ವರದಿ:ಸಚಿನ ಕಾಂಬ್ಳೆ .ಕಾಗವಾಡ
ಕಾಗವಾಡ: ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು ಎರಡು ನೂರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ದಿನಂಪ್ರತಿ ತೆರಳುತ್ತಾರೆ .ಆದರೆ ಕೆಲ ಕಡೆಗಳಲ್ಲಿ ಬಸ್ ಚಾಲಕರು ಶಾಲಾ ವಿದ್ಯಾರ್ಥಿಗಳನ್ನ ಕಂಡರೇ ಸಾಕು ಯರ್ರಾಬಿರ್ರಿ ಓಡಿಸಿಕೊಂಡು ಹೋಗಿಯೇ ಬಿಡುತ್ತಾರೆ. ಬಸ್ ನಿಲುಗಡೆಗೆ ಅವಕಾಶ ಇದ್ದರೂ ಬಸ್ ನಿಲುಗಡೆ ಮಾಡುವದಿಲ್ಲ ಇದರಿಂದಾಗಿ ಬಡ ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ತೆರಳಿ ಶಾಲಾಕಾಲೇಜುಗಳಿಗೆ ಹೋಗಲು ಅನುಕೂಲ ಇಲ್ಲದ್ದರಿಂದ ಶಾಲೆಗೆ ಹೋಗುವದನ್ನ ಮೊಟಕುಗೊಳಿಸಿ ಮನೆಗೆ ಹಿಂದಿರುಗುವ ಪರಿಸ್ಥಿತಿಯಲ್ಲಿ ಇದ್ದಾರೆ.
ಹೀಗಾಗಿ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಗವಾಡ ತಾಲ್ಲೂಕಿನ ಲೋಕುರ ಗ್ರಾಮದಲ್ಲಿ ಎಲ್ಲ ಶಾಲಾಕಾಲೇಜು ವಿದ್ಯಾರ್ಥಿಗಳು ಸೇರಿಕೊಂಡು ಬಸ್ ನಿಲುಗಡೆಗೆ ಆಗ್ರಹಿಸಿ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಬಸ್ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಂತರ ಅಲ್ಲಿಯ ಮುಖಂಡರು ಸೇರಿಕೊಂಡು ಬರುವ ಎಲ್ಲ ಬಸ್ ಗಳಲ್ಲಿ ಕಳುಹಿಸಿ ಕೊಟ್ಟಿದ್ದಾರೆ.
ಇನ್ನು ಪತ್ರಕರ್ತರು ದೂರವಾಣಿ ಮೂಲಕ ಕಾಗವಾಡ,ಅಥಣಿ,ವಿಜಯಪುರ ಬಸ್ ವ್ಯವಸ್ಥಾಪಕರಿಗೆ ಸಂಪರ್ಕಿಸಿದಾಗ ನಾವು ಎಲ್ಲ ಬಸ್ ಚಾಲಕರಿಗೆ ಕಡ್ಡಾಯವಾಗಿ ಬಸ್ ನಿಲುಗಡೆ ಮಾಡುವಂತೆ ಆದೇಶ ನೀಡಿದ್ದೇವೆ.ಒಂದು ವೇಳೆ ಬಸ್ ನಿಲುಗಡೆ ಮಾಡದಿದ್ದರೆ ಅಂತವರ ವಿರುದ್ದ ದೂರು ನೀಡಿದರೆ ಶೀಸ್ತು ಕ್ರಮ ಜರುಗಿಸಲಾಗುವದು ಎಂದು ಹೇಳಿದರು.
ಬಾಕ್ಸ್:ದಿನಾಲೂ ಲೋಕುರ ಗ್ರಾಮದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ವಿದ್ಯಾರ್ಥಿ/ವಿಧ್ಯಾರ್ಥಿನಿಯರು ಶಾಲಾಕಾಲೇಜುಗಳಿಗೆ ತೆರಳುತ್ತಾರೆ.ಆದರೆ ಬಸ್ ಚಾಲಕರು ಇಲ್ಲಿ ವಾಹನ ನಿಲುಗಡೆ ಮಾಡುವದಿಲ್ಲ.ಮಾಡಿದರೂ ಇಬ್ಬರು ಅಥವಾ ಮೂರು ಜನ ವಿದ್ಯಾರ್ಥಿಗಳನ್ನ ಹತ್ತಿಸಿಕೊಂಡು ಹೋಗುತ್ತಾರೆ ಇದರಿಂದಾಗಿ ಹಿಂದೆ ಉಳಿದ ಅನೇಕ ವಿದ್ಯಾರ್ಥಿಗಳು ಅಲ್ಲೇ ಉಳಿಯುತ್ತಾರೆ ಹೀಗಾಗಿ ಸಂಭಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವದರ ಜೊತೆಗೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಲಾಗುವದು
-ಪ್ರಕಾಶ ಕಾಂಬ್ಳೆ ದಸಂಸ ಮುಖಂಡ
