ವರದಿ ರವಿ ಬಿ ಕಾಂಬಳೆ
ಜಯಮಂಗಲಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ಜಲಸಮಾಧಿ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ವೀರಾಪುರದಲ್ಲಿ ಘಟನೆ.
ವೀರಾಪುರ ಗ್ರಾಮದ ಬಳಿ ಹರಿಯುವ ಜಯಮಂಗಲಿ ನದಿಗೆ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು.
ಚೆಕ್ ಡ್ಯಾಂನಲ್ಲಿದ್ದ ನೀರಿನಲ್ಲಿ ಈಜಲು ಹೋಗಿದ್ದ ಐವರು ಬಾಲಕರು.
ಇಬ್ಬರು ಈಜು ಬರದೆ ನದಿಯಲ್ಲಿ ಮುಳುಗಿ ಸಾವು.
8 ವರ್ಷದ ಬಾಲಕಿ ಪ್ರಿಯಾಂಕಾ, 9 ವರ್ಷದ ಬಿಂದು ಮೃತ ದುರ್ದೈವಿಗಳು.
ಮೃತರಿಬ್ಬರು ಸಹೋದರಿಯರು.
ಮೃತರು ಕೆಂಪಾಪುರ ಗ್ರಾಮದ ಬಾಬು ಹಾಗೂ ಲಕ್ಷ್ಮೀನಾರಾಯಣ್ ಅವರ ಮಕ್ಕಳು.
ಉಳಿದ ಮೂವರ ರಕ್ಷಣೆ.
ನದಿಯ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯಿಂದ ಮೂವರ ರಕ್ಷಣೆ.
ಇಂದು ಮಧ್ಯಾಹ್ನ 3ಗಂಟೆಗೆ ನಡೆದ ಘಟನೆ.
ಕೊಡಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.