ತೆಯವರೆಗೆ ಬಿದಿಯಬದಿ ರಸ್ತೆಯಲ್ಲಿರುವ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ
ಬೆಳಗಾವಿಯ ಪೋರ್ಟರೋಡನಲ್ಲಿರುವ ಅಂಗಡಿಯವರು ಅತಿಕ್ರಮಣದಿಂದ ಇರಿಸಲಾದ ಬೋರ್ಡ ಹಾಗು ಕೆಲ ವಸ್ತುಗಳನ್ನು ಸಂಚಾರಿ ಪೊಲೀಸರು ಪಾಲಿಕೆಯವರ ಸಹಾಯದಿಂದ ವಶಕ್ಕೆ ಪಡೆದಿದ್ದರು ಇವತ್ತು ಕೂಡಾ ಸಂಚಾರಿ ಪೊಲೀಸರು ಮೇಲಾಧಿಕಾರಿಗಳ ಸೂಚನೆಯಂತೆ ತಮ್ಮ ಕಾರ್ಯವನ್ನು ಮಾಡಿರುವಂತಿದೆ
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ವಿನಾಯಕ ಬಡಿಗೇರ್ ಅವರು ನಾವು ಮೇಲಾಧಿಕಾರಿಗಳ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ ಇಲ್ಲಿ ಹಲವು ವರ್ಷಗಳಿಂದ ಟ್ರಾಪಿಕ ಕಿರಿ ಕಿರಿ ಯಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ ನಿಮಗೆ ಅಧಿಕೃತವಾಗಿ ಅಂಗಡಿ ಬೇಕಾದರೆ ಕಾರ್ಪೊರೇಷನ್ ಅವರ ರೀತಿಯ ರಿವಾಜಿನಲ್ಲಿ ಪರವಾನಿಗೆ ಪಡೆದುಕೊಳ್ಳಿ ಎಂದರು .
ಬಿದಿ ಬದಿ ವ್ಯಾಪಾರಿಗಳು ಮಾತನಾಡಿ ನಮ್ಮ ತಾಯಿಯವರು ಸುಮಾರು ೪೦ ವರ್ಷಗಳಿಂದ ಇಲ್ಲಿ ಅಂಗಡಿಗಳನ್ನು ಇಟ್ಟು ನಮ್ಮನ್ನೆಲ್ಲಾ ಸಾಕಿದ್ದಾರೆ ನಾವು ಯಾವದೇ ರೀತಿ ಭ್ರಷ್ಟಾಚಾರ ಮಾಡುತ್ತಿಲ್ಲ ದುಡಿದು ತಿನ್ನುವ ನಮ್ಮ ಮೇಲೆ ಈ ರೀತಿ ದೌರ್ಜನ್ಯ ಸರಿಯಲ್ಲ ನಾವು ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆದಿಲ್ಲ ನಾವು ಬಡುವರು ನಮ್ಮ ಕುಟುಂಬದವರು ನಮ್ಮನ್ನೆ ನಂಬಿರುತ್ತಾರೆ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ ದಯಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಬೇಸರ ವ್ಯಕ್ತಪಡಿಸಿದರು .
ಒಟ್ಟಿನಲ್ಲಿ ಸಂಚಾರಿ ಪೊಲೀಸರು ಅಂಗಡಿ ಮುಂಗಟ್ಟಿನ ವ್ಯಾಪಾರಿಗಳ ಅಂಗಡಿಯನ್ನು ವಶಕ್ಕೆ ಪಡೆಯುವಾಗ ಅಧಿಕಾರಿಗಳ ಮೇಲೆ ಬೇಸರ ವ್ಯಕ್ತಪಡಿಸಿದರು