ಮಕ್ಕಳ ಹಿತದೃಷ್ಠಿಯಿಂದ ಪಾಲಕರು ಹಿತಮಿತವಾಗಿ ಮೊಬೈಲ್ ಬಳಸಿ:ಬಬಲಾದಿ ಮಠದ ಚಕ್ರವರ್ತಿ ಶ್ರೀ ಸಿದ್ಧರಾಮ ಸ್ವಾಮೀಜಿ
ವರದಿ :ಸಚಿನ್ ಕಾಂಬ್ಳೆ ಬೆಳಗಾವಿ ಅಥಣಿ;-ಇಂದಿನ ದಿನಗಳಲ್ಲಿ ಮಕ್ಕಳು ಪ್ರತಿಯೊಂದನ್ನು ಅನುಕರಣೆ ಮಾಡುತ್ತಿದ್ದಾರೆ. ಮಕ್ಕಳ ಬಗ್ಗೆ ಜಾಗೃತಿವಹಿಸಬೇಕು. ತಮ್ಮ ಮಕ್ಕಳ ಹಿತ ದೃಷ್ಠಿಯಿಂದ ಪಾಲಕರು ಹಿತಮಿತವಾಗಿ ಮೊಬೈಲ್ ಬಳಸಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ದುಷ್ಪರಿಣಾಮಗಳೆ ಹೆಚ್ಚಾಗುತ್ತವೆಂದು ಬಬಲಾದಿ ಮೂಲ ಸಂಸ್ಥಾನ ಮಠದ ಚಕ್ರವರ್ತಿ ಶ್ರೀ ಸಿದ್ಧರಾಮ ಸ್ವಾಮೀಜಿ ಹೇಳಿದರು. ಗ್ರಾಮದಲ್ಲಿ ರವಿವಾರ ಜರುಗಿದ ಗಡ್ಯಾ ಮುತ್ಯಾನ ಜಾತ್ರೆಯ ಅಂಗವಾಗಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡುತ್ತಾ ತಂದೆ ತಾಯಿಗಳ ಸೇವೆ ಮಾಡುವವರಿಗೆ ಒಳ್ಳೆಯ ಭವಿಷ್ಯವಿದೆ. ಭಕ್ತಿಯಿಂದ ಗುರು […]



































































































