ಚಿಕ್ಕೋಡಿ :ಭಾರತ ಜೂಡೋ ಯಾತ್ರೆಯ ಅಂತಿಮ ದಿನವಾದ ಇಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ ಚಿಂಗಳೆ ಇವರ ನೇತೃತ್ವದಲ್ಲಿ ರಾಷ್ಟ್ರಧ್ವಜಾರೋಹಣವನ್ನ ನೆರವೇರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಿಂಗಳೆ ಅವರು ಪ್ರಾಸ್ತಾನಿಕವಾಗಿ ಮಾತನಾಡಿ ಸನ್ಮಾನ್ಯ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ 3970ಕಿ.ಮೀ. ಭಾರತ ಐಕ್ಯತಾ ಯಾತ್ರೆಯು ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿರುವುದರಿಂದ ಯಾತ್ರೆಯ ಮುಕ್ತಾಯದ ಭಾಗವಾಗಿ ನಾವಿಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಜೂಡೋ ಯಾತ್ರೆಯನ್ನ ಇತಿಹಾಸದ ಪುಟಕ್ಕೆ ದಾಖಲಿಸಿದ್ದೇವೆ ಎಂದುರು
ಕಾರ್ಯಕ್ರಮದ ಪೂರ್ವದಲ್ಲಿ ಮಹಾತ್ಮಾ ಗಾಂಧಿಯವರ ಭಾವಚಿತ್ರಕ್ಕೆ ಮಾಜಿ ಸಚಿವರಾದ ಶ್ರೀ ವೀರಕುಮಾರ ಪಾಟೀಲ ಪೂಜೆ ಸಲ್ಲಿಸಿ ಪುಷ್ಪಾರ್ಚನೆಯನ್ನು ನೆರವೇರಿಸದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಾಕಾಸಾಬ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಯಬಾಗ ಮತಕ್ಷೇತ್ರ ಮುಖಂಡ ಶ್ರೀ ಮಹಾವೀರ ಮೋಹಿತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶಂಕರಗೌಡ ಪಾಟೀಲ ಸಿದ್ದರೂಡ ಬಂಡಗರ ಮಹಾತೇಶ ಮಗದ್ಮುಮ ಕೆಪಿಸಿಸಿ ಸದಸ್ಯರಾದ ಅರ್ಜುನ ನಾಯಿಕವಾಡಿ ರಾಜಕುಮಾರ ಕೋಟಗಿ ದಿಲೀಪ ಜಮಾದಾರ ಕೆಪಿಸಿಸಿ ಕೊಆಡೀಟರ್ ರಾಜು ಪಾಟೀಲ ಹಾಗೂ ರಾಯಬಾಗ ಮತಕ್ಷೇತ್ರದ ಮುಖಂಡರುಗಳಾದ ಸದಾಶಿವ ದೇಶಿಂಗೆ ಹಾಗೂ ಬಾಹುಸಾಹೇಬ ಪಾಟೀಲ
ಮುಂಚೂಣಿ ಘಟಕಗಳ ಅಧ್ಯಕ್ಷರಗಳಾದ ಮಹಿಳಾ ಜಿಲ್ಲಾ ಶ್ರೀಮತಿ ನಿರ್ಮಲಾ ಪಾಟೀಲ ಜಿಲ್ಲಾ SC ಅಧ್ಯಕ್ಷ ನಾಮದೇವ ಕಾಂಬಳೆ ವಿಜಯ ಮೋಟನ್ನವರ ಸಾಬೀರ ಜಮಾದಾರ NSUI ಚೇತನ ಹೋನ್ನಗೋಳ ಯಲ್ಲಪ್ಪ ಶಿಂಗೆ, ಪ್ರಧಾನ ಕಾರ್ಯದರ್ಶಿ DCC H .S ನಸಲಾಪೂರೆ ಅವರು ಸ್ವಾಗತಿಸಿದರು ದಿಲೀಪ್ ಜಮಾದಾರ ವಂದಿಸಿದರು