ಬೆಳಗಾವಿ
ನಗರದ ಕ್ಯೂಮ್ ಪಾರ್ಕ್‌ನಲ್ಲಿ 4.25ರಿಂದ 27ರವರೆಗೆ ಜರುಗುತ್ತಿರುವ ಸಸ್ಯ ಸಂತೆಯಲ್ಲಿ ಮಾವು ಪೇರು, ಸೇಬು, ಕಿತ್ತಳೆ, ವಿವಿಧ ಜಾತಿ ಹಣ್ಣುಗಳು, ಅಲಂಕಾರಿಕ ಹೂವುಗಳು ಸೇರಿ ಬರೋಬ್ಬರಿ 1ಲಕ್ಷ ಸಸಿಗಳನ್ನು ಪ್ರದರ್ಶನಕ್ಕೆ ಈಡಲಾಗಿದೆ. ಇದರಲ್ಲಿ ಮಿಯಾಜಾತಿ ತಳೆಯ ಎರಡು ಮಾವಿನ ಸಸಿಗಳು ಕೇಂದ್ರ ಬಿಂದುವಾಗಿವೆ.
ಜಪಾನದಲ್ಲಿ ಹೆಚ್ಚಾಗಿ ಬೆಳೆಯುವ ಮಿಯಾಜಾಕಿ ಮಾವಿನ ಹಣ್ಣು ವಿಶ್ವದಲ್ಲೇ ದುಬಾರಿ, ಕಳೆದ ವರ್ಷ ದೇಶದ ವಿವಿಧ ರಾಜ್ಯಗಳಲ್ಲಿ ಈ ಹಣ್ಣು ಒಂದು ಕೆಜಿಗೆ 2.50 ಲಕ್ಷ ರೂ.ಗೆ ಮಾರಾಟವಾಗಿತ್ತು. ಅಲ್ಲದೆ ದೇಶ, ವಿದೇಶಗಳಿಗೆ ಹೋಗಿ ಇದನ್ನು ಖರೀದಿಸಿ ತಂದಿದ್ದರು. ಈ ದುಬಾರಿ ಮಾವಿನ ಸಸಿಗಳನ್ನು ಈಗ ಬೆಳಗಾವಿ ಹೂಮ್ ಪಾರ್ಕ್‌ನಲ್ಲಿ ಪ್ರದರ್ಶನಕ್ಕೆ ಈಡಲಾಗಿದೆ. ಈ ಒಂದು ಸಸ್ಯದ ಬೆಲೆ 4,500 ರೂ.ದಿಂದ ಆರಂಭವಾಗುತ್ತದೆ.ಹಾಗಾಗಿ ಇದನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದಾರೆ.
ಅಲ್ಲದೆ, ಉತ್ತಮ ಗುಣಮಟ್ಟದ ಹೂವಿನ ಅಲಂಕಾರಿಕ ಸಸಿಗಳು, ಹಣ್ಣಿನ ಸಸಿಗಳು, ತಾಳೆ ಸಸಿಗಳು, ಅಣಬೆ ಉತ್ಪನ್ನಗಳು, ಜೇನು ಉತ್ಪನ್ನಗಳು, ಬೆಳಗಾವಿಯಲ್ಲಿ ಉತ್ಪಾದಿಸಿದ ವಿವಿಧ ಜೈವಿಕ ಗೊಬ್ಬರ, ರೋಗ ಮತ್ತು ಕೀಟನಾಶಕ ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಎರೆ ಜಲ, ಎರೆಹುಳು ಗೊಬ್ಬರ ಮಾರಾಟ ಮಾಡುತ್ತಿರುವುದು ವಿಶೇಷ. ಮೊದಲ ದಿನವೇ ಜಿಲ್ಲೆಯ ಹಲವು ಭಾಗಗಳಿಂದ ವಿವಿಧ ಮಾದರಿಯ ಸಸಿ ಖರೀದಿಸಲು ಸಾರ್ವಜನಿಕರು
ಬೆಳಗಾವಿ ನಗರದ ಹೂಮ್ ಪಾರ್ಕ್‌ನಲ್ಲಿ ಜರುಗುತ್ತಿರುವ ಸಸ್ಯ ಸಂತೆಯಲ್ಲಿ ಮಿಯಾಜಾಕಿ ಮಾವಿನ ಸಸಿ ಪ್ರದರ್ಶನಕ್ಕಿಡಲಾಗಿದೆ.
ಸಂಸದೆ ಮಂಗಲ ಅಂಗಡಿ ಚಾಲನೆ ಬೆಳಗಾವಿ ನಗರದ ಹೂಮ್ ಪಾರ್ಕ್‌ನಲ್ಲಿ ಸಸ್ಯ ಸಂತೆ, ತೋಟಗಾರಿಕೆ ಅಭಿಯಾನ ಮತ್ತು ತಾಳೆ ಬೆಳೆ ಸಸಿ ವಿತರಣಾ ಕಾರ್ಯಕ್ರಮಕ್ಕೆ ಸಂಸದೆ ಮಂಗಲ ಅಂಗಡಿ, ಶಾಸಕ ರಾಜು ಸೇಲ್ ಉದ್ಘಾಟಿಸಿದರು. ಬಳಿಕೆ ಸಸ್ಯ ಮಾರಾಟ ಮಳಿಗೆಯಲ್ಲಿರುವ ವಿವಿಧ ಹಣ್ಣು ವೀಕ್ಷಣೆ ಮಾಡಿದರು. ಮಹಾಂತೇಶ ಮುರಗೋಡ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇತರರಿದ್ದರು.
ಆಗಮಿಸಿದ್ದರು, ರೈತರು, ಗ್ರಾಹಕರು ತಮಗೆ ಅವಶ್ಯವಿರುವ ಸಸ್ಯಗಳು ಹಾಗೂ ವಸ್ತುಗಳನ್ನು ಖರೀದಿಸಿ ತೋಟಗಾರಿಕೆ ಉತ್ಪನ್ನಗಳಿಗೆ ಉತ್ತೇಜನ ನೀಡಿದರು,