ಒಂದೇ ಕುಟುಂಬದ ಮೂವರ ಜಲಸಮಾಧಿ: ಓರ್ವನ ಶವ ಪತ್ತೆ, ಇನ್ನಿಬ್ಬರಿಗಾಗಿ ಶೋಧ
ಮುದ್ದೇಬಿಹಾಳ: ಸುಡುಗಾಡುಸಿದ್ದ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಅಕ್ಕ, ತಮ್ಮ ಮತ್ತು ಅಳಿಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಜಲಸಮಾಧಿಯಾಗಿರುವ ದುರಂತ ಘಟನೆ ಮುದ್ದೇಬಿಹಾಳದ ಮಹೆಬೂಬನಗರ ಬಡಾವಣೆಯಿಂದ ಹೊರಹೋಗುವ ಶಿರೋಳ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಜಲಸಮಾಧಿಯಾದವರನ್ನು ಬಸಮ್ಮ ಚಿನ್ನಪ್ಪ ಕೊಣ್ಣೂರ (20), ಆಕೆಯ ತಮ್ಮ ಸಂತೋಷ ಚಿನ್ನಪ್ಪ ಕೊಣ್ಣೂರ (18), ಮತ್ತು ಅಳಿಯ ರವಿ ಹಣಮಂತ ಕೊಣ್ಣೂರ (17) ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ನಿರಂತರ ಕಾರ್ಯಾಚರಣೆಯ ಫಲವಾಗಿ ಸಂಜೆ ವೇಳೆಗೆ ಸಂತೋಷನ ಶವ ಪತ್ತೆಯಾಗಿದೆ. […]
ಒಂದೇ ಕುಟುಂಬದ ಮೂವರ ಜಲಸಮಾಧಿ: ಓರ್ವನ ಶವ ಪತ್ತೆ, ಇನ್ನಿಬ್ಬರಿಗಾಗಿ ಶೋಧ Read More »































































