ಬೆಳಗಾವಿ, ಸಂದೇಶ
ಬೆಳಗಾವಿ ಜಿಲ್ಲೆಯ ಅತ್ಯಂತ ಕುತೂಹಲ ಮೂಡಿಸಿರಿರುವ ಕ್ಷೇತ್ರ ಹಾಗೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕ್ಷೇತ್ರ ಕುಡಚಿ ವಿಧಾನ ಸಭಾ ಮತ ಕ್ಷೇತ್ರ ಅದು ಕುಡಚಿ
ನಾಳೆ ದಿ.29.01.2022 ರಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ನಳಿನಕುಮಾರ್ ಕಟೀಲ್ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರ ಪುತ್ರ ಸಂಸದ ಬಿ ವೈ ರಾಘವೇಂದ್ರ ಅವರು ಕ್ಷೇತ್ರದಲ್ಲಿ ಬಾಗಿಯಾಗಲಿದ್ದಾರೆ
ಬೆಳಗ್ಗೆ 10 ಗಂಟೆಗೆ ನಳಿನ್ ಕುಮಾರ್ ಕಟೀಲ್, ಬಿ ವೈ ರಾಘವೇಂದ್ರ ಹಾಗೂ ಕುಡಚಿ ಶಾಸಕ ಪಿ ರಾಜೀವ್ ಅವರು ಅಲಖನೂರಿನ ಕಾರ್ಯಾಲಯದಲ್ಲಿ ಮಾನ್ಯ ಪ್ರಧಾನಿ ಮಂತ್ರಿಗಳ ಮನ್ ಕೀ ಬಾತ್ ಕಾರ್ಯಕ್ರಮವನ್ನು ವಿಕ್ಷಣೆ ಮಾಡಲಿದ್ದಾರೆ
ನಂತರ ಶಾಸಕರ ಕಾರ್ಯಾಲಯದಿಂದ ಹಾರೋಗೆರಿ ಪಟ್ಟಣದ ಹಾಗೂ ವಿವಿಧ ಗ್ರಾಮಗಳಲ್ಲಿ ರಾಜ್ಯಾಧ್ಯಕ್ಷರ ಹಾಗೂ ಸಂಸದರು ಹಾಗೂ ಶಾಸಕರ ಸಮ್ಮುಖದಲ್ಲಿ ಬೈಕ್ ರಾಲಿ ನಡೆಯಲಿದೆ
ಜಿಲ್ಲೆಯಲ್ಲಿ ಕುಡಚಿ ಶಾಸಕ ಪಿ ರಾಜೀವ್ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಹಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ವಾಗುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೀಲನ್ ಕುಮಾರ್ ಅವರು ಸ್ಪಷ್ಟನೆ ನೀಡುತ್ತಾರಾ ಹಾಗೂ ಇದೆ ಕ್ಷೇತ್ರ ದಲಿ ಶಾಸಕ ಪಿ ರಾಜೀವ್ ಅವರು ಸ್ಪರ್ಧೆ ಮಾಡುತ್ತರಾ ಎಂದು ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ