ಹೌದು ಬೆಳಗಾವಿ ರಾಜಕಾರಣ ಅಂದ್ರೆ ಬೇರೇನೇ ಇದೆ ರಾಜ್ಯದಲ್ಲಿ ಯಾವುದೇ ಸರಕಾರ ಬರಲಿ ಇಲ್ಲಿ ನಡೆಯುವ ತಂತ್ರ ರಣ ತಂತ್ರ ಯಾರಿಗೂ ಊಹಿಸಲು ಸಾಧ್ಯವಿರದ ರೀತಿಯಲ್ಲಿ ಚಕ್ರವ್ಯೂಹವನ್ನು ರಚಸಿರುತ್ತಾರೆ ರಾಜ್ಯದಲ್ಲಿ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರ ಗಳನ್ನು ಹೊಂದಿರುವ ಎರಡನೇ ಜಿಲ್ಲೆ ಆಗಿದೆ.
ಒಟ್ಟು 18 ವಿಧಾನಸಭಾ ಕ್ಷೇತ್ರ ಗಳನ್ನು ಹೊಂದಿದೆ.
ಅದರಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅತೀ ಹೆಚ್ಚು ಸ್ಥಾನ ಗಳನ್ನು ಗೆದ್ದು ಬಿಗಿತ್ತು
ಆದರೆ ಕಳೆದ ಬಾರಿ ಅಥಣಿ ವಿಧಾನಸಭಾ ಕ್ಷೇತ್ರ ದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಅವರ ವಿರುದ್ದ ಕೆಲವೇ ಕೆಲವು ಮತಗಳಲ್ಲಿ ಸೋಲನ್ನು ಅನುಭವಿಸಿದ್ದರು ಹಾಗೇನೇ ಕಾಗವಾಡ ಮತಕ್ಷೇತ್ರದಿಂದ ಸವದಿಯವರ ಕುಚುಕು ಗೆಳೆಯ ರಾಜು ಕಾಗೆ ಸಹಿತ ಸೋಲುಂಡಿದ್ದರು.
ಮುಂದೆ ಬರು ಬರುತ್ತಾ ರಾಜ್ಯದಲ್ಲಿ ರಾಜಕೀಯ ಚಿತ್ರಣವೇ ಬದಲಾಗುತ್ತಾ ಹೋಯಿತು ಸಮ್ಮಿಶ್ರ ಸರಕಾರ ಒಂದೆ ವರ್ಷದಲ್ಲಿ ಬಿದ್ದು ಹೋಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು ಜಿಲ್ಲೆಯಲ್ಲಿ 4-5 ಮಂತ್ರಿಗಳು, ಹಲವರು ನಿಗಮಗಳ ಅಧ್ಯಕ್ಷರಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಅಧಿಕಾರ ಗದ್ದುಗೆಯನ್ನು ಏರಿದರು
ಆದರೆ ಈಗಿನ 2023ರ ಚುನಾವಣೆ ಯ ಟ್ರೆಂಡ್ ನೋಡುವ ಪ್ರಕಾರ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿ ಬಿಟ್ಟಿದೆ
ಅಥಣಿ ಮತಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಅವರ ಆಪ್ತ ಮಹೇಶ್ ಕುಮಠಳ್ಳಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು ಆದರೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೈ ತಪ್ಪಿದೆ
ಸವದಿಯವರು ತಮ್ಮ ಕ್ಷೇತ್ರ ಅಥಣಿ ಅಷ್ಟೇ ಅಲ್ಲದೆ ರಾಯಬಾಗ. ಕಾಗವಾಡ.ಕುಡಚಿ. ತೇರದಾಳ ಮತಕ್ಷೇತ್ರಗಳಲ್ಲಿ ತನ್ನದೇಯಾದ ವರ್ಚಸ್ಸುನ್ನು ಕಾಯ್ದುಕೊಂಡಿರುವ ಸವದಿ ಕುಟುಂಬ ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ
ಒಂದು ವೇಳೆ ಲಕ್ಷ್ಮಣ ಸವದಿಯವರು ಬಿಜೆಪಿ ಪಕ್ಷದಿಂದ ಒಂದು ಕಾಲು ಹಿಂದೆ ಸರಿದರೆ ಸಾಕು ಈ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದು ಕಾಂಗ್ರೆಸ್ ಪಕ್ಷಕ್ಕೆ ಜಯದ ಸುಲಭ ದಾರಿಯಾಗಬಹುದು. ಇನ್ನು ಸವದಿಯವರು ಇದೇ ಪಕ್ಷದಲ್ಲಿ ಮುಂದೆವರೆಯುತ್ತಾರಾ?ಅಥವಾ ಕಾಲಕ್ಕೆ ತಕ್ಕಂತೆ ತಮ್ಮ ರಾಜಕೀಯ ಭವಿಷ್ಯಕೊಸ್ಕರ ಬೇರೆ ಪಕ್ಷದ ಕಡೆ ಮುಖ ಮಾಡುತ್ತಾರಾ ಎಂದು ಕಾದನೋಡಬೇಕಾಗಿದೆ
ಮತ್ತೊಂದು ಇಂಟ್ರಸ್ಟಿಂಗ್ ಸುದ್ಧಿ ಏನೆಂದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ತಮ್ಮ ರಾಜಕೀಯ ಹಿಡಿತ ಕಾದುಕೊಳ್ಳಲು ತಮದೇ ಪಕ್ಷದಲಿರುವ ನಾಯಕರನ್ನು ಸೋಲಿಸಲು ಒಳಒಳಗೆ ಸಂಚುರೂಪಿಸುತ್ತಿದ್ದಾರೆ.