ಹಳ್ಳೂರ :ಸಾರ್ವತ್ರಿಕ ವಿಧಾನ ಸಭಾ ಅರಬಾಂವಿ ಮತಕ್ಷೇತ್ರದ ಹಳ್ಳೂರ ಗ್ರಾಮದ 9 ವಾರ್ಡಗಳಿಗೆ ಬಿ ಜೆ ಪಿ ಅಭ್ಯರ್ಥಿಯಾದ ಬಾಲಚಂದ್ರ ಜಾರಕಿಹೊಳಿ ಅವರು ಮತ ಗಟ್ಟೆಗಳಿಗೆ ಬೆಟ್ಟಿ ನೀಡಿ ಮತದಾರರಿಗೆ ಶಾಂತ ರೀತಿಯಿಂದ ನಿಂತು ಮತ ಚಲಾಯಿಸಬೇಕು. ಚುನಾವಣೆಯು ಪ್ರಜಾಪ್ರಭುತ್ವದ ದೊಡ್ಡ ಹಬ್ಬವಿದ್ದಂತೆ ಮತದಾನ ಮಾಡುವ ಮೂಲಕ ಪ್ರತಿಯೊಬ್ಬರೂ ತನ್ನ ಕರ್ತವ್ಯ ನಿಭಾಯಿಸಬೇಕು.ಬಿಸಿಲು ಹೆಚ್ಚಾಗಿದ್ದರು ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದೊಂದು ಖುಷಿಪಡುವ ವಿಷಯವಾಗಿದೆ. ರಾಜ್ಯದಲ್ಲಿಯೇ ಬಿ ಜೆ ಪಿ ಹೆಚ್ಚು ಸ್ಥಾನ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.ಹಳ್ಳೂರ ಗ್ರಾಮದಲ್ಲಿ 9 ವಾರ್ಡಗಳಿದ್ದು ಒಟ್ಟು 8400 ಮತಗಳಿದ್ದು,6075 ಮತದಾರರು ಮತಗಳನ್ನು ಚಲಾಯಿಸಿದ್ದಾರೆ. ಒಟ್ಟಾರೆ ಪ್ರತೀಶತ 72.32 ರಷ್ಟು ಮತದಾನವಾಗಿದೆ.





