ಬೆಳಗಾವಿ ಮತ್ತು ಸುತ್ತಮುತ್ತಲಿನ ಹಿರಿಯ ನಾಗರಿಕರನ್ನು ಗೌರವಿಸಲು, ಸಂಜೀವಿನಿ ಫೌಂಡೇಶನ್ ಮೂಲಕ ಅವರನ್ನು ಹುರಿದುಂಬಿಸಲು “ಉಮಂಗ್ 2023” ಎಂಬ ಭವ್ಯವಾದ ನೃತ್ಯ ಮತ್ತು ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಯೋವೃದ್ಧರಿಗೆ ಆಧಾರ್ ಎಂಬ ಪರಿಕಲ್ಪನೆಯೊಂದಿಗೆ ವೃದ್ಧರಿಗೆ ನೆರವಾಗಲು ಸದಾ ಸಿದ್ಧವಾಗಿರುವ ಸಂಜೀವಿನಿ ಫೌಂಡೇಶನ್ ವತಿಯಿಂದ ಹಲವು ಸಾಮಾಜಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಅಕ್ಟೋಬರ್ ಒಂದರ ಹಿರಿಯ ನಾಗರಿಕರ ದಿನಾಚರಣೆಯಂದು ಹಿರಿಯ ನಾಗರಿಕರ ವೈವಿಧ್ಯಮಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಗಾಯನ ಸ್ಪರ್ಧೆಗಳು, ವೈಯಕ್ತಿಕ ನೃತ್ಯಗಳು ಮತ್ತು ಸಮೂಹ ನೃತ್ಯಗಳನ್ನು ಆಯೋಜಿಸಲಾಗಿದೆ. ಬೆಳಗಾವಿಯಲ್ಲಿ ಹಿರಿಯ ನಾಗರಿಕರಿಗಾಗಿ ಇಂತಹ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲು.ಸ್ಪರ್ಧೆಗಳ ಬಹುಮಾನವು ನಗದು ಮತ್ತು ಪದಕದ ರೂಪದಲ್ಲಿರುತ್ತದೆ.
ಮೊದಲಿಗೆ ಈ ಸ್ಪರ್ಧೆಯು ಆನ್ಲೈನ್ ಸ್ವರೂಪದಲ್ಲಿರುತ್ತದೆ ಮತ್ತು ಉತ್ತಮ ಐದು ಸ್ಪರ್ಧಿಗಳು ಅಕ್ಟೋಬರ ಒಂದರಂದು ಲೋಕಮಾನ್ಯ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಮ್ಮ ಕಲೆಯನ್ನು ಪ್ರಸ್ತುತಪಡಿಸಬೇಕು. ನಿಮ್ಮ ಹಾಡು ಅಥವಾ ನೃತ್ಯದ ವಿಡಿಯೋ ಕ್ಲಿಪ್ ಅನ್ನು ವಾಟ್ಸ್ ಅಪ್ ಮೂಲಕ ಆಗಸ್ಟ್ ಮೂವತ್ತೊಂದರ ಒಳಗಾಗಿ ಕಳುಹಿಸಿ. ವೀಡಿಯೊ ಸರಿಸುಮಾರು ಎರಡು ನಿಮಿಷಗಳ ಕಾಲ ಇರಬೇಕು. ಅಲ್ಲದೆ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಆರರಿಂದ ಎಂಟು ಮಂದಿ ಸದಸ್ಯರಿರಬೇಕು.
ಅರವತ್ತು ವರ್ಷಕ್ಕೂ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆಯ ವಿವರವಾದ ಮಾಹಿತಿ, ಅರ್ಜಿ, ನಿಯಮಗಳು ಮತ್ತು ಷರತ್ತುಗಳಿಗಾಗಿ ಸಂಜೀವಿನಿ ಫೌಂಡೇಶನ್, ಆದರ್ಶ ನಗರ, ವಡಗಾಂವ್ , ಬೆಳಗಾವಿ ಅಥವಾ 9448191266 , 7349670146 ಅನ್ನು ಸಂಪರ್ಕಿಸಿ. ಎಂದು ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಮದನ್ ಬಾಮನೆ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಇಒ ಮದನ್ ಬಾಮನೆ ,ಸಂಸ್ಥಾಪಕಿ ಡಿ.ಆರ್.ಸವಿತಾ ದೇಜಿನಾಳ್, ಸಲಹಾ ಮಂಡಳಿ ಸದಸ್ಯೆ ಡಿ.ಆರ್.ನವೀನಾ ಶೆಟ್ಟಿಗಾರ್,ಡಾ.ಸುರೇಖಾ ಪೋತೆ,
ನಿರ್ದೇಶಕಿ ರೇಖಾ ಬಾಮನೆ ಉಪಸ್ಥಿತರಿದ್ದರು