ದೇಶ

ಮೋದಿಯವರ 3.0 ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ:ಅಮಿತ್ ಶಾ

ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, “ಇಂದು, ದೇಶದಲ್ಲಿ ಬಂಡಾಯ, ಭಯೋತ್ಪಾದನೆ ಮತ್ತು ನಕ್ಸಲಿಸಂ ಕೊನೆಯ ಉಸಿರನ್ನು ಎಣಿಸುತ್ತಿದೆ.  ಮೋದಿ ಸರ್ಕಾರದ ಮೂರನೇ ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣ ಮುಕ್ತವಾಗಲಿದೆ” ಎಂದರು. 2024ರಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ದೇಶವೀಗ ನಿರ್ಧರಿಸಿದೆ.  ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ರಾಷ್ಟ್ರೀಯ ಸಮಾವೇಶದ ಗುರಿ, 2047ರ ವೇಳೆಗೆ ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಲಕ್ಷ್ಯಕ್ಕಾಗಿ ನಮ್ಮ ಬದ್ಧತೆಯನ್ನು ತೋರಿಸುವುದಕ್ಕಾಗಿ. ಈ ಸಂದೇಶದೊಂದಿಗೆ ನಮ್ಮ ಪಕ್ಷವು ದೇಶದ ಪ್ರತಿಯೊಂದು ಭಾಗವನ್ನು ತಲುಪಲಿದೆ.  ಬಿಜೆಪಿ ಮೂರನೇ ಬಾರಿಗೆ ಗೆದ್ದು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಪ್ರತಿಪಕ್ಷಗಳು ಸಾಕಷ್ಟು ಗದ್ದಲವೆಬ್ಬಿಸಿದ್ದವು.  ಆದಾಗ್ಯೂ, ಇಂದು, ವಿಧಿ 370ನ್ನು ತೆಗೆದುಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರವು ಹೊಸ ಬದಲಾವಣೆಗಳೊಂದಿಗೆ ಪ್ರಗತಿಯ ಹಾದಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ದೇಶವು ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದ್ದು, ದೇಶದ ಆರ್ಥಿಕತೆ 11 ನೇ ಶ್ರೇಣಿಯಿಂದ 5 ನೇ ಶ್ರೇಣಿಗೆ ಉನ್ನತಿ ಹೊಂದಿದೆ.  ಈ 10 ವರ್ಷಗಳಲ್ಲಾದ ಬೆಳವಣಿಗೆಯು, ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂಬುದಕ್ಕೆ ಯಾವುದೇ ಶಂಕೆಗೆ ಆಸ್ಪದ ನೀಡುವುದಿಲ್ಲ. 75 ವರ್ಷಗಳಲ್ಲಿ , ಈ ದೇಶವು 17 ಲೋಕಸಭಾ ಚುನಾವಣೆಗಳು, 22 ಸರ್ಕಾರಗಳು ಮತ್ತು 15 ಪ್ರಧಾನ ಮಂತ್ರಿಗಳಿಗೆ ಸಾಕ್ಷಿಯಾಗಿದೆ ಎಂದು ಗೃಹ ಮತ್ತು ಸಹಕಾರ ಸಚಿವರು ಹೇಳಿದರು.  ದೇಶದ ಹಿಂದಿನ ಪ್ರತಿಯೊಂದು ಸರ್ಕಾರಗಳು ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಮಾಡಲು ಪ್ರಯತ್ನಿಸಿವೆ.  ಆದರೆ ಇಂದು ಸಮಗ್ರ ಅಭಿವೃದ್ಧಿ, ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿ, ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿ ನರೇಂದ್ರ ಮೋದಿಯವರ 10 ವರ್ಷಗಳಲ್ಲಿ ಮಾತ್ರ ನಡೆದಿದೆ ಎಂದು ಯಾವುದೇ ಗೊಂದಲವಿಲ್ಲದೆ ಹೇಳಬಹುದು. ಈ 10 ವರ್ಷಗಳಲ್ಲಿ ಮೋದಿಯವರು ಸ್ವಜನಪಕ್ಷಪಾತ, ಜಾತೀಯತೆ ಮತ್ತು ತುಷ್ಟೀಕರಣವನ್ನು ತೊಡೆದುಹಾಕಲು ಕೆಲಸ ಮಾಡಿದ್ದಾರೆ. I.N.D.I ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷವು ಯಾವಾಗಲೂ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ ಮತ್ತು ಜಾತೀಯತೆಯನ್ನು ಉತ್ತೇಜಿಸಿದೆ.  ಆದರೆ, ಪ್ರಧಾನಿ ಮೋದಿಯವರು ಈ 10 ವರ್ಷಗಳಲ್ಲಿ ದೇಶದಿಂದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣ ಮತ್ತು ಜಾತೀಯತೆಯನ್ನು ತೊಡೆದುಹಾಕಲು ಮತ್ತು ಅಭಿವೃದ್ಧಿಯತ್ತ ಗಮನ ಹರಿಸಲು ಶ್ರಮಿಸಿದ್ದಾರೆ. ಮತ್ತಷ್ಟು ತೀಕ್ಷ್ಣತೆಯಿಂದ ವಾಗ್ದಾಳಿ ಮುಂದುವರೆಸಿದ ರಾಜಕೀಯ ಚಾಣಕ್ಯ ಷಾ , ‘I.N.D.I ಮೈತ್ರಿಕೂಟವು ಏಳು ಕುಟುಂಬ ಆಧಾರಿತ ಪಕ್ಷಗಳ ಒಕ್ಕೂಟವಾಗಿದೆ, ಇದು ದೇಶದಲ್ಲಿ 2G, 3G ಮತ್ತು 4G  ರೂಪದಲ್ಲಿದೆ’ ಎಂದರು. “ನಾನು ಯಾವುದೇ ಮೊಬೈಲ್ ನೆಟ್ವರ್ಕ್ಗಳ ಬಗ್ಗೆ ಹೇಳುತ್ತಿಲ್ಲ, ವಿರೋಧ ಪಕ್ಷದ ಕೌಟುಂಬಿಕ ರಾಜಕಾರಣದ ಬಗ್ಗೆ ಹೇಳುತ್ತಿದ್ದೇನೆ.  2G ಎಂದರೆ ಎರಡು ತಲೆಮಾರುಗಳು, 3G ಎಂದರೆ ಮೂರು ತಲೆಮಾರುಗಳು ಮತ್ತು 4G ಎಂದರೆ ನಾಲ್ಕು ತಲೆಮಾರುಗಳು.  ಪ್ರತಿಪಕ್ಷದ ನಾಲ್ಕು ತಲೆಮಾರುಗಳು ಕೌಟುಂಬಿಕ ರಾಜಕೀಯವನ್ನು ಮಾಡುತ್ತಿವೆ.  ಈ ದೇಶದ ರಾಷ್ಟ್ರಪತಿಗಳು ಬುಡಕಟ್ಟು ಕುಟುಂಬದಿಂದ ಬಂದವರು.  ಬಡ ಬುಡಕಟ್ಟು ಜನಾಂಗದ ಮಗಳನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಪ್ರಧಾನಿ ಮೋದಿ ಮತ್ತು ಬಿಜೆಪಿ ಎಲ್ಲಾ ಬುಡಕಟ್ಟು ಜನಾಂಗದವರನ್ನು ಗೌರವಿಸಿದೆ.  ಈ ದೇಶದ ಉಪರಾಷ್ಟ್ರಪತಿ ಒಬ್ಬ ರೈತನ ಮಗ.  ಬಿಜೆಪಿಯಲ್ಲಿ ಬೂತ್ನಲ್ಲಿ ಕೆಲಸ ಮಾಡುವ ವ್ಯಕ್ತಿ ರಾಷ್ಟ್ರಪತಿಯಾಗಬಲ್ಲ ಮತ್ತು ಪ್ರಧಾನಿ ಕೂಡ ಆಗಬಹುದು.  ನಾವು ನಮ್ಮ ಪಕ್ಷವನ್ನು ಪ್ರಜಾಸತ್ತಾತ್ಮಕ ಪಕ್ಷವಾಗಿ ಇಟ್ಟುಕೊಂಡಿರುವ ಕಾರಣ, ಬಿಜೆಪಿ ಪಕ್ಷದಲ್ಲಿ ಮಾತ್ರ ಈ ಸಾಧ್ಯತೆಯಿದೆ” ಎಂದರು.

ಮೋದಿಯವರ 3.0 ಅವಧಿಯಲ್ಲಿ ದೇಶವು ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ:ಅಮಿತ್ ಶಾ Read More »

ತಾರೆ ಜಮೀನ್ ಪರ್ ಅವರ ‘ಸ್ಪಾರ್ಕ್ ಆಫ್ ಕ್ಯೂರಿಯಾಸಿಟಿ’ ಕಾರ್ಯಕ್ರಮ ಕ್ಕೆ ದಶಕದ ಅತ್ಯುತ್ತಮ ಸಿ ಎಸ್‌ ಆರ್  ಯೋಜನೆ” ಪ್ರಶಸ್ತಿ

– ಎಸ್.ಎಂ.ಎಕ್ಸ್ – ಸಿಎಸ್ಆರ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ  3.0 ರಲ್ಲಿ ರವಿಶಂಕರ್ ಗುರೂಜಿ ಅವರಿಂದ ಪ್ರಶಸ್ತಿ ಪ್ರಧಾನ ಬೆಂಗಳೂರು, ; ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಡೆದ ಎಸ್.ಎಂ.ಎಕ್ಸ್ ಸಿಎಸ್ಆರ್ ಲೀಡರ್‌ಶಿಪ್ ಶೃಂಗಸಭೆ 3.0 ರಲ್ಲಿ ತಾರೆ ಜಮೀನ್ ಪರ್‌ನ ಪ್ರಮುಖ ಯೋಜನೆಯಾದ ಸಿನೊಪ್ಸಿಸ್ ಇಂಡಿಯಾದಿಂದ ಬೆಂಬಲಿತವಾಗಿರುವ ‘ಕುತೂಹಲ ಕಿಡಿ’  “ದಶಕದ ಅತ್ಯುತ್ತಮ ಸಿಎಸ್‌ಆರ್ ಪರಿಣಾಮ ಬೀರುವ ಯೋಜನೆ” ಎಂಬ ಪ್ರಶಸ್ತಿಗೆ ಭಾಜವಾಗಿದೆ. ಸಿನೊಪ್ಸಿಸ್ ಇಂಡಿಯಾ ಸಂಸ್ಥೆಯ ಹಿರಿಯ ಆರ್ಕಿಟೆಕ್ಟ್  ಬಿ.ಯು. ಚಂದ್ರಶೇಖರ್, ತಾರೇ ಜಮೀನ್ ಪರ್ ಸಂಸ್ಥೆಯ ಸಂಸ್ಥಾಪಕ ದಿನೇಶ ಬಾಡಗಂಡಿ, ಸಂಸ್ಥೆಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾದ ಅಭಿಜಿತ

ತಾರೆ ಜಮೀನ್ ಪರ್ ಅವರ ‘ಸ್ಪಾರ್ಕ್ ಆಫ್ ಕ್ಯೂರಿಯಾಸಿಟಿ’ ಕಾರ್ಯಕ್ರಮ ಕ್ಕೆ ದಶಕದ ಅತ್ಯುತ್ತಮ ಸಿ ಎಸ್‌ ಆರ್  ಯೋಜನೆ” ಪ್ರಶಸ್ತಿ Read More »

ಶಬರಿಮಲೆ- ಹದಿನೆಂಟು ಮೆಟ್ಟಿಲ ಬಳಿಯ ಕಲ್ಲುಕಂಬಗಳೇ ಜನಜಂಗುಳಿಗೆ ಕಾರಣ ಎಂದ ಪೊಲೀಸರುಶಬರಿಮಲೆ ಡಿಸೆಂಬರ್ 17 ಶಬರಿಮಲೆ ಯಾತ್ರೆ ಪ್ರಾರಂಭವಾಗುತ್ತಲೇ ಶಬರಿಮಲೆಯ ಅವ್ಯವಸ್ಥೆಗಳ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. 18 ಗಂಟೆಗಳ ಕಾಲ ಸಾಲಿನಲ್ಲಿ ನಿಂತರೂ ಅಯ್ಯಪ್ಪನ ದರ್ಶನ ಪಡೆಯದೇ ಭಕ್ತರು ಮರಳಿ ಬರುತ್ತಿದ್ದಾರೆ. ಈ ನಡುವೆ ಶಬರಿಮಲೆಯ 18 ಮೆಟ್ಟಿಲ ಬಳಿ ನಿರ್ಮಿಸಲಾಗಿರುವ ಕಲ್ಲುಕಂಬಗಳೇ ಈ ಬಾರಿ ಜನಜಂಗುಳಿಗೆ ಪ್ರಮುಖ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಕಳೆದ ನವೆಂಬರ್ 16 ರಂದು ಋತುಮಾನದ

Read More »

ಪಶ್ಚಿಮ ಬಂಗಾಳದ ಎಸ್.ಟಿ.ಸಿ ಭೈಕುಂತಪುರ ತರಬೇತಿ ಕೇಂದ್ರದಲ್ಲಿ ಕನ್ನಡತಿಯರ ಸಂಭ್ರಮ

ಕೊಲ್ಕತ್ತಾ ; ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಪಶ್ಚಿಮ ಬಂಗಾಳದ ಎಸ್.ಟಿ.ಸಿ ಭೈಕುಂತಪುರ ತರಬೇತಿ ಕೇಂದ್ರದಲ್ಲಿ ಕನ್ನಡತಿಯರು ಕನ್ನಡ ಬಾವುಟವನ್ನು ಪ್ರದರ್ಶಿಸಿ ಪರಸ್ಪರ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಕನ್ನಡಾಭಿಮಾನವನ್ನು ಮೆರೆದು ಸಂಭ್ರಮಿಸಿದ್ದಾರೆ. ನಾವು ನಮ್ಮ ನಾಡನ್ನು ಬಿಟ್ಟು ದೇಶ ಸೇವೆಗಾಗಿ ಬೇರೆಡೆಗೆ ತೆರಳಿದ್ದರೂ ನಮ್ಮಲ್ಲಿಯ ತಾಯ್ನುಡಿ ಪ್ರೇಮ ಯಾವತ್ತೂ ಹಾಗೆಯೇ ಇರುತ್ತದೆ ಎಂದು ಶಿರಗಾವಿಯ ಅಕ್ಷತಾ ಬಾಬನ್ನವರ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಎಸ್.ಟಿ.ಸಿ ಭೈಕುಂತಪುರ ತರಬೇತಿ ಕೇಂದ್ರದಲ್ಲಿ ಕನ್ನಡತಿಯರ ಸಂಭ್ರಮ Read More »

ಕೇರಳ:ನಿಫಾ ವೈರಸ್ ಸೋಂಕು ಏರಿಕೆ : ಶಾಲೆಗಳಿಗೆ ರಜೆ ಘೋಷಣೆ

ನಿಫಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ನಿಫಾ ವೈರಸ್ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಇದೀಗ ರಾಜ್ಯ ಸರಕಾರವು ಕಂಟೆನ್ ಮೇಂಟ್ ವಲಯಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದೆ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ಅಂದಾಜು ಒಂದು ಸಾವಿರ ಮಂದಿಯನ್ನು ಗುರುತಿಸಲಾಗಿದ್ದು ಅದರಲ್ಲಿ 80ಕ್ಕೂ ಅಧಿಕ ಮಂದಿಯ ಪರಿಸ್ಥಿತಿ ಗಂಭೀರವಾಗಿದೆ.

ಕೇರಳ:ನಿಫಾ ವೈರಸ್ ಸೋಂಕು ಏರಿಕೆ : ಶಾಲೆಗಳಿಗೆ ರಜೆ ಘೋಷಣೆ Read More »

68ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಸುಪ್ರೀಂಕೋರ್ಟ್ನ ಹಿರಿಯ ವಕೀಲ!

ದೆಹಲಿ:  ಭಾರತದ ಮಾಜಿ ಸಾಲಿಸೀಟರ್ ಜನರಲ್ ಹಾಗೂ ಹಿರಿಯ ವಕೀಲರಾದ ಹರೀಶ್ ಸಾಳ್ವೆ (68) ಅವರು 3ನೇ ಮದುವೆ ಆಗಿ ಆಶ್ಚರ್ಯ ಮೂಡಿಸಿದ್ದಾರೆ. ಇವರು 2020ರಲ್ಲಿ ತಮ್ಮ ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದರು. ಹರೀಶ್ ಸಾಳ್ವೆ ಅವರು ಇತ್ತೀಚೆಗೆ ಲಂಡನ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ಟ್ರಿನಾ ಎನ್ನುವರನ್ನು ವಿವಾಹವಾಗಿದ್ದಾರೆ. ಕೆಲವೇ ಕೆಲ ಸಂಬಂಧಿಕರ ನಡುವೆ ಹರೀಶ್ ಸಾಳ್ವೆ-ಟ್ರಿನಾ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನಿಸಿದರು. ಈ ವಿವಾಹ ಸಮಾರಂಭದಲ್ಲಿ ಭಾರತದ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ

68ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಸುಪ್ರೀಂಕೋರ್ಟ್ನ ಹಿರಿಯ ವಕೀಲ! Read More »

ಲಾಲುಗೆ ಸ್ಪೆಷಲ್ ಮಟನ್‌ ಅಡುಗೆ ರೆಡಿ ಮಾಡಿ ಉಣಬಡಿಸಿದ ರಾಹುಲ್‌ ಗಾಂಧಿ

ನವದೆಹಲಿ: ರಾಜಕೀಯ ಜೀವನದಲ್ಲಿ ಸದಾ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ವೈಯಕ್ತಿಕ ಜೀವನವನ್ನು ಅಷ್ಟೇ ಚೆನ್ನಾಗಿ ಎಂಜಾಯ್ ಮಾಡುತ್ತಾರೆ. ಬೈಕ್ ರೇಡ್, ಸ್ಟ್ರೀಟ್ ವಾಕ್, ಫ್ರೆಂಡ್ಸ್ ಪಾರ್ಟಿ, ಸಂಡೇ ವಿಸಿಟ್ ಅಂತಾ ಎಂಜಾಯ್ ಮಾಡ್ತಿರ್ತಾರೆ. ಇದೀಗ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್  ಅವರೊಂದಿಗೆ ಸೇರಿ ಸ್ಪೆಷಲ್ ಚಂಪಾರಣ್ ಮಟನ್ ಅಡುಗೆ ಮಾಡಿ ಉಣಬಡಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 6.44 ನಿಮಿಷಗಳ ಈ ವೀಡಿಯೋದಲ್ಲಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ

ಲಾಲುಗೆ ಸ್ಪೆಷಲ್ ಮಟನ್‌ ಅಡುಗೆ ರೆಡಿ ಮಾಡಿ ಉಣಬಡಿಸಿದ ರಾಹುಲ್‌ ಗಾಂಧಿ Read More »

ವಾಣಿಜ್ಯ ಬಳಕೆಯ LPG ಬೆಲೆ 158 ರೂ. ಇಳಿಕೆ

ನವದೆಹಲಿ: ಗೃಹ ಬಳಕೆಯ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ. ಸಬ್ಸಿಡಿ ಘೋಷಣೆ ಮಾಡಿದ ಬೆನ್ನಲ್ಲೇ ಈಗ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಕಡಿತಗೊಂಡಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) 19-ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 158 ರೂ. ಕಡಿತಗೊಳಿಸಿವೆ. ಹೊಸ ಬೆಲೆಗಳು ಇಂದಿನಿಂದಲೇ ಜಾರಿಗೆ ಬರಲಿವೆ. ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆಗಳು ಪ್ರತಿ ತಿಂಗಳ ಮೊದಲ ದಿನದಂದು ನಡೆಯುತ್ತವೆ. ಈ ಹಿಂದೆ ರಕ್ಷಾ ಬಂಧನದ

ವಾಣಿಜ್ಯ ಬಳಕೆಯ LPG ಬೆಲೆ 158 ರೂ. ಇಳಿಕೆ Read More »

ಆಗಸ್ಟ್ 23ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ ಪ್ರಧಾನಿ ಮೋದಿ

ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ದಿನವಾದ ಆಗಸ್ಟ್ 23ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ವಿಜ್ಞಾನಿಗಳ ಸಾಧನೆ ದೇಶದ ಪ್ರತಿಯೊಬ್ಬರಿಗೂ ತಿಳಿಯಬೇಕಿದೆ. ಚಂದ್ರಯಾನ-3 ರ ಯಶಸ್ಸಿನಿಂದ ಯುವ ಪೀಳಿಗೆಗೆ ನಿರಂತರವಾಗಿ ಪ್ರೇರಣೆ ಸಿಗಲಿದೆ ಎಂದು ಅವರು ಹೇಳಿದರು. ಕೇಂದ್ರ, ರಾಜ್ಯ ಸರ್ಕಾರ ಸಹಯೋಗದಲ್ಲಿ ಬಾಹ್ಯಾಕಾಶ, ವಿಜ್ಞಾನ ಕ್ಷೇತ್ರಕ್ಕೆ

ಆಗಸ್ಟ್ 23ನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ ಪ್ರಧಾನಿ ಮೋದಿ Read More »

modi/narendra/prime minister

ಕರ್ನಾಟಕದ ಜನರು ಸ್ಥಿರ ಸರ್ಕಾರ ತರಲು ನಿರ್ಧರಿಸಿದ್ದಾರೆ: ಮೋದಿ

ಬೈಲಹೊಂಗಲದಲ್ಲಿ ಚುನಾವಣಾ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಾ, ಅಭಿವೃದ್ಧಿ ಎಂಬ ರಸ್ತೆಯಲ್ಲಿ ದೇಶ ಮುಂದೆ ಸಾಗುತ್ತಿದೆ. ಬಿಜೆಪಿ ಸರ್ಕಾರ ಪ್ರತಿಯೊಬ್ಬರ ಏಳಿಗೆಗೆ ಶ್ರಮಿಸುತ್ತಿದೆ. ಹೀಗಾಗಿ ಜನರು ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯ ನೀಡಬೇಕು ಎಂಬುದು ಬಿಜೆಪಿಯ ಉದ್ದೇಶವಾಗಿದೆ ಎಂದು ಪ್ರಧಾನಿ ಹೇಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್​ನದ್ದು ಶಾರ್ಟ್​ಕಟ್ ರಾಜಕೀಯಕಾಂಗ್ರೆಸ್ ಹಾಗೂ ಜೆಡಿಎಸ್​ನದ್ದು ಶಾರ್ಟ್​ಕಟ್ ರಾಜಕೀಯ. ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಿ. ಈ ಎರಡು ಪಕ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಬರೀ

ಕರ್ನಾಟಕದ ಜನರು ಸ್ಥಿರ ಸರ್ಕಾರ ತರಲು ನಿರ್ಧರಿಸಿದ್ದಾರೆ: ಮೋದಿ Read More »

ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲುತ್ತೆ: ರಾಹುಲ್ ಗಾಂಧಿ

ಕೋಲಾರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುತ್ತಿದೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಪೂರ್ಣ ಬಹುಮತಗಳೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಕೋಲಾರದಲ್ಲಿ ನಡೆದ ಜೈ ಭಾರತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ 40% ಹಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೀಳಿಸಬಹುದು. ಕಳ್ಳ ಹಣದಲ್ಲಿ ಸರ್ಕಾರವನ್ನು ಕೆಡವುವ ಕೆಲಸ ಮಾಡಬಹುದು. ಬಿಜೆಪಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ ಎಂದು ಮನವಿ

ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲುತ್ತೆ: ರಾಹುಲ್ ಗಾಂಧಿ Read More »

ಮಹಾರಾಷ್ಟ್ರದ ಬಡ ವಿದ್ಯಾರ್ಥಿ ಜಿಲ್ಲಾಧಿಕಾರಿ ಆದ ಸತ್ಯ ಕಥೆ

ಒಂದು ಶಾಲೆಯಲ್ಲಿ ದಿನದ ಪಾಠಗಳು ನೆಡೆಯುತ್ತಿತ್ತು ಎಂದಿನಂತೆ…….ಹೊರಗೆ ಜೋರಾಗಿ ಮಳೆ ಬರುತ್ತಿತ್ತು,….4ನೇ ತರಗತಿಯಲ್ಲಿ ಪಾಠದ ಮದ್ಯ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು – ನಿಮ್ಮೆಲ್ಲರಿಗೂ ನಾನು 100-100 ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ? ಒಬ್ಬ ವಿದ್ಯಾರ್ಥಿ ಹೇಳಿದ – ನಾನು ವಿಡಿಯೋ ಗೇಮ್‌ ಖರೀದಿಸುತ್ತೇನೆ..ಇನ್ನೊಬ್ಬ ಹೇಳಿದ – ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ.ಮತ್ತೊಬ್ಬ ಹೇಳಿದ- ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ.ಬೇರೆಯೊಬ್ಬ ಹೇಳಿದ – ನಾನು ಚಾಕೊಲೇಟ್ಗಳನ್ನು ಖರೀದಿಸುತ್ತೇನೆ. .ಆದರೆ.ಒಂದು ಮಗು ಆಲೋಚನೆಯಲ್ಲಿ ಮುಳುಗಿತ್ತು….ಅದನ್ನು ಗಮನಿಸಿದ

ಮಹಾರಾಷ್ಟ್ರದ ಬಡ ವಿದ್ಯಾರ್ಥಿ ಜಿಲ್ಲಾಧಿಕಾರಿ ಆದ ಸತ್ಯ ಕಥೆ Read More »

ದೇಶದ ಜನಪ್ರಿಯ ಪ್ರದಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ನಡೆಯಿತು

ಬೆಳ್ಳಗ್ಗಿನಿಂದ ಸಂಜೆವರೆಗಿನ ಮಾಧ್ಯಮಗಳ ಲೈವ್ ಇಲ್ಲ..ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಗೆ ಅವಕಾಶ ಇಲ್ಲ …ದೊಡ್ಡ ಮಟ್ಟದಲ್ಲಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ…ರಸ್ತೆ ಹೆದ್ದಾರಿಗಳ ಟ್ರಾಫಿಕ್ ಜಾಮ್ ಇಲ್ಲ..ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಇಲ್ಲ…ಮಗನ ಅಭಿಮಾನಿಗಳ ಘೋಷಣೆಗಳ ಕೂಗಿಲ್ಲ… ಅಂತ್ಯಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಜಾಗದ ನೆಲಸಮ ಇಲ್ಲ…ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ ಇಲ್ಲ…ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ… ಬೆಳಗ್ಗೆ 6 ಗಂಟೆ ಹೊತ್ತಿಗೆ ವಿಷಯ ಗೊತ್ತಾಯ್ತು. 9:30 ಅಷ್ಟು ಹೊತ್ತಿಗೆ ಎಲ್ಲಾ ಕೆಲಸಗಳೂ ಮುಗಿದು…ಕೇವಲ 3:30 ಗಂಟೆಯಲ್ಲಿ ಎಲ್ಲ ಕಾರ್ಯಗಳನ್ನು ಮುಗಿಸಲಾಯಿತು ಸಮಾನ್ಯರಲ್ಲಿ ಸಾಮಾನ್ಯರಂತೆ

ದೇಶದ ಜನಪ್ರಿಯ ಪ್ರದಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ನಡೆಯಿತು Read More »

ಮೋದಿಜಿಯವರ ತಾಯಿ ಹೀರಾ ಬೇನ್ ವಿಧಿವಶ. ಯಾವುದೇ ಕಾರ್ಯಕ್ರಮ ನಿಲ್ಲಿಸಬೇಡಿ ಪ್ರಧಾನಿ ಮೋದಿ ಸೂಚನೆ

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಯವರ ತಾಯಿ ವಿಧಿವಶರಾಗಿದ್ದರು ಕೂಡ ಮೋದಿ ಕರ್ತವ್ಯ ಪಾಲನೆ ಮೆಚ್ಚುವಂತದ್ದು. ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳನ್ನು ಯಥಾ ಸ್ಥಿತಿ ನಡೆಸುವಂತೆ ಕಾಯಕಯೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸೂಚನೆಯನ್ನು ನೀಡಿದ್ದಾರೆ. ಮೋದಿಜಿ ಅವರು ಕೂಡ ಇಂದು ಪಶ್ಚಿಮ ಬಂಗಾಳದಲ್ಲಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಬೇಕಿತ್ತು. ಅದನ್ನು ರದ್ದು ಮಾಡಿ 11:30ಕ್ಕೆ ವರ್ಚುಯಲ್ ಮುಖಾಂತರ ದೆಹಲಿಯಿಂದಲೇ ಪಶ್ಚಿಮ ಬಂಗಾಳದ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮಾಹಿತಿ: ಬಿಲ್ ಕಾಂಬ್ಳೆ

ಮೋದಿಜಿಯವರ ತಾಯಿ ಹೀರಾ ಬೇನ್ ವಿಧಿವಶ. ಯಾವುದೇ ಕಾರ್ಯಕ್ರಮ ನಿಲ್ಲಿಸಬೇಡಿ ಪ್ರಧಾನಿ ಮೋದಿ ಸೂಚನೆ Read More »

ನಟ ಸುಶಾಂತ ಸಿಂಗ್ ಆತ್ಮಹತ್ಯೆ ಅಲ್ಲ, ಮರ್ಡರ್ ಆಸ್ಪತ್ರೆಯ ಮಾಜಿ ನೌಕರನ ಹೇಳಿಕೆ

ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಸುಶಾಂತ್ ಮರಣೋತ್ತರ ಪರೀಕ್ಷೆ ನಡೆದಿತ್ತು ಬಾಲಿವುಡ್ ಖ್ಯಾತ ನಟರಲ್ಲಿ ಒಬ್ಬರಾದ ಸುಶಾಂತ್ ಸಿಂಗ್ ರಜಪೂತ್ ಅವರು ಎಂದಿಗೆ ನಮ್ಮನ್ನು ಅಗಲಿ 2 ವರ್ಷಗಳೇ ಕಳೆದಿವೆ ಮುಂಬೈ ನ ತಮ್ಮ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಶಾಂತ್ ಇಡೀ ದೇಶವೇ ನಟನ ಸಾವಿನ ಸುದ್ದಿ ಕೇಳಿ ಬೆಚ್ಚಿ ಬಿದ್ದಿತು ಇಂದಿಗೂ ಕೊಲೆ ಅಥವಾ ಆತ್ಮಹತ್ಯೆನೋ ಅಂತಾ CBI ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಆದರೆ ಸುಶಾಂತ್ ನ ಮರಣೋತ್ತರ ಪರೀಕ್ಷೆ ನಡೆಸಿದ ಸಿಂಬದಿಯೊಬ್ಬ ಇದು

ನಟ ಸುಶಾಂತ ಸಿಂಗ್ ಆತ್ಮಹತ್ಯೆ ಅಲ್ಲ, ಮರ್ಡರ್ ಆಸ್ಪತ್ರೆಯ ಮಾಜಿ ನೌಕರನ ಹೇಳಿಕೆ Read More »

ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ : ಯೋಧರಿಗೆ ಗಾಯಗಳು

ಭಾರತ : ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಎರಡು ದೇಶಗಳ ಸೈನಿಕರು ಗಾಯಗೊಂಡಿದ್ದಾರೆ. ಎಂಬ ಮಾಹಿತಿಯು ತಡವಾಗಿ ಬೆಳಕಿಗೆ ಬಂದಿದೆ. ಡಿಸೆಂಬರ್ 9 ರಂದು ತವಾಂಗ್ ಬಳಿ ಈ ಘಟನೆ ನಡೆದಿದ್ದು, ಜೂನ್ 15, 2020ರ ಘಟನೆಯ ನಂತರ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಕೆಲವು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಮತ್ತು ಅನೇಕರು ಗಾಯಗೊಂಡರು. ಈ ಕಾಳಗ ದಲ್ಲಿ ಚೀನಾದ ಹಲವು ಸೈನಿಕರು ಕೂಡ

ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ : ಯೋಧರಿಗೆ ಗಾಯಗಳು Read More »

error: Content is protected !!