ಬೆಳಗಾವಿ. ಅಥಣಿ
ವರದಿ-ರವಿ ಬಿ ಕಾಂಬಳೆ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದ “ಆಕಾಶ ಮಹಾದೇವ ಮಿರ್ಜಿ” (22) ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ಯೆಯಾಗಿದೆ.
ಅಥಣಿಯ SSMS ಕಾಲೇಜನಲ್ಲಿ ಕಾಮರ್ಸ್ ವಿಭಾಗದ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ನಿನ್ನೆ ರಾತ್ರಿ ತಾಂವಶಿ ಗ್ರಾಮದ ಅನಂತಪೂರ ರಸ್ತೆ ಪರಮಾನಂದ ತೋಟ ಹತ್ತಿರ ನೇಣಿಗೆ ಶರಣಾಗಿದ್ದಾನೆ.
ತಾಂವಶಿ ಗ್ರಾಮದ ಮಹಾದೇವ ಮಿರ್ಜಿ ಅವರಿಗೆ ಒಬ್ಬನೇ ಮಗನಾಗಿದ್ದು ತಂದೆ ಮಹಾದೇವ ಮಿರ್ಜಿ ಮೂರು ವರ್ಷದ ಹಿಂದೆ ಆಕಸ್ಮಿಕವಾಗಿ ಹೃದಯಾಘಾತದಿಂದ ನಿಧನ ಹೊಂದಿದ್ದು ಕುಟುಂಬ ನಿಭಾಯಿಸುವ ಸಂಪೂರ್ಣ್ ಜವಾಬ್ದಾರಿ ಆಕಾಶ್ ಮೇಲೆವಿತ್ತು.
ಈಗ ಗಂಡನನ್ನು ಮತ್ತು ಮಗನನ್ನು ಕಳೆದುಕೊಂಡ ಮೃತ ಆಕಾಶ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ತನಿಖೆಯಿಂದ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.