ಕೊಲ್ಕತ್ತಾ ; ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಪಶ್ಚಿಮ ಬಂಗಾಳದ ಎಸ್.ಟಿ.ಸಿ ಭೈಕುಂತಪುರ ತರಬೇತಿ ಕೇಂದ್ರದಲ್ಲಿ ಕನ್ನಡತಿಯರು ಕನ್ನಡ ಬಾವುಟವನ್ನು ಪ್ರದರ್ಶಿಸಿ ಪರಸ್ಪರ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಕನ್ನಡಾಭಿಮಾನವನ್ನು ಮೆರೆದು ಸಂಭ್ರಮಿಸಿದ್ದಾರೆ. ನಾವು ನಮ್ಮ ನಾಡನ್ನು ಬಿಟ್ಟು ದೇಶ ಸೇವೆಗಾಗಿ ಬೇರೆಡೆಗೆ ತೆರಳಿದ್ದರೂ ನಮ್ಮಲ್ಲಿಯ ತಾಯ್ನುಡಿ ಪ್ರೇಮ ಯಾವತ್ತೂ ಹಾಗೆಯೇ ಇರುತ್ತದೆ ಎಂದು ಶಿರಗಾವಿಯ ಅಕ್ಷತಾ ಬಾಬನ್ನವರ್ ತಿಳಿಸಿದ್ದಾರೆ.