ಬೆಳಗಾವಿ.
ರೈಲ್ವೆ ಅಧಿಕಾರಿಗಳಾದ ಶ್ರೀ ವಿ ಕೆ ಅಗ್ರವಾಲ,ವಿಜಯಕುಮಾರ,ಅಲೋಕ ಕುಮಾರ,ಆಸೀಪ ಹಫೀಜ, ಆಂಜನೇಯಲು ಮಾಹಿತಿ ನೀಡಿ ಸಹಕರಿಸಿದರು.
ಉತ್ತರ ಪ್ರಾಂತ ಅಂದರೆ ಉತ್ತರ ಕರ್ನಾಟಕದ ಸುಮಾರು 19ಜಿಲ್ಲಗಳಿಂದ 1333 ರಾಮಭಕ್ತರು ಈ ರೈಲ್ವೆಯಲ್ಲಿ ಪ್ರಯಾಣ ಮಾಡುತ್ತಾರೆ.
ಅಯೋಧ್ಯೆಯ 19ರ ಮಧ್ಯಾಹ್ನ 11ಘಂಟೆ ತಲುಪಿ ಅಯೋಧ್ಯೆಯಲ್ಲಿ ದರ್ಶನ ಮುಗಿಸಿ 20ರಾತ್ರಿ ಹೊರಟು 22 ಮುಂಜಾನೆ ಬೆಳಗಾವಿ ತಲುಪುವುದು. ಬೆಳಗಾವಿ ಜಿಲ್ಲೆಯಿಂದ ಮಹಿಳೆಯರು ಸೇರಿ 200ಜನ ಭಕ್ತರು ಹೋಗುತ್ತಿದ್ದಾರೆ.
ಪೂಜ್ಯ ಚಂದ್ರಶೇಖರ ಶೇಖರ ಶಿವಾಚಾರ್ಯ ಸ್ವಾಮೀಜಿ ಎಲ್ಲಭಕ್ತರಿಗೆ ಆಶೀರ್ವದಿಸುತ್ತ ತಾವು ಅಯೋಧ್ಯೆಯಲ್ಲಿ ಹೋದಾಗ ಭಕ್ತಿಪರವಶನಾದೆ ಪ್ರಭು ಶ್ರೀರಾಮನ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ,ರಾಮರಾಜ್ಯ ಆಗುವ ದಿನ ದೂರ ಇಲ್ಲ ಅಯೋಧ್ಯೆ ಪ್ರವಾಸಿಕೇಂದ್ರ ಅಲ್ಲ ಅದು ಭಕ್ತಿಯ, ಆದರ್ಶದ ಕೇಂದ್ರ ಆಗಲಿ ನಾವು ಎಲ್ಲರೂ ದೇಶದ ಉನ್ನತಿಗಾಗಿ ಕಾರ್ಯ ಮಾಡೋಣ ಎಂದು ನುಡಿದರು.ಪೂಜ್ಯ ಯತೀಶಾನಂದ ಸ್ವಾಮೀಜಿ ಕಾಗವಾಡ,ಪೂಜ್ಯ ಉಧ್ಧವಾನಂದ ಸ್ವಾಮೀಜಿ ಪೂಜ್ಯ ವಲ್ಲಭ ನಿಮಾನಿ ಪ್ರಭೂಜಿ ಇಸ್ಕೋನ ಸ್ವಾಮೀಜಿ ಉಪಸ್ಥಿತರಿದ್ದರು.
10,30 ರೈಲ್ವೆಗೆ ರೈಲ್ವೆಯ ಅಧಿಕಾರಗಳ ಸಂಗಡ ಹಸಿರು ನಿಶಾನೆ ತೋರಿ ಚಾಲನೆ ನೀಡಲಾಯಿತು.
ಹರೇ ರಾಮ ಪಂತದ ಸ್ವಾಮೀಜಿ,
ರಾಯಭಾಗದ ಪೂಜ್ಯ ಸ್ವಾಮೀಜಿಯವರು ವಿಶ್ವ ಹಿಂದುಪರಿಷತ್ತ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಕದಮ್,ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಡಾ ಆರ್ ಕೆ ಬಾಗಿ ನಂದು ದೇಶಪಾಂಡೆ,ಮುನಿಸ್ವಾಮಿ ಭಂಡಾರಿ ಪ್ರಾಂತ ಕೋಶಾಧ್ಯಕ್ಷ ಕ್ರಷ್ಣ ಭಟ್ಟ, ಜಿಲ್ಲಾ ಕಾರ್ಯದರ್ಶಿ ಆನಂದ ಕರಲಿಂಗಣ್ಣವರ,ಅಚ್ಯುತ ಕುಲಕರ್ಣಿ ,ವಿಠಲ ಮಾಳಿ ಮುಂತಾದವರು ಬೀಳ್ಕೊಟ್ಟರು 200ಜನ ರಾಮಭಕ್ತರು ಅಯೋಧ್ಯೆಗೆ ಪ್ರಯಾಣ ಬೆಳೆಸಿದರು