ಮಹಾಲಿಂಗಪುರ .
ಸತ್ಯ ನಿಷ್ಠೆ ಪ್ರಾಮಾಣಿಕತೆ ಯಿಂದ ಕೆಲಸ ಕಾರ್ಯ ಮಾಡುತ್ತಾ ದೇವರ ನಾಮಸ್ಮರಣೆ ಮಾಡಿದರೆ ಮನಸ್ಸು ಏಕಾಗ್ರತೆಗೊಂಡು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆಂದು ಶ್ರೀಮಂತ ಮಹಾರಾಜರು ಹೇಳಿದರು.
ಅವರು ರಬಕವಿ ಬನಹಟ್ಟಿ ತಾಲೂಕಿನ ಬಿಸನಾಳ ಗ್ರಾಮದ ಶ್ರೀ ಮಾಧವಾನಂದ ಪ್ರಭೂಜಿ ಅವರ ಆಶ್ರಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಜಾತಿ ಮತ ಪಂಥ ಧರ್ಮದ ಹೆಸರಿನಲ್ಲಿ ಬೇಧ ಭಾವ ಮಾಡದೆ ಎಲ್ಲರೂ ಒಂದಾಗಿ ಬಾಳಬೇಕು ಸತ್ಯವನ್ನು ಅಲ್ಲಗಳೆಯದೆ ಯಾವುದೆ ಆಸೆಗಾಗಿ ಒಬ್ಬರ ಮನಸ್ಸು ನೋಯಿಸಿ ಹೀನ ಕೃತ್ಯ ಮಾಡದೆ ಸತ್ಯದ ದಾರಿಯಲ್ಲಿ ನಡೆದವರಿಗೆ ಮೋಕ್ಷ ದೊರೆಯುತ್ತದೆ. ಪಾಪ ಕರ್ಮ ಮಾಡಿ ದೇವರಲ್ಲಿ ಪ್ರಾರ್ಥಿಸಿದರೆ ದೇವರು ಒಲೆಯುದಿಲ್ಲ ಕೊನೆಗೆ ಬೆನ್ನು ಹತ್ತಿ ಬರೋದು ಒಳ್ಳೇದು ಕೆಟ್ಟದ್ದು ಮಾತ್ರ ಪರೋಪಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಮುರಿಗೆಪ್ಪ ಮಾಲಗಾರ ಅವರು ವಿಶೇಷ ಸನ್ಮಾನಿತರಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿ ಯಾವುದೂ ಆಸೆ ಇಟಕ್ಕೊಂಡು ಸಮಾಜ ಪುಣ್ಯದ ಕೆಲಸ ಕಾರ್ಯ ಮಾಡದೆ ಪಲಾ ಪೇಕ್ಷೆವಿಲ್ಲದೇ ಮಾಡಿದರೆ ತಕ್ಕ ಪ್ರತೀ ಪಲ ಸಿಗುತ್ತದೆ. ಇತ್ತೀಚಿಗೆ ಯುವಕರು ಮೊಬೈಲ ಟಿ ವಿ ಗೆ ಮಾರು ಹೋಗಿ ಸತ್ಸಂಗ ಕಡೆ ಗಮನ ಹರಿಸುತ್ತಿಲ್ಲ ತಾಯಿ ತಂದೆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸತ್ಸಂಗ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರೆ ಮಾತ್ರ ಮಕ್ಕಳು ಉನ್ನತ ಮಟ್ಟದ ಸ್ಥಾನ ಮಾನ ಪಡೆಯುತ್ತಾರೆ.
ಗುರುವಿನ ದಯೆ ಒಂದಿದ್ದರೆ ಏನೆಲ್ಲ ಸಾಧಿಸಬಹುದು ಎಂದು ಹೇಳಿದರು.ಪ್ರಾರಂಭದಲ್ಲಿ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಅವರನ್ನು ಶ್ರೀ ಮಾಧವಾನಂದ ಆಶ್ರಮ ಕಮೀಟಿ ಹಾಗೂ ಗ್ರಾಮದ ಗುರು ಹಿರಿಯರು ಸನ್ಮಾನಿಸಿ ಗೌರವಿಸಿದರು. ಈ ಸಂಧರ್ಬದಲ್ಲಿ ರಾಮಪ್ಪ ಹೊಸೂರ. ಅರ್ಜುನ ಸಣ್ಣಕ್ಕಿ. ಬಸವರಾಜ ಶಿರೋಳ. ಮಹಾಲಿಂಗ ಹಳ್ಳೂರ. ಮಾನಿಂಗ ಶಿರೋಳ. ಶಂಕ್ರೆಪ್ಪ ಹುಣಶ್ಯಾಳ. ಶಂಕರ ಬಡಲಿ. ಮಹಾಲಿಂಗ ಹೊಸೂರ.ಬಸವರಾಜ ಕೊಪ್ಪದ. ಶಿವಲಿಂಗ ಬನಾಜ. ನಾಗಪ್ಪ ನಾಯಿಕ. ಶಿವಾಜಿ ಚನ್ನಾಳ. ಮುರಿಗೆಪ್ಪ ಹೊಸಟ್ಟಿ. ಶಿವನಾಯಿಕ ನಾಯಿಕ. ದರೆಪ್ಪ ಬ್ಯಾಕುಡ. ಸೇರಿದಂತೆ ಗ್ರಾಮಸ್ಥರು ಶ್ರೀ ಮಾಧವಾನಂದ ಕಮಿತಿಯವರಿದ್ದರು.ಕಾರ್ಯಕ್ರಮವನ್ನು ಶಿಕ್ಷಕ ಶ್ರೀಶೈಲ ಹುಕ್ಕೇರಿ ನಿರೂಪಿಸಿ,ವಂದಿಸಿದರು.