ಬೆಳಗಾವಿ
ವರದಿ :ಸಚಿನ ಕಾಂಬ್ಳೆ
ಅಥಣಿ:ತಾಲ್ಲೂಕಿನ ಸಪ್ತಸಾಗರ ಗ್ರಾಮದಲ್ಲಿ ಬಿಎಲ್ಒ ಆಗಿ ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಪ್ತಸಾಗರ ಸಹಶಿಕ್ಷಕರಾದ ಅನ್ವರ ಮುಲ್ಲಾ ಇವರಿಗೆ ಉತ್ತಮ ಬಿಎಲ್ಇ ಪ್ರಶಸ್ತಿ ಲಭಿಸಿದೆ.
13ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಜೆ ಎ ಹಾಯಸ್ಕೂಲ್ ಅಥಣಿಯಲ್ಲಿ ನಡೆದ ತಾಲೂಕಾ ಮಟ್ಟದ ಕಾರ್ಯಕ್ರಮದಲ್ಲಿ ತಹಸೀಲ್ದಾರರು ಹಾಗೂ ನ್ಯಾಯಾಧೀಶರು ಮುನಿಸಿಪಲ್ ಕೋರ್ಟ್ ಅಥಣಿ ಇವರು ಎ ಕೆ ಮುಲ್ಲಾ ಸಹ ಶಿಕ್ಷಕರು ಸ ಕ ಹಿ ಪ್ರಾ ಶಾಲೆ ಸಪ್ತಸಾಗರ ಇವರಿಗೆ ಉತ್ತಮ ಬಿಎಲ್ ಓ ಪ್ರಶಸ್ತಿಯನ್ನು ನೀಡಿ ಸನ್ಮಾಸಿದ್ದಾರೆ.
ಇದರಿಂದಾಗಿ ಶಾಲಾ ಸಿಬ್ಬಂದಿ ವರ್ಗ,ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.