ಬೆಳಗಾವಿ:ಶಾಲೆಗೆ ಬೀಗ ಹಾಕಿದ್ದ ಶಿಕ್ಷಕಿಯ ಅಮಾನತ್ತು

Share the Post Now


ಬೆಳಗಾವಿ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿನ ಶಹಾಪುರ ಕಚೇರಿಗಲ್ಲಿ ಶಿಕ್ಷಕರು ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಗೆ ನಂ.8ಕ್ಕೆ ಬೀಗ ಹಾಕಿ ಮಕ್ಕಳಿಗೆ ಸ್ವಯಂ ಘೋಷಿತ ರಜೆ ಘೋಷಣೆ ಮಾಡಿದ್ದ ಶಿಕ್ಷಕಿ ಎಂ.ಎಂ.ಹಲಗವಾಡೆ ಅವರನ್ನು ಅಮಾನತ್ತು ಮಾಡಿ ಬಿಇಓ ರವಿ ಭಜಂತ್ರಿ ಆದೇಶ ಹೊರಡಿಸಿದ್ದಾರೆ.


ಶಾಲೆಗೆ ಬೀಗ ಹಾಕಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕುರಿತು ಡಿಡಿಪಿಐ ಲೀಲಾವತಿ ಹಿರೇಮಠ ಅವರ ಗಮನಕ್ಕೆ ತರಲಾಗಿದ್ದ ಹಿನ್ನೆಲೆಯಲ್ಲಿ. ಕೂಡಲೇ ಬಿಇಓ ರವಿ ಭಜಂತ್ರಿ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಿದ್ದರು.

ಅದರಂತೆ ನೋಟಿಸ್ ನೀಡಿದ್ದ ರವಿ ಭಜಂತ್ರಿ ಅವರು ಇಂದು ಎ.ಎಂ. ಹಲಗವಾಡೆ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.


ಇನ್ನೂ ಬೆಳಗಾವಿ ಗ್ರಾಮೀಣ ವಲಯ ವ್ಯಾಪ್ತಿಯ ಶಿಕ್ಷಕ ಶ್ರೀಕಾಂತ ತಾವರೆ ಅಮಾನತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ದಾಸನಪ್ಪನವರ ಅಮಾನತ್ತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *

error: Content is protected !!