ಅಕ್ಷರದವ್ವ ಸಾವಿತ್ರೀ ಬಾಯಿಪುಲೆರವರ ಜನ್ಮದಿನಾಚರಣೆ

Share the Post Now

ಹಳ್ಳೂರ .

ದಿನ ದಲಿತರ ಬಾಳಿಗೆ ಅಕ್ಷರವೆಂಬ ಬೆಳಕನ್ನು ನೀಡಿ ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಅಕ್ಷರದವ್ವ ಶೋಷಿತರ ದ್ವನಿ ಶಿಕ್ಷಕಿ ಸಂಚಾಲಕಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ದಿಟ್ಟ ಹೋರಾಟಗಾರ್ಥಿ ಅಕ್ಷರದವ್ವ ಮಹಾತ್ಮಾ ಸಾವಿತ್ರೀ ಬಾಯಿ ಪುಲೆ ಯವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡು ಹೋಗುವುದು ಒಳ್ಳೆಯದೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಆಬದ್ಬಾಂಧವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಹೇಳಿದರು.

ಅವರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಾವಿತ್ರಿ ಬಾಯಿ ಪುಲೆ ಮಹಿಳಾ ಮಂಡಳ ಸಮ್ಮುಖದಲ್ಲಿ ನಡೆದ ಸಾವಿತ್ರೀ ಬಾಯಿ ಪುಲೆಯವರ 194 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಆಗಿನ ಕಾಲದಲ್ಲಿ ಮೆಲ್ಜಾತಿಯವರಿಗೆ, ಪುರುಷರಿಗೆ ಮಾತ್ರ ಶಿಕ್ಷಣ ಕಲಿಸುವ ವ್ಯವಸ್ಥೆವಿತ್ತು ಶಿಕ್ಷಣ ಕಲಿಸಲು , ಹೋಗುವಾಗ ಕಿಡಗೆಡಿಗಳು ದಾರಿ ಮದ್ಯ ಕಲ್ಲು ಸಗಣೆ ಏರಚಿ ಅವಮಾನ ಮಾಡಿದರು ಶಿಕ್ಷಣ ಕಲಿಸಿ ಇಂಡಿಯಾ ಇಸ್ ಫಸ್ಟ್ ಲೇಡಿ ಟೀಚರ್ ಎಂಬ ಬಿರುದು ಪಡೆದರು. ಮಹಾನ ತಾಯಿಯನ್ನು ಮರೆಯದೆ ಸ್ಮರಿಸಬೇಕೆಂದು ಹೇಳಿದರು.

ಪಿ ಕೆ ಪಿ ಎಸ್ ಅಧ್ಯಕ್ಷ ಸುರೇಶ ಕತ್ತಿ ಮಾತನಾಡಿ ಹೆಣ್ಣೊಬ್ಬಳು ಶಾಲೆಗೆ ಹೋಗಿ ವಿದ್ಯೆಯನ್ನು ಕಲಿಯುವುದು ಆಗಿನ ಕಾಲದಲ್ಲಿ ಕನಸಿನ ಮಾತಾಗಿತ್ತು ಅಂತಹ ಕಠಿಣ ಪರಿಸ್ಥಿತಿಯಲ್ಲಿ ತಾನೂ ವಿದ್ಯೆಯನ್ನು ಕಲಿತು ಸಮಾಜದ ಹೆಣ್ಣುಮಕ್ಕಳಿಗೆ ವಿದ್ಯೆಯನ್ನು ಬೋದಿಸಿ ಜ್ಞಾನ ದಾತೆ ಸಾವಿತ್ರಿ ಬಾಯಿ ಪುಲೆಯವರು ಎಂದು ಹೇಳಿದರು.

ಪ್ರಾರಂಬದಲ್ಲಿ ಆರ್ಚಕರಾದ ಪಾವಡೆಪ್ಪ ಪೂಜಾರಿ.ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಹೊಸಟ್ಟಿ.ಹಾಗೂ ಸಾವಿತ್ರಿ ಬಾಯಿ ಪುಲೆ ಮಹಿಳಾ ಮಂಡಳ ಅಧ್ಯಕ್ಷೆ ಬಂದವ್ವ ಕಾಗೆ ಅವರು ಸಾವಿತ್ರಿ ಬಾಯಿ ಪುಲೆಯವರ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿದರು.

ಈ ಸಮಯದಲ್ಲಿ ಉಪಾಧ್ಯಕ್ಷೆ ಕಸ್ತೂರಿ ನಿಡೋಣಿ.ಕಾರ್ಯದರ್ಶಿ ಶೃತಿ ಕೂಲಿಗೊಡ. ರಾಮಣ್ಣ ಸುಣದೊಳಿ.ರಾಮಗೌಡ ಪಾಟೀಲ. ಹಣಮಂತ ಲೋಕನ್ನವರ. ಸಿದಮಲ ನಿಡೋಣಿ. ಸುಧೀರ ಕೌಜಲಗಿ. ಗಿರಮಲ್ಲ ಗಿರಮಲ್ಲಯ್ಯಗೊಳ. ಈರಪ್ಪ ಮುಗಳಿಹಾಳ. ರಮೇಶ ಅಥಣಿ. ಅಪ್ಪು ಸಿದ್ದಾಪೂರ.ಲಕ್ಷಣ ನಿಡೋಣಿ ಸೇರಿದಂತೆ ಸಾವಿತ್ರಿ ಬಾಯಿ ಪುಲೆ ಮಹಿಳಾ ಮಂಡಳ ಸರ್ವ ಸದಸ್ಯರು, ಹಾಗೂ ಗುರು ಹಿರಿಯರಿಯರಿದ್ದರು.

Leave a Comment

Your email address will not be published. Required fields are marked *

error: Content is protected !!