ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರ ರಾಜ್ಯದ ನೋಡುಗರ ಕಣ್ಣು ಈಗ ಯಮಕನಮರಡಿ ಮತ ಕ್ಷೇತ್ರದ ಮೇಲೆ ಎನ್ನುವಂತೆ ಇದೆ.
ಏಕೆಂದರೆ ಹೋದ ಚುನಾವಣೆಯಲ್ಲಿ ಬರೀ 2500 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿಯಾದ ಮಾರುತಿ ಅಷ್ಟಗಿ ಅವರನ್ನು ಹಿಂದೆ ಹಾಕಿ ಜಯಭೇರಿ ಗಳಿಸಿದ ಸತೀಶ್ ಜಾರಕಿಹೊಳಿಯುವರು ಇಂದು ಮತ್ತೆ ಅದೇ ಮತ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದರ ಮೂಲಕ ಮತ್ತೆ ಚುನಾವಣೆಯ ಅಖಾಡಕ್ಕೆ ಇಳಿದಂತಾಯಿತು .
ಈ ಸಲವೂ ಕೂಡ ನನ್ನ ಕ್ಷೇತ್ರದಲ್ಲಿ ಮತ್ತೆ ಜಯಭೇರಿ ಸಾಧಿಸುವೆ ಚುನಾವಣೆ ಎಂದ ಮೇಲೆ ಸೋಲು ಗೆಲುವು ಇದ್ದೇ ಇರುತ್ತದೆ.
ಆದರೆ ನನಗೆ ನನ್ನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ನೋಡಿದರೆ ಯಾವುದೇ ಮತದಾರರು ನನ್ನ ಕೈಯನ್ನು ಬಿಡುವುದಿಲ್ಲ ಆದ್ದರಿಂದ ನಾನು ಇವತ್ತು ನಾಮನಿರ್ದೇಶನ ಮಾಡುವ ಸಮಯದಲ್ಲಿ ಯಾವುದೇ ಜನರನ್ನು ಕೂಡಿಸದೆ ಸರ್ಕಾರದ ನಿಯಮಕ್ಕೆ ಬಂದನಾಗಿ ನನ್ನ ಕರ್ತವ್ಯವನ್ನು ಇವತ್ತು ಮಾಡಿರುವೆ
ಮುಂದಿನ ದಿನಮಾನಗಳಲ್ಲಿ ಅಂದರೆ ಈ ವರ್ಷದ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ .
ಆದ್ದರಿಂದ ದಯಮಾಡಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮತವನ್ನು ನೀಡಿ .
ಆರಿಸಿಕೊಡಿ. ಎಂದು ಕೇಳಿಕೊಂಡರು.